ಮಹಾರಾಷ್ಟ್ರ ಸರ್ಕಾರ ಬೆಳಗಾವಿಗೆ ಬರಬೇಕಾಗುತ್ತೆ.. ಬೆದರಿಕೆ ಹಾಕಿದ ಶಿವಸೇನೆ ಮುಖಂಡ ಸಂಜಯ್ ರಾವತ್
ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲಾ ಶಕ್ತಿಯೊಂದಿಗೆ ಬೆಳಗಾವಿಗೆ ಬರಬೇಕಾಗುತ್ತೆ. ಬೆಳಗಾವಿಗೆ ಮಹಾರಾಷ್ಟ್ರದ ಸರ್ವಪಕ್ಷ ನಿಯೋಗ ಕಳಿಸಲು ಮಹಾರಾಷ್ಟ್ರ ಸಿಎಂ, ಡಿಸಿಎಂಗೆ ನಾನು ಮನವಿ ಮಾಡುತ್ತೇನೆ ಎಂದು ಮುಂಬೈನಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವತ್ ಗೊಡ್ಡು ಬೆದರಿಕೆ ಹಾಕಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಕರವೇ-ಶಿವಸೇನೆ ಮುಖಂಡರ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಶಿವಸೇನೆಯ ಸಂಜಯ್ ರಾವತ್ ಗೊಡ್ಡು ಬೆದರಿಕೆ ಹಾಕಿದ್ದಾರೆ. ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲಾ ಶಕ್ತಿಯೊಂದಿಗೆ ಬೆಳಗಾವಿಗೆ ಬರಬೇಕಾಗುತ್ತೆ. ಬೆಳಗಾವಿಗೆ ಮಹಾರಾಷ್ಟ್ರದ ಸರ್ವಪಕ್ಷ ನಿಯೋಗ ಕಳಿಸಲು ಮಹಾರಾಷ್ಟ್ರ ಸಿಎಂ, ಡಿಸಿಎಂಗೆ ನಾನು ಮನವಿ ಮಾಡುತ್ತೇನೆ ಎಂದು ಮುಂಬೈನಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವತ್ ಗೊಡ್ಡು ಬೆದರಿಕೆ ಹಾಕಿದ್ದಾರೆ.
ಸರ್ವಪಕ್ಷ ನಿಯೋಗ ಬೆಳಗಾವಿಗೆ ಭೇಟಿ ನೀಡಿ ಮರಾಠಿಗರ ಬೆಂಬಲಕ್ಕೆ ನಿಲ್ಲಲಿ. ಬೆಳಗಾವಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಮುಂಬೈ, ಮಹಾರಾಷ್ಟ್ರಕ್ಕೆ ಕರ್ನಾಟಕ, ಬೆಳಗಾವಿ ಜನರು ಬರಬಹುದು. ಆದ್ರೆ ಮಹಾರಾಷ್ಟ್ರದ ಜನರು ಬೆಳಗಾವಿಗೆ ಹೋಗಬೇಕೆಂದರೆ ತಡೀತೀರಿ. ಲಾಠಿ ಚಾರ್ಜ್ ಮಾಡಿ ನಮಗೆ ಬಂದೂಕು ತೋರಿಸುತ್ತೀರಿ. ನಮ್ಮ ಕಡೆ ಬಂದೂಕು ಇಲ್ವಾ? ಇದೆಯಲ್ಲಾ. ಭಾಷಾ ವಿವಾದ ದೊಡ್ಡದು ಮಾಡಬಾರದು, ಇದು ದೇಶದ ಆಂತರಿಕ ವಿಚಾರ. ಪಶ್ಚಿಮ ಬಂಗಾಳದಲ್ಲಿ ನಡೆಯುವ ಹಿಂಸಾಚಾರ ಕೇಂದ್ರ ಸರ್ಕಾರಕ್ಕೆ ಕಾಣುತ್ತೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಹಿಂಸಾಚಾರ ಕೇಂದ್ರ ಸರ್ಕಾರಕ್ಕೆ ಕಾಣುತ್ತೆ. ಕಳೆದ ಎಂಟು ದಿನಗಳಿಂದ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೀತಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಲುವು ನಮ್ಮದಿದೆ ಎಂದು ಸಂಜಯ್ ರಾವತ್ ಆಕ್ರೋಶಭರಿತವಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸದ್ಯ ಬೆಳಗಾವಿಯಲ್ಲಿ ಮರಾಠಿಗರಿಗೆ ತಮ್ಮ ರಕ್ಷಣೆಯ ಅಗತ್ಯವಿದೆ. ಶಿವಸೇನೆ ನಾಯಕರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಮಾಡ್ತಿದ್ದಾರೆ. ನಮ್ಮ ಶಿವಸೇನೆ ಕಾರ್ಯಾಲಯ ಮೇಲೆ ದಾಳಿ ಮಾಡ್ತಾರೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಎಲ್ಲಾ ಪಕ್ಷಗಳು ಒಗ್ಗೂಡಬೇಕು ಸಾಂಗ್ಲಿ, ಕೊಲ್ಲಾಪುರದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬೆಳಗಾವಿ ಹೋಗಬೇಕಾಗುತ್ತೆ. ಪರಿಸ್ಥಿತಿ ಬಿಗಡಾಯಿಸಿದ್ರೆ ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಜವಾಬ್ದಾರರಲ್ಲ. ಬಿಜೆಪಿ ಬೆಂಬಲಿತ ಸಂಘಟನೆಯಿಂದ ಮರಾಠಿಗರ ಮೇಲೆ ಹಲ್ಲೆ ನಡೆಸುತ್ತಿದೆ. ಬೆಳಗಾವಿ ಮೂಲದ ಮಂತ್ರಿಯೊಬ್ಬ ಹಗರಣದಲ್ಲಿ ಸಿಲುಕಿದ್ದಾನೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಸಂಜಯ್ ರಾವತ್ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಹಿರಂಗ ವಿಚಾರವನ್ನು ಪ್ರಸ್ತಾಪಿಸಿದ್ರು.
ಇದನ್ನೂ ಓದಿ: ಶಿವ ಸೇನೆ-ಕಾಂಗ್ರೆಸ್ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್ ರಾವತ್