ನೋವು, ದುಗುಡ ಮತ್ತು ಭೀತಿಯ ಹೊರತಾಗಿಯೂ ಮಂಜುನಾಥರ ಅಂತಿಮ ಸಂಸ್ಕಾರ ಪೂರೈಸಿದ ಪಲ್ಲವಿ, ಅಭಿಜಯ
ಎರಡನೇ ಪಿಯು ಪರೀಕ್ಷೆಯಲ್ಲಿ ಮಗ ಶೇಕಡ97 ರಷ್ಟು ಅಂಕ ಪಡೆದು ಪಾಸಾಗಿದ್ದನ್ನು ಸೆಲಿಬ್ರೇಟ್ ಮಗ ಮತ್ತು ಹೆಂಡತಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಮಂಜುನಾಥ್ ತಮ್ಮ ಈ ಪ್ರವಾಸ ಬದುಕಿನ ಅಂತಿಮ ಯಾತ್ರೆ ಆದೀತೆಂದು ಕನಸಲ್ಲೂ ಅಂದುಕೊಂಡಿರಲಾರರು. ಶಿವಮೊಗ್ಗದಲ್ಲಿ ರಿಯಲ್ಟರ್ ಆಗಿದ್ದ ಮಂಜುನಾಥ್ ಅವರ ಭಾವನೆಗಳು, ಮಗನ ಬಗ್ಗೆ ಕಂಡ ಕನಸು ಕಟುಕ ಉಗ್ರರಿಗೆ ಅರ್ಥವಾಗೋದು ಸಾಧ್ಯವಿರಲಿಲ್ಲ
ಶಿವಮೊಗ್ಗ, ಏಪ್ರಿಲ್ 24: ಈ ಧೃಶ್ಯ ಅತ್ಯಂತ ಭಾವುಕ ಮತ್ತು ಕರುಳನ್ನು ಹಿಂಡುತ್ತದೆ. ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಮತ್ತು ಮಗ ಅಭಿಜಯ (Manjunath son Abhijaya) ಮನದಲ್ಲ್ಲಿರುವ ಭಯ, ಆತಂಕ ಮತ್ತು ಕಿಚ್ಚನ್ನು ಒಮ್ಮೆ ಊಹಿಸಿ ನೋಡಿ. ಅವರ ಕಣ್ಣೆದುರೇ ಉಗ್ರರು ಮಂಜುನಾಥ್ ಅವರನ್ನು ನಿರ್ದಯತೆಯಿಂದ ಗುಂಡಿಕ್ಕಿ ಕೊಂದರು. ಆ ದೃಶ್ಯವನ್ನು ಅವರು ಯಾವತ್ತಾದರೂ ಮರೆತಾರೆಯೇ? ದುಃಸ್ವಪ್ನವಾಗಿ ಅವರನ್ನು ಪ್ರತಿದಿನ ಕಾಡುತ್ತದೆ. ಅಷ್ಟೆಲ್ಲ ನೋವು ಮತ್ತು ದುಗುಡ ಹೊರತಾಗಿಯೂ ಪಲ್ಲವಿ ಮತ್ತು ಅಭಿಜಯ ಧೈರ್ಯವಾಗಿ ನಿಂತು ಮಂಜುನಾಥ್ ಅವರ ಅಂತಿಮ ಸಂಸ್ಕಾರದ ವಿಧಿಗಳನ್ನು ಪೂರೈಸುತ್ತಿದ್ದಾರೆ.
ಇದನ್ನೂ ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಾಶ್ಮೀರದ 1,500 ಜನರು ವಶಕ್ಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ