ಪಹಲ್ಗಾಮ್ ಗುಡ್ಡದಿಂದ ಇಳಿದು ಬರಲು ಕುದುರೆಗಳಿರಲಿಲ್ಲ, ಎಲ್ಲ ಓಡಿಹೋಗಿದ್ದವು: ದೊಡ್ಡಬಸಯ್ಯ
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಭದ್ರತೆ ಇರಲಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದು ಬೆಟ್ಟದ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಕುದುರೆಗಳನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೋಗಬೇಕಂತೆ. ಉಗ್ರರ ದಾಳಿ ನಡೆದಾಗ ಕುದುರೆಗಳು ಜೀವಭಯದಿಂದ ಮನಬಂದಂತೆ ಓಡುತ್ತಿದ್ದ ಕಾರಣ ಬೆಟ್ಟ ಹತ್ತಿದವರಿಗೆ ವಾಪಸ್ಸು ಬರಲು ಕುದುರೆಗಳಿರಲಿಲ್ಲ ಎಂದು ದೊಡ್ಡಬಸಯ್ಯ ಹೇಳುತ್ತಾರೆ.
ಹುಬ್ಬಳ್ಳಿ, ಏಪ್ರಿಲ್ 24: ಬಳ್ಳಾರಿಯ ದೊಡ್ಡಬಸಯ್ಯ (Doddabassaiah) ನಿನ್ನೆ ಕಾಶ್ಮೀರದಿಂದಲೇ ಟಿವಿ9 ಜೊತೆ ಮಾತಾಡಿದ್ದರು, ಇವತ್ತು ಅವರು ಪತ್ನಿ ಹಾಗೂ ಅತ್ತೆಯೊಂದಿಗೆ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ. ಉಗ್ರರು ರ‍್ಯಾಂಡಮ್ಮಾಗಿ ಎರ್ರಾಬಿರ್ರಿ ಗುಂಡು ಹಾರಿಸುತ್ತಿದ್ದುದ್ದರಿಂದ ಬದುಕಿ ಬಂದಿದ್ದೇ ದೇವರ ಕೃಪೆ ಎಂದು ಅವರು ಹೇಳುತ್ತಾರೆ. ಆದರೆ, ಇಂಥ ಸನ್ನಿವೇಶಗಳು ಎದುರಾದಾಗ ಪ್ಯಾನಿಕ್ ಆಗದೆ, ಪ್ರಸೆನ್ಸ್ ಆಫ್ ಮೈಂಡ್ ಬಳಸಿದರೆ ಅಪಾಯದಿಂದ ಪಾರಾಗಬಹುದು, ಜೀವ ಉಳಿಸಿಕೊಳ್ಳಬಹುದು ಎಂದು ದೊಡ್ಡಬಸಯ್ಯ ಹೇಳುತ್ತಾರೆ. ಪೊಲೀಸ್ ತರಬೇತಿಯಲ್ಲಿ ಹೇಳಿಕೊಟ್ಟ ಟ್ರಿಕ್ಕೊಂದನ್ನು ಬಳಸಿ ಅವರು ತಮ್ಮ ಕುಟುಂಬದವರಲ್ಲದೆ ಇತರ ಹತ್ತಿಪ್ಪತ್ತು ಜನರ ಜೀವ ಉಳಿಸಿದ್ದನ್ನು ನಿನ್ನೆ ಹೇಳಿದ್ದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿ: ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ