ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಶಿವಮೊಗ್ಗದ ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ನ್ನು ಸ್ಥಳೀಯ ಕಾಶ್ಮೀರಿಗರು ರಕ್ಷಿಸಿದ್ದೇ ರೋಚಕವಾಗಿದೆ. ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಅಭಿಜಯ್ನನ್ನ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶ್ರೀನಗರ, ಶಿವಮೊಗ್ಗ, (ಏಪ್ರಿಲ್ 24): ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ನೀನು ಹಿಂದೂನಾ? ಅಲ್ಲ ಮುಸ್ಲಿಮ್ ನಾ ಅಂತ ಕೇಳಿ ತಲೆಗೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ. ಹೆಂಡತಿ ಹಾಗೂ ಮಗನ ಜೊತೆಗೆ ಜಾಲಿ ಟ್ರಿಪ್ ಅಂತ ಕಾಶ್ಮೀರಕ್ಕೆ ಹೋಗಿದ್ದ ಶಿವಮೊಗ್ಗದ ಮಂಜುನಾಥ್ ಅವರು ದುರಂತ ಅಂತ್ಯ ಕಂಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಶಿವಮೊಗ್ಗದ ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ನ್ನು ಸ್ಥಳೀಯ ಕಾಶ್ಮೀರಿಗರು ರಕ್ಷಿಸಿದ್ದೇ ರೋಚಕವಾಗಿದೆ. ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಅಭಿಜಯ್ನನ್ನ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು

ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ

ರಶ್ಮಿಕಾಗೆ ಮೈಸೂರು ಸ್ಯಾಂಡಲ್ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
