ಪಕ್ಷಾಂತರ ಮಾಡಿರುವ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸುವೆ: ಮಮತಾ ಬ್ಯಾನರ್ಜಿ ಘೋಷಣೆ
ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಸುವೇಂದು ಬಿಜೆಪಿ ಸೇರ್ಪಡೆ ಆಗಿದ್ದರು. ಅಂದಿನಿಂದಲೂ ಸುವೇಂದು ವಿರುದ್ಧ ಮಮತಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಸುವೇಂದು ಬಿಜೆಪಿ ಸೇರ್ಪಡೆ ಆಗಿದ್ದರು. ಅಂದಿನಿಂದಲೂ ಸುವೇಂದು ವಿರುದ್ಧ ಮಮತಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈಗ ಅವರಿಗೆ ಪಾಠ ಕಲಿಸೋಕೆ ಮುಂದಾಗಿರುವ ಮಮತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನಂದಿಗ್ರಾಮದ ಜೊತೆಗೆ.. ಕೋಲ್ಕತ್ತಾದ ಭವಾನಿಪುರದಿಂದಲೂ ಮಮತಾ ಸ್ಪರ್ಧೆ ನಾನು ನಂದಿಗ್ರಾಮದಿಂದ ಸ್ಪರ್ಧೆ ಮಾಡುತ್ತೇನೆ. ನಂದಿಗ್ರಾಮ ನನ್ನ ಅದೃಷ್ಟದ ಜಾಗ ಎಂದು ಮಮತಾ ಇಂದಿನ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಇದಲ್ಲದೆ, ಕೋಲ್ಕತ್ತಾದ ಭವಾನಿಪುರದಿಂದಲೂ ಮಮತಾ ಸ್ಪರ್ಧೆ ಮಾಡಲಿದ್ದಾರೆ.
ಈ ಹಿಂದೆಯೂ ನಂದಿಗ್ರಾಮದಿಂದ ಗೆದ್ದು ಬಂದಿದ್ದ ಮಮತಾ ಈ ಮೊದಲು ನಂದಿಗ್ರಾಮದ ನಂದಿರಂನಲ್ಲಿ ರೈತರ ಜಮೀನಿಗಾಗಿ ಮಮತಾ ಬ್ಯಾನರ್ಜಿ ಅಭಿಯಾನ ನಡೆಸಿದ್ದರು. ಇದರಿಂದಾಗಿಯೇ 2011 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಅಧಿಕಾರಕ್ಕೆ ಬಂದಿದ್ದರು.
ಬಿಜೆಪಿ ಪಾಪಗಳನ್ನು ತೊಳೆಯುವ ವಾಶಿಂಗ್ ಮಶೀನ್.. ಭ್ರಷ್ಟರನ್ನೂ ಸಾಧುಗಳನ್ನಾಗಿಸುತ್ತದೆ: ಮಮತಾ ಬ್ಯಾನರ್ಜಿ ವ್ಯಂಗ್ಯ