ರಿಕ್ಕಿ ರೈ ಮೇಲೆ ಗುಂಡು ಹಾರಿಸಿದ ಪ್ರಕರಣಲ್ಲಿ ಫ್ರಾನ್ಸಿಸ್ ಪ್ರಮುಖ ಆರೋಪಿ: ರಾಕೇಶ್ ಮಲ್ಲಿ
ಕಳೆದ 22 ವರ್ಷಗಳಿಂದ ತನ್ನ ವಿರುದ್ಧ ಯಾವುದೇ ಪ್ರಕರಣವಿಲ್ಲ, ರಿಕ್ಕಿಯ ಪ್ರಕರಣದಲ್ಲಿ ತನ್ನನ್ನು ಸಿಕ್ಕಿಸುವ ಪ್ರಯತ್ನ ಫ್ರಾನ್ಸಿಸ್ ಮಾಡುತ್ತಿದ್ದಾನೆ, ಸರಕಾರ ತನಗೆ ಇಬ್ಬರು ಪೊಲೀಸರ ರಕ್ಷಣೆ ನೀಡಿದೆ, ಅದನ್ನು ತೆಗೆಸುವ ಪ್ರಯತ್ನ ನಡೆದಿದೆ, ತನ್ನ ವಿರುದ್ಧ ದೂರು ನೀಡಿರೋದು ಇದೇ ಕಾರಣಕ್ಕೆ, ಆದರೆ ತಾನು ಯಾವುದರಲ್ಲೂ ಶಾಮೀಲಾಗಿಲ್ಲ ಎಂದು ಪೊಲೀಸರಿಗೆ ಮನವರಿಕೆಯಾಗಿದೆ ಎಂದು ಮಲ್ಲಿ ಹೇಳಿದರು.
ರಾಮನಗರ, ಏಪ್ರಿಲ್ 24: ರಿಕ್ಕಿ ರೈ ಮೇಲೆ ಗುಂಡು ಹಾರಿಸಿರುವ ಪ್ರಕರಣದಲ್ಲಿ ಆರೋಪಿ ನಂ. 1 ಆಗಿರುವ ರಾಕೇಶ್ ಮಲ್ಲಿ (Rakesh Malli) ಇವತ್ತು ಮತ್ತೊಮ್ಮೆ ಬಿಡದಿ ಪೊಲೀಸರ ಎದುರು ಇಂಟರಾಗೇಷನ್ ಗೆ ಹಾಜರಾದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಪ್ರಕರಣದ ಅಸಲಿ ರೂವಾರಿ 74-ವರ್ಷ ವಯಸ್ಸಿನ ಫ್ರಾನ್ಸಿಸ್ ಅಗಿದ್ದಾನೆ, ಅವನು ಮುತ್ತಪ್ಪ ರೈ ಮಕ್ಕಳಿಂದ ದುಡ್ಡು ಎಳೆಯುತ್ತಲೇ ಇದ್ದಾನೆ, ಇದು ಯಾಕೆ ಅವರಿಗೆ ಗೊತ್ತಾಗುತ್ತಿಲ್ಲವೋ ಗೊತ್ತಿಲ್ಲ, ತೀವ್ರ ಸ್ವರೂಪದ ಮಧುಮೇಹದಿಂದ ಬಳಲುತ್ತಿರುವ ಫ್ರಾನ್ಸಿಸ್ ಒಂದು ಟೀಮನ್ನು ಕಟ್ಟಿಕೊಂಡಿದ್ದಾನೆ, ಅವನು ನಮ್ಮ ಎದುರು ಬರುತಿಲ್ಲ, ಬಂದರೆ ಪಾಠ ಕಲಿಸುತ್ತೇವೆ ಎಂದು ರಾಕೇಶ್ ಮಲ್ಲಿ ಹೇಳುತ್ತಾರೆ
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರನ ಹತ್ಯೆ ಯತ್ನ ಹಿಂದೆ ಶಾರ್ಪ್ಶೂಟರ್? ರಿಕ್ಕಿ ಮೇಲಿನ ಗುಂಡಿನ ದಾಳಿಗೆ ಅಸಲಿ ಕಾರಣವೇನು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್

ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ

KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
