ವಾಟ್ಸ್ಆ್ಯಪ್ ಬಳಸಿ.. ಜಿಯೋಮಾರ್ಟ್ ಮೂಲಕ ಖರೀದಿ ನಡೆಸಿ!
ವಾಟ್ಸ್ಆ್ಯಪ್ ಮೂಲಕ ಹೆಚ್ಚಿನ ಶ್ರಮವಿಲ್ಲದೇ ಭಾರತೀಯ ಈ ಕಾಮರ್ಸ್ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ.

ಮುಂಬೈ: ವಾಟ್ಸ್ಆ್ಯಪ್ ಮೂಲಕವೇ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾದರೆ..? ಹೌದು, ಈ ಸೌಲಭ್ಯ ಒದಗಿಸಲು ಜಿಯೋಮಾರ್ಟ್ ಮುಂದಾಗಿದೆ. ಮುಂದಿನ 6 ತಿಂಗಳಲ್ಲಿ ನೀವು ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಕಳುಹಿಸುವ ಮೂಲಕವೇ ಜಿಯೋಮಾರ್ಟ್ನಿಂದ ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಅಂತರ್ಜಾಲ ಮಾರುಕಟ್ಟೆ ಕ್ಷೇತ್ರದಲ್ಲಿ ಅಮೆಜಾನ್ ಮತ್ತು ಫ್ಲಿಫ್ಕಾರ್ಟ್ಗಳಿಗೆ ಸೆಡ್ಡು ಹೊಡೆಯುವ ಯತ್ನಕ್ಕೆ JioMart ಮುಂದಾಗಿದೆ.
ವಾಟ್ಸ್ಆ್ಯಪ್ ಮೂಲಕ ಹೆಚ್ಚು ಶ್ರಮವಿಲ್ಲದೇ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ಹಿಂದಿನ ವರ್ಷವಷ್ಟೇ ಜಿಯೋಗೆ ಸಂಬಂಧಿಸಿದ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ ಹೂಡಿಕೆ ಮಾಡಿತ್ತು.
ಹೇಗೆ ನೆರವಾಗಲಿದೆ ವಾಟ್ಸ್ಆ್ಯಪ್? ಭಾರತದಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 40 ಕೋಟಿಗೂ ಹೆಚ್ಚು. ಇವರಿಗೆ ವಾಟ್ಸ್ಆ್ಯಪ್ ಮೂಲಕವೇ ಅಗತ್ಯ ಸಾಮಾಗ್ರಿ ಖರೀದಿಸುವ ಸೌಲಭ್ಯ ಒದಗಿಸುವುದು ಜಿಯೋಮಾರ್ಟ್ನ ಯೋಜನೆಯಾಗಿದೆ. ಅಮೆಜಾನ್, ಫ್ಲಿಫ್ಕಾರ್ಟ್ಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುವ ಬದಲು ವಾಟ್ಸ್ಆ್ಯಪ್ ಮೂಲಕವೇ ಗ್ರಾಹಕರು ಸುಲಭವಾಗಿ ಶಾಪಿಂಗ್ ಮಾಡಬಹುದು ಎಂಬುದು ರಿಲಯನ್ಸ್ನ ಯೋಜನೆಯಾಗಿದೆ. ಅಲ್ಲದೇ, ವಾಟ್ಸ್ಆ್ಯಪ್ ಬಳಸಿ ಗ್ರಾಮೀಣ ಭಾಗದಲ್ಲೂ ಆನ್ಲೈನ್ ಶಾಪಿಂಗ್ ಉತ್ತೇಜಿಸುವ ಉದ್ದೇಶ ಜಿಯೋಮಾರ್ಟ್ನದ್ದಾಗಿದೆ.
ಗೂಗಲ್ ಸರ್ಚ್ನಲ್ಲಿ ಬಂತು ವಾಟ್ಸ್ಆ್ಯಪ್ ಖಾಸಗಿ ಗ್ರೂಪ್ ಚಾಟ್ ಆಹ್ವಾನದ ಲಿಂಕ್ !