ಪತಿ ಮಂಜುನಾಥ್ ಮೇಲೆ ನಡೆದ ಉಗ್ರರ ದಾಳಿಯನ್ನು ಮಾಧ್ಯಮಗಳಿಗೆ ವಿವರಿಸಿದ ಪಲ್ಲವಿ ರಾವ್
ಗುಂಡು ಸಿಡಿದ ಶಬ್ದ ಕಿವಿಗೆ ಬಿದ್ದಾಗ ಮಂಜುನಾಥ್, ಪಲ್ಲವಿ ಮತ್ತು ಆಭಿಜಯ ಅದು ಸಿಅರ್ಪಿಎಫ್ ಟ್ರೈನಿಂಗ್ ಕ್ಯಾಂಪ್ ನಿಂದ ಬಂದ ಸದ್ದಾಗಿರಬಹುದು ಎಂದು ಭಾವಿಸಿದರಂತೆ. ಮಂಜುನಾಥ್ ಮೇಲೆ ಗುಂಡು ಹಾರಿಸಿದ ಬಳಿಕಕ ಉಗ್ರರು ಮನಬಂದಂತೆ ಗುಂಡು ಹಾರಿಸಲಾರಂಭಿಸಿದ್ದಾರೆ, ಒಂದು ಫರ್ಲಾಂಗ್ ದೂರದಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ವ್ಯಕ್ತಿಯ ಬಳಿ ಹೋದ ಉಗ್ರರು ಪಾಯಿಂಟ್ ಬ್ಲ್ಯಾಂಕ್ ರೇಂಜಿಂದ ಅವರ ತಲೆಗೆ ಎರಡು ಗುಂಡು ಹಾರಿಸಿ ಕೊಂದರು ಎಂದು ಪಲ್ಲವಿ ಹೇಳುತ್ತಾರೆ.
ಶಿವಮೊಗ್ಗ, ಏಪ್ರಿಲ್ 24: ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ (Manjunath Rao) ಅವರ ಪತ್ನಿ ಪಲ್ಲವಿ ಅವರು ತಮ್ಮ ಕಣ್ಣೆದೆರು ನಡೆದ ಘನಘೋರ ಮತ್ತು ಎಂಥವರನ್ನೂ ಬೆಚ್ಚಿಬೀಳಿಸುವ ಘಟನೆಯನ್ನು ಮಾಧ್ಯಮಗಳಿಗೆ ಹೇಳಿದರು. ಪಹಲ್ಗಾಮ್ ಗೆ ಕುದುರೆ ಹತ್ತಿ ಹೋದ ಬಳಿಕ ಪಲ್ಲವಿ ಮತ್ತು ಮಂಜುನಾಥ್ ಅವರು ಮಗ ಅಭಿಜಯಗೆ ತಿನ್ನಲು ಏನಾದರೂ ತರಲು ಅಂತ ಹೊರಟಾಗ ಉಗ್ರರು ಪಾಯಿಂಟ್ ಬ್ಲಾಂಜ್ ರೇಂಜಿಂದ ಮಂಜುನಾಥ್ ಅವರ ಕುತ್ತಿಗೆಗೆ ಗುಂಡು ಹಾರಿಸಿದರಂತೆ. ಒಂದೇ ಗುಂಡು ಕ್ಷಣಾರ್ಧದಲ್ಲಿ ಅವರ ಪ್ರಾಣ ತೆಗೆದುಕೊಂಡಿತು ಎಂದು ಪಲ್ಲವಿ ಹೇಳುತ್ತಾರೆ. ಇಂಥ ಘೋರ ಘಟನೆ ಯಾರ ಬದುಕಲ್ಲೂ ನಡೆಯಬಾರದು ಎನ್ನುವ ಅವರು ನಂತರ ಉಗ್ರರಿಗೆ ನನ್ನ ಗಂಡನನ್ನು ಕೊಂದಿರಲ್ಲ, ನನ್ನನ್ನೂ ಕೊಲ್ಲಿ ಎಂದಿದ್ದಾರೆ. ಅವರ ಮಗ ಕೂಡ ಕುತ್ತೇ ಮುಝೆ ಭೀ ಮಾರ್ ಡಾಲೋ ಅಂತ ಕೂಗಿದ್ದಾನೆ. ನಹೀ ತುಮ್ ಜಾಕೆ ಮೋದಿಕೋ ಬತಾವೋ ಅಂತ ಉಗ್ರರಲ್ಲ್ಲೊಬ್ಬ ಹೇಳಿದನಂತೆ.
ಇದನ್ನೂ ಓದಿ: ನೋವು, ದುಗುಡ ಮತ್ತು ಭೀತಿಯ ಹೊರತಾಗಿಯೂ ಮಂಜುನಾಥರ ಅಂತಿಮ ಸಂಸ್ಕಾರ ಪೂರೈಸಿದ ಪಲ್ಲವಿ, ಅಭಿಜಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ