AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವ ಸೇನೆ-ಕಾಂಗ್ರೆಸ್​ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’​ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್​ ರಾವತ್​

ಔರಂಗಜೇಬ್​ಗೆ ಇತರ ಧರ್ಮಗಳ ಬಗ್ಗೆ ಅತಿಯಾದ ದ್ವೇಷ ಇತ್ತು. ಹಿಂದು ಮತ್ತು ಸಿಖ್​ರಿಗೆ ಆತ ತುಂಬ ಹಿಂಸೆ ನೀಡಿದ್ದಾನೆ. ಔರಂಗಜೇಬನಿಗೆ ಸಂಬಂಧಪಟ್ಟ ಅವಶೇಷ, ಹೆಸರಿನ ಬಗ್ಗೆ ನಾವು ಗಮನಹರಿಸಬೇಕಿಲ್ಲ. ಅಷ್ಟಕ್ಕೂ ಔರಂಗಜೇಬ್​ ಯಾರು? ಎಂದು ಸಂಜಯ್​ ರಾವತ್​ ಪ್ರಶ್ನಿಸಿದ್ದಾರೆ.

ಶಿವ ಸೇನೆ-ಕಾಂಗ್ರೆಸ್​ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’​ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್​ ರಾವತ್​
ಸಂಜಯ್​ ರಾವತ್​
Lakshmi Hegde
| Edited By: |

Updated on: Jan 18, 2021 | 12:57 PM

Share

ದೆಹಲಿ: ಮಹಾರಾಷ್ಟ್ರದಲ್ಲಿ ಔರಂಗಾಬಾದ್​ಗೆ ಸಂಭಾಜಿನಗರ ಎಂದು ಹೆಸರಿಡುವ ವಿಚಾರಕ್ಕೆ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಔರಂಗಾಬಾದ್​ಗೆ ಸಂಭಾಜಿನಗರವೆಂದು ನಾಮಕರಣ ಮಾಡಲು ಶಿವಸೇನೆ ತುದಿಗಾಲಿನಲ್ಲಿ ನಿಂತಿದ್ದರೂ, ಅದರ ಮೈತ್ರಿ ಪಕ್ಷ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ ಸಂಜಯ್​ ರಾವತ್​, ನಮಗೇನೂ ಗೊತ್ತಿಲ್ಲ..ಔರಂಗಾಬಾದ್ ಇನ್ನು ಮುಂದೆ ಸಂಭಾಜಿನಗರ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಮಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಹಾಗೇ ಮುಂದುವರಿಯಲಿದೆ ಕೂಡ ಎಂದು ತಿಳಿಸಿದ್ದಾರೆ.

ಆದರೆ ಈ ವಿಚಾರಕ್ಕೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ನಿರ್ಧಾರವನ್ನಂತೂ ತೆಗೆದುಕೊಂಡು ಆಗಿದೆ. ಇದು ಜನರ ಭಾವನೆಗೆ ಸಂಬಂಧಪಟ್ಟ ವಿಷಯ ಆಗಿದ್ದರಿಂದ ಕಾಂಗ್ರೆಸ್ ವಿರೋಧಿಸುತ್ತಿರಬಹುದು. ನಾವು ಈ ಬಗ್ಗೆ ಚರ್ಚಿಸುತ್ತೇವೆ ಎಂದು ಸಂಜಯ್​ ರಾವತ್ ಹೇಳಿದ್ದಾರೆ.

ಸಾಮ್ನಾದಲ್ಲಿ ಅಸಮಾಧಾನ ಇನ್ನು ಔರಂಗಾಬಾದ್​ಗೆ ಸಂಭಾಜಿನಗರ ಎಂದು ನಾಮಕರಣ ಮಾಡಲು ವಿರೋಧಿಸುತ್ತಿರುವ ಕಾಂಗ್ರೆಸ್​ ಬಗ್ಗೆ ಶಿವಸೇನಾ ನಿನ್ನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಔರಂಗಾಬಾದ್ ಹೆಸರು ಬದಲಾವಣೆ ಮಾಡುವುದರಿಂದ ಮುಸ್ಲಿಂ ಸಮುದಾಯಕ್ಕೆ ಬೇಸರವಾಗಬಹುದು ಎಂಬ ಕಾರಣಕ್ಕೆ ಕೆಲವು ಜಾತ್ಯತೀತಗಳು ವಿರೋಧ ಮಾಡುತ್ತಿವೆ. ಆ ಪಕ್ಷಗಳಿಗೆ ತಮ್ಮ ವೋಟ್​ಬ್ಯಾಂಕ್​ ಬಗ್ಗೆ ಚಿಂತೆಯಾಗಿರಬಹುದು ಎಂದು ಹೇಳಿತ್ತು.

ಔರಂಗಜೇಬ್​ಗೆ ಇತರ ಧರ್ಮಗಳ ಬಗ್ಗೆ ಅತಿಯಾದ ದ್ವೇಷ ಇತ್ತು. ಹಿಂದು ಮತ್ತು ಸಿಖ್​ರಿಗೆ ಆತ ತುಂಬ ಹಿಂಸೆ ನೀಡಿದ್ದಾನೆ. ಔರಂಗಜೇಬನಿಗೆ ಸಂಬಂಧಪಟ್ಟ ಅವಶೇಷ, ಹೆಸರಿನ ಬಗ್ಗೆ ನಾವು ಗಮನಹರಿಸಬೇಕಿಲ್ಲ. ಅಷ್ಟಕ್ಕೂ ಔರಂಗಜೇಬ್​ ಯಾರು? ಅದನ್ನು ನಾವು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇವೆ. ಒಬ್ಬ ನಿಜವಾದ ಮರಾಠಿಗ, ಹಿಂದೂಗಳು ಈ ಔರಂಗಜೇಬನ ವಿಚಾರದಲ್ಲಿ ಆಸಕ್ತಿ ಹೊಂದುವ ಅಗತ್ಯವಿಲ್ಲ ಎಂದು ಕಟುವಾಗಿ ಪತ್ರಿಕೆಯಲ್ಲಿ ಬರೆಯಲಾಗಿತ್ತು.

ಶಿವಸೇನೆಯದ್ದು ಬೂಟಾಟಿಕೆ ಎಂದ ಕಾಂಗ್ರೆಸ್​ ಹಾಗೇ ಔರಂಗಾಬಾದ್​ಗೆ ಮರುನಾಮಕರಣ ಮಾಡಲು ಮುಂದಾಗಿದ್ದು ಶಿವಸೇನೆಯ ಬೂಟಾಟಿಕೆ ಎಂದು ಮಹಾರಾಷ್ಟ್ರ ಕಂದಾಯ ಸಚಿವ, ಕಾಂಗ್ರೆಸ್ ನಾಯಕ ಬಾಳಾಸಾಹೇಬ್​ ಥೋರಟ್ ಹೇಳಿದ್ದಾರೆ. ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಲ್ಲಿ ಈ ಬಗ್ಗೆ ಮಾತನಾಡದ ಶಿವಸೇನೆ ಈಗ್ಯಾಕೆ ಮಾತನಾಡುತ್ತಿದೆ ಎಂದೂ ಪ್ರಶ್ನಿಸಿದ್ದಾರೆ. ತಮ್ಮ ರಾಜಕೀಯ ಅನುಕೂಲಕ್ಕಾಗಿ ಇವರು ಔರಂಗಾಬಾದ್​ಗೆ ಬೇರೆ ಹೆಸರಿಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಠಾಕ್ರೆಗೆ ಏನೇ ಗೊಂದಲಗಳಿದ್ದರೂ ಅವರು ಕಾಂಗ್ರೆಸ್​ ಪಕ್ಷವನ್ನೇ ಪ್ರಶ್ನಿಸಬೇಕು -ಸಿ.ಟಿ. ರವಿ

Follow Us
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?