Pahelgam Terror Attack: ಕುಟುಂಬಸ್ಥರ ಆಕ್ರಂದನ ನಡುವೆ ಮನೆ ತಲುಪಿದ ಮಂಜುನಾಥ್ ರಾವ್ ಪಾರ್ಥೀವ ಶರೀರ
ಮಂಜುನಾಥ್ ರಾವ್ ಅವರ ಅಂತಿಮ ಸಂಸ್ಕಾರದಲ್ಲಿ ಸರ್ಕಾರದ ಪರವಾಗಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ. ಮಂಜುನಾಥ್ ಅವರ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡಿದೆ ಮತ್ತು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮನೆ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಶಿವಮೊಗ್ಗ, ಏಪ್ರಿಲ್ 24: ಶಿವಮೊಗ್ಗ ನಗರದಲ್ಲಿ ಮನೆಕಟ್ಟಿಕೊಡು ವಾಸವಾಗಿದ್ದ ಮತ್ತು ಪತ್ನಿ ಹಾಗೂ ಮಗನೊಂದಿಗೆ ಜಮ್ಮು ಮತ್ತ್ತು ಕಾಶ್ಮೀರ ಪ್ರವಾಸ ತೆರಳಿ ಅಲ್ಲಿನ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳ ಹೇಯ ಕೃತ್ಯಕ್ಕೆ ಬಲಿಯಾದ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಮಂಜುನಾಥ್ ರಾವ್ (Manjunath Rao) ಅವರ ಮೃತದೇಹ ಮಂಜುನಾಥ್ ಅಮರ್ ರಹೇ ಘೋಷಣೆಗಳ ನಡುವೆ ಸ್ವಗೃಹ ತಲುಪಿತು. ಅವರ ಮನೆಯ ಮುಂದೆ ಮತ್ತು ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ. ಕುಟಂಬಸ್ಥರ ಆಕ್ರಂದನದ ನಡುವೆ ಮಂಜುನಾಥ್ ಅವರ ದೇಹವಿದ್ದ ಶವಪೆಟ್ಟಿಗೆಯನ್ನು ಓಪನ್ ಮಾಡಲಾಯಿತು. ಇವತ್ತು ಸಾಯಂಕಾಲ ಅವರ ಅಂತ್ಯಕ್ರಿಯ ನೆರವೇರಲಿದೆ.
ಇದನ್ನೂ ಓದಿ: Amarnath Yatra 2025: ಪಹಲ್ಗಾಮ್ ನಿಂದ ಆರಂಭವಾಗುವ ಅಮರನಾಥ ಯಾತ್ರೆ ರದ್ದಾಗಲಿದೆಯೇ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ