AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿ ಮಕ್ಕಳ್ ಮಂದ್ರಮ್​ನ ಸದಸ್ಯರು ಯಾವುದೇ ಪಕ್ಷ ಸೇರಲು ಸ್ವತಂತ್ರರು: ರಜನಿಕಾಂತ್

ಯಾವುದೇ ಪಕ್ಷಕ್ಕೆ ಸೇರಿದರೂ ಸಹ ಅವರು ತಮ್ಮ ಅಭಿಮಾನಿಗಳೇ ಆಗಿರಲಿದ್ದಾರೆ. ತಮ್ಮ ಅಭಿಮಾನಿಗಳು ಎಂದಿಗೂ ತಮ್ಮನ್ನು ಮರೆಯುವುದಿಲ್ಲ ಎಂದು ಸೂಪರ್​ ಸ್ಟಾರ್ ರಜನಿಕಾಂತ್ ತಿಳಿಸಿದ್ದಾರೆ.

ರಜನಿ ಮಕ್ಕಳ್ ಮಂದ್ರಮ್​ನ ಸದಸ್ಯರು ಯಾವುದೇ ಪಕ್ಷ ಸೇರಲು ಸ್ವತಂತ್ರರು: ರಜನಿಕಾಂತ್
ರಜನಿಕಾಂತ್ ಮತ್ತು ಕಮಲ್ ಹಾಸನ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 18, 2021 | 4:27 PM

ಚೆನ್ನೈ: ತಮ್ಮ ಪಕ್ಷದ ಕೆಲ ಸದಸ್ಯರು ಡಿಎಂಕೆ ಸೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸೂಪರ್​​ಸ್ಟಾರ್ ರಜನಿಕಾಂತ್ ‘ಯಾವುದೇ ಪಕ್ಷ ಸೇರಲು ರಜನಿ ಮಕ್ಕಳ್ ಮಂದ್ರಮ್​ನ ಸದಸ್ಯರು ಸ್ವತಂತ್ರರು’ ಎಂದಿದ್ದಾರೆ.

ಯಾವುದೇ ಪಕ್ಷಕ್ಕೆ ಸೇರಿದರೂ ಸಹ ಅವರು ನನ್ನ ಅಭಿಮಾನಿಗಳೇ ಆಗಿರಲಿದ್ದಾರೆ. ಅಭಿಮಾನಿಗಳು ಎಂದಿಗೂ ನನ್ನನ್ನು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ರಜನಿಕಾಂತ್ ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಘೋಷಿಸಿದ ನಂತರ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇತರ ಪಕ್ಷಗಳತ್ತ ಮುಖಮಾಡಿದ್ದರು.

ಚುನಾವಣಾ ಪ್ರಚಾರ: ಚಿಕ್ಕ ವಿರಾಮ ಪಡೆದ ಕಮಲ್ ಹಾಸನ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕಾಗಿ ಕಮಲ್ ​ಹಾಸನ್ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಇನ್ನು ಕೆಲ ದಿನ ಅವರು ವಿಶ್ರಾಂತಿ ಪಡೆಯಲಿದ್ದಾರೆ. 15 ದಿನಗಳಲ್ಲಿ 5000 ಕೀಮಿ ಪಯಣಿಸಿ ಪ್ರಚಾರ ನಡೆಸಿದ್ದು, ಕೆಲ ವರ್ಷಗಳ ಹಿಂದೆ ನಡೆದಿದ್ದ ಅಪಘಾತದ ನೋವು ಮರುಕಳಿಸಿದ್ದಾಗಿ ಅವರು ಕಳಿಸಿದ್ದಾರೆ. ಹಳೆಯ ಅಪಘಾತದ ನೋವಿನಿಂದ ಪಾರಾಗಲು ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಿದ್ದಾಗಿ ಕಮಲ್ ಹಾಸನ್ ತಿಳಿಸಿದ್ದಾರೆ. ಆದರೆ, ತಂತ್ರಜ್ಞಾನದ ಸಹಾಯದಿಂದ ಭೇಟಿಯಾಗುವುದಾಗಿ ಅವರು ತಿಳಿಸಿದ್ದಾರೆ.

ರಾಜಕಾರಣದಿಂದ ದೂರ ಹೋಗಬೇಡಿ, ನಿರ್ಧಾರ ಬದಲಿಸಿ: ನಟ ರಜನಿಕಾಂತ್​ಗೆ ಅಭಿಮಾನಿಗಳ ಮನವಿ

Published On - 4:27 pm, Mon, 18 January 21