‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು ರಾಮಚಂದ್ರಪ್ಪ
ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ ನೀಡಿದ ಕೊಡುಗೆ ಅಪಾರ. ಆ ಬಗ್ಗೆ ಅಣ್ಣಾವ್ರ ಜನ್ಮದಿನದಂದೇ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿದ್ದಾರೆ. ರಾಜ್ಕುಮಾರ್ ಅವರು ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಬಳಿಕ ಯಾವ ರೀತಿಯ ಬೆಳವಣಿಗೆ ಆಯಿತು ಎಂಬುದನ್ನು ಬರಗೂರು ರಾಮಚಂದ್ರಪ್ಪ ವಿವರಿಸಿದ್ದಾರೆ.
ವರನಟ ಡಾ. ರಾಜ್ಕುಮಾರ್ (Dr Rajkumar) ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ವೇಳೆ ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಅಣ್ಣಾವ್ರ ಕುರಿತು ಮಾತನಾಡಿದ್ದಾರೆ. ‘ರಾಜ್ಕುಮಾರ್ ಅವರು ನಾಯಕರಾಗಿ ಬರದೇ ಹೋಗಿದ್ದರೆ ಕನ್ನಡ ಚಿತ್ರರಂಗ ಇಷ್ಟು ಅಭಿವೃದ್ಧಿಯನ್ನು ಹೊಂದುತ್ತಿರಲಿಲ್ಲ. ಕನ್ನಡದಲ್ಲಿ ಮೊದಲ ವಾಕ್ಚಿತ್ರ ಬಂದಿದ್ದು 1934ರಲ್ಲಿ. ರಾಜ್ಕುಮಾರ್ ಅವರು ಬಂದಿದ್ದು 1954ರಲ್ಲಿ. 1934ರಿಂದ 1954ರ ತನಕ ಸುಮಾರು 70 ಸಿನಿಮಾಗಳಿಗೂ ಹೆಚ್ಚು ಸಿನಿಮಾ ಕನ್ನಡದಲ್ಲಿ ಬಂದಿರಲಿಲ್ಲ. 1954ರ ಬಳಿಕ ಕೇವಲ 14 ವರ್ಷದಲ್ಲಿ ರಾಜ್ಕುಮಾರ್ ಅವರು 100 ಸಿನಿಮಾ ಪೂರೈಸಿದರು. ಆಗ ನೂರಾರು ಕನ್ನಡ ಸಿನಿಮಾಗಳು ಬಂದವು. ರಾಜ್ಕುಮಾರ್ ಎಂಬ ಹೆಸರು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಕಾರಣ ಆಯಿತು’ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.