ಭಾರತದಲ್ಲಿ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ತಯಾರಾಗಲಿವೆ: ಆರೋಗ್ಯ ಸಚಿವ ಹರ್ಷ ವರ್ಧನ್ ಘೋಷಣೆ
ಭಾರತವು ಕೊರೊನಾ ವಿರುದ್ಧ 2 ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. 71 ದೇಶಗಳಿಗೂ ಲಸಿಕೆ ಒದಗಿಸಿದೆ. ಕೆನಡಾ, ಬ್ರೆಜಿಲ್ ಹಾಗೂ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೂ ಭಾರತ ಕೊರೊನಾ ಲಸಿಕೆ ಕಳುಹಿಸಿದೆ.
ಭೋಪಾಲ್: ಕೊವಿಡ್-19 ವಿರುದ್ಧ ಈಗಾಗಲೇ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿರುವ ಭಾರತದಲ್ಲಿ, ಮುಂದೆ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಇಂದು (ಮಾರ್ಚ್ 13) ಘೋಷಣೆ ಮಾಡಿದ್ದಾರೆ. ಈವರೆಗೆ ಒಟ್ಟು 1.84 ಕೋಟಿ ಕೊವಿಡ್-19 ಲಸಿಕೆ ಡೋಸ್ಗಳನ್ನು ಜನರಿಗೆ ನೀಡಲಾಗಿದೆ. 23 ಕೋಟಿ ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಕೊರೊನಾ ವಿರುದ್ಧ 2 ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. 71 ದೇಶಗಳಿಗೂ ಲಸಿಕೆ ಒದಗಿಸಿದೆ. ಕೆನಡಾ, ಬ್ರೆಜಿಲ್ ಹಾಗೂ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೂ ಭಾರತ ಕೊರೊನಾ ಲಸಿಕೆ ಕಳುಹಿಸಿದೆ ಎಂದು ರಾಷ್ಟ್ರೀಯ ಪರಿಸರ ಆರೋಗ್ಯ ಅಧ್ಯಯನ ಸಂಸ್ಥೆಯ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿ ಹರ್ಷ ವರ್ಧನ್ ಮಾತನಾಡಿದ್ದಾರೆ.
ಅರ್ಧ ಡಜನ್ಗೂ ಹೆಚ್ಚು ಲಸಿಕೆಗಳು ಭಾರತದಲ್ಲಿ ಬರಲಿವೆ ಎಂದು ಹೇಳಿದ ಅವರು ಶನಿವಾರ ಬೆಳಗಿನವರೆಗೆ ಒಟ್ಟು 1.84 ಕೋಟಿ ಲಸಿಕೆ ಡೋಸ್ಗಳನ್ನು ವಿತರಿಸಲಾಗಿದೆ. ನಿನ್ನೆ (ಮಾರ್ಚ್ 12) 20 ಲಕ್ಷ ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ಭಾರತವನ್ನು ನಿರ್ಮಾಣ ಮಾಡಲು, ಭಾರತವನ್ನು ವಿಶ್ವ ಗುರುವಾಗಿಸಲು ಬಯಸಿದ್ದಾರೆ. ಲಸಿಕೆ, ವಿಜ್ಞಾನವನ್ನು ಗೌರವಿಸಿ. ಲಸಿಕೆ ವಿಚಾರದಲ್ಲಿ ರಾಜಕೀಯ ತರುವುದನ್ನು ಕೊನೆಗೊಳಿಸಬೇಕಾಗಿದೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ನಾವು ಈ ದೂರ ಕ್ರಮಿಸಿದ್ದೇವೆ. 2020 ಕೊವಿಡ್-19 ಹೊರತಾಗಿ ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷವೂ ಆಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
A remarkable start to the day in Bhopal where I inaugurated the New Green Campus of National Institute for Research in Environmental Health.
Research efforts at the illustrious institute will pave the way in formulating strategies for sustainable management of the environment. pic.twitter.com/6QLY2wY5eK
— Dr Harsh Vardhan (@drharshvardhan) March 13, 2021
ಮೊದಲು ಕೊವಿಡ್-19 ಪರೀಕ್ಷೆ ಮಾಡಲು ಭಾರತದಲ್ಲಿ ಒಂದೇ ಪ್ರಯೋಗಾಲಯವಿತ್ತು. ಆದರೆ, ಈಗ ಒಟ್ಟು 2,412 ಕೊವಿಡ್ ಪರೀಕ್ಷಾ ಕೇಂದ್ರಗಳಿವೆ. ಕೊರೊನಾ ರೂಪಾಂತರ ತಡೆಗಟ್ಟಲು ಕ್ರಮ ಕೈಗೊಂಡ ಮೊದಲ ದೇಶ ಭಾರತ. ಕೆಲವರು ಗೊಂದಲ ಸೃಷ್ಟಿಮಾಡಲು ಪ್ರಯತ್ನಿಸಿದರು. ಆದರೆ, ಸತ್ಯ ಯಾವತ್ತೂ ಸೋಲುವುದಿಲ್ಲ ಎಂದು ಹರ್ಷ ವರ್ಧನ್ ಹೇಳಿದ್ದಾರೆ.
ಕೊರೊನಾ ಬಗ್ಗೆ ಕಾಳಜಿ ಇಲ್ಲದಿರುವುದು ಹಾಗೂ ಅಪಾರ್ಥ ಮಾಡಿಕೊಂಡಿರುವುದು ವೈರಾಣು ಹರಡುವಿಕೆ ಮತ್ತೆ ಹೆಚ್ಚಲು ಕಾರಣವಾಗಿದೆ. ಲಸಿಕೆ ಬಂದಿದೆ ಹಾಗಾಗಿ ಎಲ್ಲಾ ಸರಿಯಾಗಿದೆ ಎಂದು ಜನರು ಯೋಚಿಸುತ್ತಿದ್ದಾರೆ. ಎಲ್ಲರೂ ಕೊವಿಡ್-19 ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಆರೋಗ್ಯ ಸಚಿವರು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮದೇ ಕೊರೊನಾ ಲಸಿಕೆ ಪಡೆಯಿರಿ ಎಂದು ಆಫರ್ ನೀಡುತ್ತಿದೆ ಚೀನಾ; ಕ್ವಾಡ್ ಶೃಂಗಸಭೆ ಬಳಿಕ ಅಚ್ಚರಿಯ ಬೆಳವಣಿಗೆ!
ಈ ವರ್ಷದಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್ಗಳು ಇಂದು ದಾಖಲು; ಮಹಾರಾಷ್ಟ್ರದ ಹಲವು ನಗರಗಳು ಮತ್ತೆ ಲಾಕ್
Published On - 8:30 pm, Sat, 13 March 21