ಮಗನನ್ನು ಹೆಗಲ ಮೇಲೆ ಹೊತ್ತು, ನನ್ನ ಕೈಹಿಡಿದು ಸುರಕ್ಷಿತ ಸ್ಥಾನಕ್ಕೆ ತಂದವರು ಮುಸಲ್ಮಾನರು: ಪಲ್ಲವಿ
ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಅಮಾಯಕರ ಪ್ರಾಣ ತೆಗೆದಿರುವ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಬೇಕು, ನನ್ನ ಹಣೆಯಿಂದ ಬೆವರು ಇಳಿಯುತ್ತಿರುವ ಸ್ಥಿತಿಯನ್ನು ಅವರೂ ಎದುರಿಸಬೇಕು, ಭಾರತೀಯರನ್ನು ಮುಟ್ಟುವ ಮೊದಲು ಅವರು ಹತ್ತು ಸಲ ಯೋಚಿಸಬೇಕು, ಎಲ್ಲ ಭಯೋತ್ಪಾದಕರ ಹುಟ್ಟಡಗಿಸಬೇಕು ಎಂದು ಪಲ್ಲವಿ ಹೇಳುತ್ತಾರೆ.
ಶಿವಮೊಗ್ಗ, ಏಪ್ರಿಲ್ 24: ನಮ್ಮ ಶಿವಮೊಗ್ಗ ವರದಿಗಾರನೊಂದಿಗೆ ಮಾತಾಡಿರುವ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಅವರು, ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳು (ultras) ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು; ಕೆಲವರು ಇಲ್ಲ ಅಂತ ಹೇಳುತ್ತಿರೋದು ಸುಳ್ಳು ಎಂದು ಹೇಳಿದರು. ಆದರೆ ಅಲ್ಲಿನ ನಿವಾಸಿಗಳು ಮುಸ್ಲಿಮರಾದರೂ ತಮಗೆ ಬಹಳ ಸಹಾಯ ಮಾಡಿದರು, ಘಟನೆ ನಡೆದ ಸ್ಥಳದಿಂದ ಸುರಕ್ಷಿತವಾದ ಸ್ಥಳಕ್ಕೆ ನಡೆಯುತ್ತ ಬರೋದು ಸುಲಭವಾಗಿರಲ್ಲಿಲ್ಲ, ತಮಗೆ ಸಹಾಯ ಮಾಡಿದ ಇಬ್ಬರಲ್ಲಿ ಒಬ್ಬರು ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದರೆ ಮತ್ತೊಬ್ಬರು ತನ್ನ ಕೈ ಹಿಡಿದು ಆಸ್ಪತ್ರೆವರೆಗೆ ಕರೆತಂದರು, ಉಗ್ರಗಾಮಿಗಳು ಅವರನ್ನು ಸಹ ಕೊಲ್ಲಬಯಸಿದ್ದರಂತೆ, ಅದರೆ ಅವರು ತಾಬೀನ್ ಬಿಸ್ಮಿಲ್ಲಾ ಅಂತ ಹೇಳಿದ್ದಕ್ಕೆ ಸುಮ್ಮನೆ ಬಿಟ್ಟರಂತೆ ಎಂದು ಪಲ್ಲವಿ ಹೇಳಿದರು.
ಇದನ್ನೂ ಓದಿ: Amarnath Yatra 2025: ಪಹಲ್ಗಾಮ್ ನಿಂದ ಆರಂಭವಾಗುವ ಅಮರನಾಥ ಯಾತ್ರೆ ರದ್ದಾಗಲಿದೆಯೇ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ