ಕೊರೊನಾ ಬಂದಮೇಲೆ ಪತ್ನಿಯನ್ನು ತಬ್ಬಿಕೊಳ್ಳಲು, ಚುಂಬಿಸಲು ಸಾಧ್ಯವಾಗಿಲ್ಲ: ಫಾರುಕ್ ಅಬ್ದುಲ್ಲಾ ಬೇಸರ
ಕೊರೊನಾ ಸೋಂಕು ದಾಂಗುಡಿ ಇಟ್ಟ ಮೇಲೆ ಜನರು ಕೈಕುಲಕಲು, ಪರಸ್ಪರ ಅಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಒಂದು ದಿನಕ್ಕೆ ಸಾವಿರ ಜನರು ಕೊವಿಡ್ನಿಂದ ಸಾಯುತ್ತಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದರು.
ದೆಹಲಿ: ಇಂದು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ತುಂಬ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದನ್ನು ಕೇಳಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ.
ಸುಮಾರು 35 ನಿಮಿಷಗಳ ಭಾಷಣದಲ್ಲಿ ಕೊರೊನಾ ಬಗ್ಗೆ ಬೇಸರ ವ್ಯಕ್ತಪಡಿಸಿದ 83 ವರ್ಷದ ಫಾರೂಕ್, ಕೊರೊನಾ ಸೋಂಕಿನಿಂದ ನನ್ನ ಜೀವನಕ್ಕೆ ಅಡ್ಡಿಯಾಗಿದ್ದಂತೂ ಸತ್ಯ. ಕೊರೊನಾ ಬಂದಾಗಿನಿಂದ ನನಗೆ ನನ್ನ ಪತ್ನಿಗೆ ಚುಂಬಿಸಲು ಸಾಧ್ಯವಾಗಿಲ್ಲ. ಇನ್ನು ತಬ್ಬಿಕೊಳ್ಳುವ ಪ್ರಶ್ನೆಯೇ ಇಲ್ಲ ಬಿಡಿ. ಇದೆಲ್ಲ ಯಾರಿಗೆ ಗೊತ್ತು? ನನ್ನ ಹೃದಯ ಇದೆನ್ನಲ್ಲ ಬಯಸುತ್ತದೆ. ಆದರೆ ಏನೂ ಮಾಡಲು ಸಾಧ್ಯವಾಗಿಲ್ಲ. ಈ ಮಾತುಗಳನ್ನು ಸುಮ್ಮನೆ ಹೇಳುತ್ತಿಲ್ಲ. ನನಗಾದ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದೇನೆ ಎಂದಿದ್ದೇನೆ.
ಕೊರೊನಾ ಸೋಂಕು ದಾಂಗುಡಿ ಇಟ್ಟ ಮೇಲೆ ಜನರು ಕೈಕುಲಕಲು, ಪರಸ್ಪರ ಅಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಒಂದು ದಿನಕ್ಕೆ ಸಾವಿರ ಜನರು ಕೊವಿಡ್ನಿಂದ ಸಾಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಆದಷ್ಟು ಬೇಗ, ಇಡೀ ಜಗತ್ತು ಕೊರೊನಾದಿಂದ ಮುಕ್ತವಾಗಿ, ಸಹಜಸ್ಥಿತಿಗೆ ಬರಲೆಂದು ಪ್ರಾರ್ಥಿಸುತ್ತೇನೆ ಎಂದೂ ಹೇಳಿದರು.
ಲಹರಿ | ಲಾಕ್ಡೌನ್ ಏಕಾಂತದಲ್ಲಿ ಮನೆಮುಂದೆ ಗಿಡ ಬೆಳೆಸಿದೆ, ಹೂ ಅರಳಿತು
Published On - 4:13 pm, Mon, 18 January 21