ಭಾರತ ರಾಜಧರ್ಮ ಅನುಸರಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್

Vaccine Maitri: ಮಾಜಿ ಕ್ರಿಕೆಟಿಗರಾದ ವಿವಿಯನ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆ್ಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನಿಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಭಾರತ ‘ರಾಜಧರ್ಮ’ ಅನುಸರಿಸುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಭಾರತ ರಾಜಧರ್ಮ ಅನುಸರಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್
ಭಾರತವನ್ನು ವೆಸ್ಟ್​ ಇಂಡೀಸ್ ಕ್ರಿಕೆಟಿಗರು ಶ್ಲಾಘಿಸಲು ಕಾರಣವೇನು?
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 15, 2021 | 11:47 AM

ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಯನ್ನು ಜಗತ್ತಿನ ಇತರ ದೇಶಗಳಿಗೆ ಹಂಚುತ್ತಿರುವ ಭಾರತದ ನಡೆಗೆ ವಿಶ್ವಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಭಾರತವು ರಾಜಧರ್ಮವನ್ನು ಪಾಲಿಸುತ್ತಿದೆ. ಇದೇ ನಿಜವಾದ ನಾಯಕನ ಕರ್ತವ್ಯ ಎಂದು ವಿವಿಧ ದೇಶಗಳ ನಾಯಕರು, ಖ್ಯಾತನಾಮರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಭಾರತದ ‘ವ್ಯಾಕ್ಸಿನ್ ಮೈತ್ರಿ’ ಆಶಯವು ದೇಶವನ್ನು ಹಲವು ದೇಶಗಳ ಜತೆ ಸಂಬಂಧ ಸುಧಾರಣೆಗೆ ಕಾರಣವಾಗುತ್ತಿದೆ. ಅದೀಗ ವೆಸ್ಟ್ ಇಂಡೀಸ್ ಸರದಿಯಾಗಿದೆ. ವಿಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆ್ಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಅವರುಗಳು ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಭಾರತ ಕೊರೊನಾ ಲಸಿಕೆಯನ್ನು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ, ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಕೆರಿಬಿಯನ್ ಪ್ರಾಂತ್ಯದ ದ್ವೀಪರಾಷ್ಟ್ರಗಳಿಗೂ ಭಾರತದ ಕೊರೊನಾ ಲಸಿಕೆ ದೊರೆತಿದೆ. ಮಾಜಿ ಕ್ರಿಕೆಟಿಗರಾದ ಸರ್ ವಿವಿಯನ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆ್ಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಭಾರತ ‘ರಾಜಧರ್ಮ’ ಅನುಸರಿಸುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಆ್ಯಂಟಿಗುವಾ ಮತ್ತು ಬರ್ಬುಡಾ ದೇಶಗಳಿಗೆ ಭಾರತ 1,75,000 ಡೋಸ್ ಕೊರೊನಾ ಲಸಿಕೆಯನ್ನು ವಿತರಿಸಿದೆ. ಈ ಪೈಕಿ 40,000 ಡೋಸ್ ಲಸಿಕೆಗಳು ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ ಬರ್ಬುಡಾಗೆ ಉಚಿತವಾಗಿ ನೀಡಿದೆ. ಗಯಾನಾಕ್ಕೆ 80,000 ಡೋಸ್ ಲಸಿಕೆಯನ್ನು ವ್ಯಾಕ್ಸಿನ್ ಮೈತ್ರಿ ಯೋಜನೆಯಿಂದ ದೊರೆತಿದೆ. ಅಲ್ಲದೆ, ಜಮೈಕಾ, ಬಾರ್ಬೊಡಾಸ್, ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ ಮತ್ತು ನವಿಸ್ ದ್ವೀಪಸಮೂಹಗಳಿಗೂ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ ತಲುಪಿದೆ. ಸ್ವಯಂ ಕೊರೊನಾ ಲಸಿಕೆ ಉತ್ಪಾದಿಸುವಷ್ಟು ಮುಂದುವರೆಯದ ಈ ದೇಶಗಳು ಭಾರತದ ಉಪಕಾರವನ್ನು ಮನಸಾ ಶ್ಲಾಘಿಸಿವೆ.

ಭಾರತದ ಈ ಉಪಕಾರವನ್ನು ಗುರುತಿಸಿ ತಮ್ಮ ಧನ್ಯವಾದಗಳನ್ನು ಅರ್ಪಿಸಿರುವ ಈ ಕ್ರಿಕೆಟಿಗರು, ‘ನಮ್ಮ ದೇಶಕ್ಕೆ ಕೊರೊನಾ ಲಸಿಕೆ ಒದಗಿಸಿದ್ದಕ್ಕೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೊದಿ ಅವರಿಗೆ ಧನ್ಯವಾದಗಳು. ಈ ಸಂಬಂಧ ಮುಂದಿನ ದಿನಗಳಲ್ಲೂ ಅತ್ಯಂತ ಸುಭದ್ರವಾಗಿ ಮುಂದುವರೆಯಲಿ ಎಂದು ನಾವು ಆಶಿಸುತ್ತೇವೆ. ನನ್ನ ದೇಶದ ಜನರಲ್ಲಿ ಮಮತೆ ಮತ್ತು ಪ್ರೀತಿಯನ್ನು ಇಟ್ಟಿ ಭಾರತದ ಜನತೆಗೂ ನಮ್ಮ ಧನ್ಯವಾದಗಳು’ ಎಂದು ಸರ್ ವಿವಿಯನ್ ರಿಚರ್ಡ್​ ಹೇಳಿದ್ದಾರೆ.

ಪಾಕಿಸ್ತಾನಕ್ಕೂ ಲಸಿಕೆ ನೀಡಿದೆ ಭಾರತ

ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿವೆ. ಬೇರೆ ಬೇರೆ ದೇಶಗಳಿಗೆ ಕೊವಿಡ್​ 19 ಲಸಿಕೆ ವಿತರಿಸಿದ್ದ ಭಾರತ ಇದೀಗ ತನ್ನ ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಲಸಿಕೆ ಪೂರೈಸಿದೆ. ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಿರುವ ಭಾರತ, ಗ್ಲೋಬಲ್ ಅಲೆಯನ್ಸ್ ಫಾರ್ ವ್ಯಾಕ್ಸಿನ್ ಇಮ್ಯೂನೈಜೇಶನ್ (GAVI) ಅಡಿ ಲಸಿಕೆ ನೀಡಿದೆ.

ಈ ಮೂಲಕ ಪಾಕಿಸ್ತಾನಕ್ಕೆ ಮೇಡ್ ಇನ್ ಇಂಡಿಯಾ ಲಸಿಕೆ ತಲುಪಿದ್ದು, ಅಲ್ಲಿನ ಪ್ರಜೆಗಳಿಗೆ ಕೊರೊನಾ ಲಸಿಕೆ ವಿತರಿಸುವ ಕಾರ್ಯವನ್ನು ಪಾಕಿಸ್ತಾನ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಭಾರತದಲ್ಲಿ ಈಗಾಗಲೇ ಮತ್ತೊಂದು ಹಂತದ ಲಸಿಕೆ ಪೂರೈಕೆ ಆರಂಭಿಸಿರುವ ಭಾರತ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 45 ವರ್ಷ ಮೇಲ್ಪಟ್ಟು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಸಜ್ಜಾಗಿದೆ. ಇದೆಲ್ಲದರ ಜೊತೆಜೊತೆಗೆ ಹಲವು ದೇಶಗಳಿಗೆ ಲಸಿಕೆ ಪೂರೈಸುತ್ತಿರುವುದರಿಂದ ಭಾರತದ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ತಯಾರಾಗಲಿವೆ: ಆರೋಗ್ಯ ಸಚಿವ ಹರ್ಷ ವರ್ಧನ್ ಘೋಷಣೆ

ಜಾಹೀರಾತು ಫಲಕ ಅಳವಡಿಸಿ ಭಾರತ, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಕೆನಡಾ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ