ಜನರಿಗೆ ಬರೆ.. ಆದರೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಕೇಂದ್ರಕ್ಕೆ ಭರ್ಜರಿ ಲಾಭ!

2019 ರ ಏಪ್ರಿಲ್-ನವೆಂಬರ್​ ಅವಧಿಯಲ್ಲಿ ಡೀಸೆಲ್​ ಮಾರಾಟದಲ್ಲಿ ಸುಮಾರು 1 ಕೋಟಿ ಟನ್​ ಮತ್ತು ಪೆಟ್ರೋಲ್​ ಮಾರಾಟದಲ್ಲಿ ಸುಮಾರು 30 ಲಕ್ಷ ಟನ್​ ಕುಸಿತವಾಗಿತ್ತು. ಇಷ್ಟಾಗ್ಯೂ, ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಮೇಲೆ ವಿಧಿಸುವ ಅಬಕಾರಿ ಸುಂಕ ಏರಿಸಿದ ಪರಿಣಾಮ ಲಾಭಾಂಶದಲ್ಲಿ ಭಾರೀ ಏರಿಕೆ ಕಂಡಿದೆ.

ಜನರಿಗೆ ಬರೆ.. ಆದರೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಕೇಂದ್ರಕ್ಕೆ ಭರ್ಜರಿ ಲಾಭ!
ಸಾಂದರ್ಭಿಕ ಚಿತ್ರ
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 18, 2021 | 5:02 PM

ದೆಹಲಿ: ಕೊರೊನಾ ಆರ್ಭಟದಿಂದಾಗಿ 2020ರಲ್ಲಿ ಜನಜೀವನ ಸಂಪೂರ್ಣ ಏರುಪೇರಾಗಿತ್ತು. ವಾಣಿಜ್ಯ ಚಟುವಟಿಕೆ, ವಾಹನ ಸಂಚಾರ ಎಲ್ಲವೂ ಸ್ತಬ್ಧವಾಗಿತ್ತು. ವಿಪರ್ಯಾಸವೆಂದರೆ ಆರೆಂಟು ತಿಂಗಳು ಕಾಲ ವಾಹನಗಳು ರಸ್ತೆಗಿಳಿಯದಿದ್ದರೂ ಕೇಂದ್ರ ಸರ್ಕಾರ ಮಾತ್ರ ಪೆಟ್ರೋಲ್​, ಡೀಸೆಲ್​ ಮಾರಾಟದಿಂದ ಹೆಚ್ಚುವರಿಯಾಗಿ ₹ 63,000 ಕೋಟಿ ಆದಾಯ ಗಳಿಸಿರುವುದಾಗಿ ತಿಳಿಸಿದೆ.

ಮಾರಾಟ ಮಾಡಿದ ತೈಲ ಪ್ರಮಾಣ ಕಡಿಮೆಯಿದ್ದರೂ ಹೀಗೆ ಭರ್ಜರಿ ಲಾಭ ಗಳಿಸಲು ಕಾರಣ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಏರಿಸಿರುವುದು. 2020ನೇ ಸಾಲಿನ ಏಪ್ರಿಲ್​-ನವೆಂಬರ್​ ಅವಧಿಯಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಅಬಕಾರಿ ಸುಂಕದಿಂದ ₹ 1,96,342 ಕೋಟಿ ಆದಾಯ ಗಳಿಸಿದೆ. ಆದರೆ, 2019ರ ಏಪ್ರಿಲ್-ನವೆಂಬರ್​ ಅವಧಿಯಲ್ಲಿ ಈ ಆದಾಯ ₹ 1,32,899 ಕೋಟಿ ಇತ್ತು ಎಂದು ಕಂಟ್ರೋಲರ್​ ಜನರಲ್ ಆಫ್​ ಅಕೌಂಟ್ಸ್​ (ಸಿಜಿಎ) ಅಂಕಿಅಂಶಗಳ ಆಧಾರಿತ ಮಾಹಿತಿ ನೀಡಿದೆ.

ಕೊರೊನಾ ಲಾಕ್​ಡೌನ್​ ಇದ್ದ ಕಾರಣ ವಾಹನ ಸಂಚಾರ ಕಡಿಮೆಯಾಗಿ ಏಪ್ರಿಲ್-ನವೆಂಬರ್​ ಅವಧಿಯಲ್ಲಿ ಡೀಸೆಲ್​ ಮಾರಾಟದಲ್ಲಿ ಸುಮಾರು 1 ಕೋಟಿ ಟನ್​ನಷ್ಟು ಕುಸಿತ ಮತ್ತು ಪೆಟ್ರೋಲ್​ ಮಾರಾಟದಲ್ಲಿ ಸುಮಾರು 30 ಲಕ್ಷ ಟನ್​ ಕುಸಿತವಾಗಿತ್ತು. ಇಷ್ಟಾಗ್ಯೂ, ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಮೇಲೆ ವಿಧಿಸುವ ಅಬಕಾರಿ ಸುಂಕ ಏರಿಸಿದ ಪರಿಣಾಮ ಲಾಭಾಂಶದಲ್ಲಿ ಭಾರೀ ಏರಿಕೆ ಕಂಡಿದೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಆ ಸಂದರ್ಭವನ್ನು ಉಪಯೋಗಿಸಿಕೊಂಡ ಕೇಂದ್ರ ಸರ್ಕಾರ ಎರಡು ಸಲ ಪೆಟ್ರೋಲ್​, ಡೀಸೆಲ್​ ಮೇಲಿನ ಸುಂಕ ಏರಿಸಿತ್ತು. ಪ್ರತಿ ಲೀಟರ್​ ಪೆಟ್ರೋಲ್​ಗೆ ₹ 13 ಮತ್ತು ಪ್ರತಿ ಲೀಟರ್​ ಡೀಸೆಲ್​ಗೆ ₹ 16ರಷ್ಟು ಏರಿಕೆಯಾಗಿತ್ತು. ತೈಲೋತ್ಪನ್ನಗಳು ಇನ್ನೂ ಜಿಎಸ್​ಟಿ ವ್ಯಾಪ್ತಿಯಲ್ಲಿ ಸೇರದ ಕಾರಣ ಅವುಗಳ ಮೇಲಿನ ಅಬಕಾರಿ ಸುಂಕ ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ವ್ಯಾಟ್​ ತೆರಿಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ.

ಒಂದುವೇಳೆ ಲಾಕ್​ಡೌನ್​ ಇಲ್ಲದೇ ವಾಹನ ಸಂಚಾರ ಯಥಾಸ್ಥಿತಿಯಲ್ಲಿ ಸಾಗಿದ್ದರೆ ಪೆಟ್ರೋಲ್​ ಮತ್ತು ಡೀಸೆಲ್​ ಮಾರಾಟದಿಂದ ಕೇಂದ್ರ ಸರ್ಕಾರ ಅತ್ಯಂತ ದೊಡ್ಡ ಪ್ರಮಾಣದ ಸುಂಕ ಸಂಗ್ರಹಿಸಿ ಲಾಭ ಗಳಿಸುತ್ತಿತ್ತು ಎಂಬ ಲೆಕ್ಕಾಚಾರದ ಮಾತುಗಳೂ ಈಗ ಕೇಳಿಬರುತ್ತಿವೆ.

ಕಾಂಪೌಂಡ್ ಒಳಗಿದ್ದ 8 ಬೈಕ್​ಗಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಖದೀಮನ ದುಷ್ಕೃತ್ಯ CCTVಯಲ್ಲಿ ಸೆರೆ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ