ವಾಟ್ಸ್​ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್​ಗೆ ಅರ್ಜಿ

‘ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ಇಷ್ಟವಾಗದಿದ್ರೆ ಆ್ಯಪ್​ನಿಂದ ದೂರವಿರಿ. ಹೊಸ ನೀತಿಗೆ ಸಮ್ಮತಿಸುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿರ್ಧಾರ. ನಿಮ್ಮ ಮೇಲೆ ಯಾರೂ ಅದನ್ನು ಹೇರುತ್ತಿಲ್ಲ. ಇಷ್ಟವಾಗದಿದ್ದರೆ ಆ್ಯಪ್​ ಬಳಕೆ ನಿಲ್ಲಿಸಿ, ಮತ್ತೊಂದು ಆ್ಯಪ್ ಬಳಸಲು ಶುರು ಮಾಡಿ’ ಎಂದು ನ್ಯಾಯಾಧೀಶರು ಸಲಹೆ ಮಾಡಿದರು.

ವಾಟ್ಸ್​ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್​ಗೆ ಅರ್ಜಿ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jan 18, 2021 | 5:56 PM

ದೆಹಲಿ: ವಾಟ್ಸ್​ಆ್ಯಪ್ ಈಚೆಗೆ ಪ್ರಕಟಿಸಿರುವ ಹೊಸ ಗೌಪ್ಯತಾ ನೀತಿಯು (ಪ್ರೈವೆಸಿ ಪಾಲಿಸಿ) ಭಾರತೀಯರಿಗೆ ನಮ್ಮ ಸಂವಿಧಾನ ನೀಡಿರುವ ಗೌಪ್ಯತೆಯ ಹಕ್ಕನ್ನು (21ನೇ ವಿಧಿ) ಉಲ್ಲಂಘಿಸುತ್ತದೆ. ಕೆಲ ಐರೋಪ್ಯ ದೇಶಗಳಲ್ಲಿ ಹೊಸ ಗೌಪ್ಯತಾ ನೀತಿಗೆ ಸಮ್ಮತಿಸದೇ ಆ್ಯಪ್ ಬಳಸಬಹುದಾದ ಅವಕಾಶವನ್ನೂ ವಾಟ್ಸ್​ಆ್ಯಪ್ ನೀಡಿದೆ. ಭಾರತೀಯರಿಗೆ ಈ ಆಯ್ಕೆ ನೀಡಿಲ್ಲ ಎಂದು ದೂರಿ ದೆಹಲಿ ಹೈಕೋರ್ಟ್​ಗೆ ವಕೀಲರೊಬ್ಬರು ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸಲು ವಿನಂತಿಸಿದ್ದಾರೆ.

ಸರ್ಕಾರದ ನಿಯಂತ್ರಣವೇ ಇಲ್ಲದ ರೀತಿಯಲ್ಲಿ ಬಳಕೆದಾರರ ಆನ್​ಲೈನ್ ಚಟುವಟಿಕೆಗಳನ್ನು ಗಮನಿಸಲು, ಸಂಗ್ರಹಿಸಲು ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ನೀತಿ ಅವಕಾಶ ನೀಡುತ್ತದೆ. ಹೊಸ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಬಹುದು ಅಥವಾ ಆ್ಯಪ್​ನಿಂದ ಹೊರಗೆ ಹೋಗಬಹುದು ಎಂಬ ಎರಡೇ ಆಯ್ಕೆಗಳಿವೆ. ಫೇಸ್​ಬುಕ್ ಮಾಲೀಕತ್ವದ ಅಥವಾ ಇತರ ಯಾವುದೇ ಆ್ಯಪ್​ಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಘೋಷಿಸಿ, ಆ್ಯಪ್ ಬಳಸಲು ಅವಕಾಶ ನೀಡುವುದಿಲ್ಲ ಎಂದು ಅರ್ಜಿದಾರರು ದೂರಿದರು.

ವಾಟ್ಸ್​ಆ್ಯಪ್ ಮತ್ತು ಫೇಸ್​ಬುಕ್ ಪರವಾಗಿ ಖ್ಯಾತ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ವಾದ ಮಂಡಿಸಿದರು. ಈ ಅರ್ಜಿಯಲ್ಲಿ ಪ್ರಸ್ತಾಪವಾಗಿರುವ ಹಲವು ವಿಚಾರಗಳಿಗೆ ಯಾವುದೇ ಆಧಾರವಿಲ್ಲ. ಈ ಬಗ್ಗೆ ಹೆಚ್ಚು ಗಮನ ನೀಡುವುದು ಅಗತ್ಯವಿಲ್ಲ ಎಂದು ಹೇಳಿದರು.

ಕುಟುಂಬದ ಸದಸ್ಯರು ಮತ್ತು ಗೆಳೆಯರ ನಡುವಿನ ಖಾಸಗಿ ಸಂಭಾಷಣೆ ಇನ್ನು ಮುಂದೆಯೂ ಗೂಢಲಿಪಿಯಲ್ಲಿ (ಎನ್​ಕ್ರಿಪ್ಷನ್) ಗೌಪ್ಯವಾಗಿಯೇ ಇರುತ್ತದೆ. ಇಂಥ ಸಂಭಾಷಣೆಯನ್ನು ಸಂಗ್ರಹಿಸಿಡಲು ವಾಟ್ಸ್​​ಆ್ಯಪ್​ಗೆ ಸಾಧ್ಯವಾಗುವುದೂ ಇಲ್ಲ. ಹೊಸ ನೀತಿ ಜಾರಿಗೆ ಬಂದರೂ ಈ ವ್ಯವಸ್ಥೆ ಬದಲಾಗುವುದಿಲ್ಲ. ವಾಟ್ಸ್​ಆ್ಯಪ್​ನ ಬ್ಯುಸಿನೆಸ್​ ಚಾಟ್​ಗಳ ಮೇಲೆಯೂ ಹೊಸ ನೀತಿ​ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ವಾದ ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಸಚ್​ದೇವ್​, ‘ಬಹುತೇಕ ಮೊಬೈಲ್ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳುವಾಗ ಅವುಗಳು ವಿಧಿಸುವ ಷರತ್ತುಗಳನ್ನು ಓದಿದರೆ ನೀವು ಯಾವುದಕ್ಕೆಲ್ಲಾ ಸಮ್ಮತಿಸುತ್ತಿದ್ದೀರಿ ಎಂದು ಆಶ್ಚರ್ಯವಾಗುತ್ತೆ. ಗೂಗಲ್​ ಮ್ಯಾಪ್ಸ್​ ಸಹ ನಿಮ್ಮ ಎಲ್ಲ ಡೇಟಾ ದಾಖಲಿಸಿ, ಸಂಗ್ರಹಿಸಿಡುತ್ತದೆ. ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ಇಷ್ಟವಾಗದಿದ್ರೆ ಆ್ಯಪ್​ನಿಂದ ದೂರವಿರಿ. ಹೊಸ ನೀತಿಗೆ ಸಮ್ಮತಿಸುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿರ್ಧಾರ. ನಿಮ್ಮ ಮೇಲೆ ಯಾರೂ ಅದನ್ನು ಹೇರುತ್ತಿಲ್ಲ. ಇಷ್ಟವಾಗದಿದ್ದರೆ ಆ್ಯಪ್​ ಬಳಕೆ ನಿಲ್ಲಿಸಿ, ಮತ್ತೊಂದು ಆ್ಯಪ್ ಬಳಸಲು ಶುರು ಮಾಡಿ’ ಎಂದು ಸಲಹೆ ಮಾಡಿದರು.

ತನ್ನ ಬಳಕೆದಾರರಿಂದ ಸಂಗ್ರಹಿಸಿದ ಯಾವೆಲ್ಲಾ ಅಥವಾ ಎಂತೆಂಥ ಮಾಹಿತಿಯನ್ನು ವಾಟ್ಸ್​ಆ್ಯಪ್​ ಸೋರಿಕೆ ಮಾಡಬಹುದು ಎಂದು ಅರ್ಜಿದಾರರು ಹೇಳುತ್ತಿದ್ದಾರೆ ಎಂಬುದೇ ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ. ಈ ವಿಚಾರದ ಬಗ್ಗೆ ವಿಸ್ತೃತ ವಿಚಾರಣೆಯ ಅಗತ್ಯವಿದೆ. ಹೀಗಾಗಿ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡುತ್ತಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು. ಈ ಪ್ರಕರಣದ ಬಗ್ಗೆ ಮತ್ತಷ್ಟು ವಿಶ್ಲೇಷಣೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರೂ ಅಭಿಪ್ರಾಯಪಟ್ಟರು.

ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿಯು ಫೆಬ್ರುವರಿಯಿಂದ ಜಾರಿಯಾಗಬೇಕಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಇದರ ಜಾರಿಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ.

ವಿರೋಧಕ್ಕೆ ಬೆಚ್ಚಿತಾ ವಾಟ್ಸ್​ಆ್ಯಪ್​? ಹೊಸ ಪ್ರೈವೆಸಿ ಪಾಲಿಸಿ ಇನ್ನೂ ವಿಳಂಬ

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

ವಾಟ್ಸ್​ಆ್ಯಪ್ ಇಲ್ಲದೆ ಬದುಕಬಹುದೇ..?: ಇದನ್ನು ಓದಿ ನೀವೇ ಕಂಡುಕೊಳ್ಳಿ ಉತ್ತರ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್