AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್: ರಿಕ್ಕಿ ಗನ್​ ಮ್ಯಾನ್ ವಿಠ್ಠಲ್ ಪೊಲೀಸ್ ವಶಕ್ಕೆ

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಹೊಸ ತಿರುವು ಸಿಕ್ಕಿದೆ. ಪೊಲೀಸರು ರಿಕ್ಕಿ ಗನ್​ ಮ್ಯಾನ್​ ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ 2 ಆಗಿದ್ದ, ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾಗೆ ಕೋರ್ಟ್​ ರಿಲೀಫ್ ನೀಡಿದೆ.

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್: ರಿಕ್ಕಿ ಗನ್​ ಮ್ಯಾನ್ ವಿಠ್ಠಲ್ ಪೊಲೀಸ್ ವಶಕ್ಕೆ
ರಿಕ್ಕಿ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್
Follow us
Ramesha M
| Updated By: Ganapathi Sharma

Updated on: Apr 22, 2025 | 1:05 PM

ಬೆಂಗಳೂರು, ಏಪ್ರಿಲ್ 22: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Rikki Rai) ಮೇಲಿನ ಗುಂಡಿನ ದಾಳಿ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈಗಾಗಲೇ ರಿಕ್ಕಿ ರೈ ಕಾರು ಚಾಲಕ ಬಸವರಾಜು ನೀಡಿದ ದೂರಿನ ಅನ್ವಯ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ, ಮುತ್ತಪ್ಪ ರೈನ (Muthappa Rai) ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ (Rakesh Malli) ಸೇರಿದಂತೆ ನಾಲ್ವರ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮತ್ತೊಂದೆಡೆ ಪೊಲೀಸರು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಕ್ಕ ಬುಲೆಟ್​ ಕಾಟ್ರಿಡ್ಜ್​ ಇಟ್ಟುಕೊಂಡು, ಈ ಬುಲೆಟ್ ಅನ್ನು ಯಾವ ಗನ್​ ಮೂಲಕ ಹಾರಿಸಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಎಸ್​ಬಿಬಿಎಲ್, ಅಂದರೆ ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಅಥವಾ, ಡಿಬಿಬಿಎಲ್, ಅಂದರೆ ಡಬಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಎಂಬುದು ಪತ್ತೆಯಾಗಿದೆ. ಇದರ ನಡುವೆ ಹೇಗೆ ಫೈರಿಂಗ್ ಮಾಡಿದ್ದರು ಎಂಬ ಕುರಿತು ತನಿಖೆ ಚುರುಕು ಗೊಂಡಿದೆ.

ರಸ್ತೆ ಪಕ್ಕದ ಲೇಔಟ್​ನ ಕಾಂಪೌಂಡ್ ಒಳಭಾಗದಿಂದ ಫೈರಿಂಗ್ ಆಗಿರಬಹುದು. ಶಾರ್ಪ್​ಶೂಟರ್ಸ್​ಗಳು, ಕತ್ತಲಲ್ಲಿ ಕಾರಿನ ಹೆಡ್​ಲೈಟ್ ಬೆಳಕಿನ ಸಹಾಯದಿಂದ ಕಾರಿನ ಮುಂಭಾಗದ ಡ್ರೈವರ್ ಸೀಟ್​ನತ್ತ ಫೈರ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಫೈರ್ ಆಗಿರುವ ಗುಂಡು ಕಾರಿನಿಂದ ಹೊರಗೆ ಹೋಗಿಲ್ಲ. ಹೀಗಾಗಿ ಎಷ್ಟು ದೂರದಿಂದ ಫೈರ್ ಮಾಡಿದ್ದಾರೆ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ
Image
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು
Image
ಮುತ್ತಪ್ಪ ರೈ ಪುತ್ರನ ರಿಕ್ಕಿ ಹತ್ಯೆಗೆ ಯತ್ನದ ಹಿಂದಿನ ಅಸಲಿ ಕಾರಣವೇನು?
Image
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್
Image
ತಂದೆಯ ಮರಣ ನಂತರ ರಿಯಲ್​ ಎಸ್ಟೇಟ್ ಮಾಡಿಕೊಂಡಿರುವ ರಿಕ್ಕಿ ರೈ

ರಿಕ್ಕಿ ರೈ ಗನ್​ ಮ್ಯಾನ್ ವಿಠ್ಠಲ್ ವಶಕ್ಕೆ: ಗುಂಡಿನ ದಾಳಿ ಪ್ರಕರಣಕ್ಕೆ ತಿರುವು

ಒಂದೆಡೆ, ಪೊಲೀಸರು ಇಷ್ಟೆಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವಾಗಲೇ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧ ರಿಕ್ಕಿ ರೈ ಗನ್​ ಮ್ಯಾನ್ ಮನ್ನಪ್ಪ ವಿಠ್ಠಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಡದಿ ಠಾಣೆ ಪೊಲೀಸರು, ಮನ್ನಪ್ಪ ವಿಠ್ಠಲ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ವಯಂ ದಾಳಿ​ ಮಾಡಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ್ನಾ ರಿಕ್ಕಿ ರೈ?

ಸ್ವಯಂ ದಾಳಿ​ ಮಾಡಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ್ನಾ ರಿಕ್ಕಿ ರೈ ಎಂಬ ಅನುಮಾನ ಪೊಲೀಸರಿಗೂ ಮೂಡಿದೆ. ರಿಕ್ಕಿ ರೈಗೆ ಮೂವರು ಗನ್​ ಮ್ಯಾನ್​ಗಳಿದ್ದು, ತನಿಖೆ ವೇಳೆ ಮೂವರು ವಿಭಿನ್ನ ಹೇಳಿಕೆ ನೀಡಿದ್ದಾರೆಂದು ಪೊಲೀಸ್​ ಮೂಲಗಳು ತಿಳಿಸಿವೆ. ಹೀಗಾಗಿ ರಿಕ್ಕಿ ರೈ ಗನ್​ಮ್ಯಾನ್​ಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಪ್ರಕರಣವನ್ನು ಡೈವರ್ಟ್ ಮಾಡಲು, ಮತ್ತಪ್ಪ ರೈ 2ನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ದೂರು ಕೊಟ್ಟರೇ ಎಂಬ ಶಂಕೆ ಪೊಲೀಸರಿಗೆ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಿಕ್ಕಿ ರೈ ಮನೇಲಿಯಲ್ಲಿನ ಗನ್​ ಹಾಗೂ ಬುಲೆಟ್​ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ವಿಚಾರಣೆಗೆ ಹಾಜರಾದ A-1 ರಾಕೇಶ್ ಮಲ್ಲಿ

ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಮುತ್ತಪ್ಪ ರೈ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ಕೊಟ್ಟಿದ್ದರು. ಆದ್ರೆ ರಾಕೇಶ್ ಮಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಮಂಗಳವಾರ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಕೀಲರ ಜೊತೆ ಆಗಮಿಸಿದ ರಾಕೇಶ್ ಮಲ್ಲಿಯನ್ನು, ಎಸ್​ಪಿ ಶ್ರೀನಿವಾಸ್​ಗೌಡ ವಿಚಾರಣೆ ನಡೆಸಿದ್ದಾರೆ.

ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾಗೆ ಸದ್ಯಕ್ಕೆ ರಿಲೀಫ್

ಇತ್ತ ಗುಂಡಿನ ದಾಳಿ ಪ್ರಕರಣದ A-2 ಆಗಿದ್ದ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾಗೆ ಹೈಕೋರ್ಟ್ ರಿಲೀಫ್ ನೀಡಿದೆ. ಅನುರಾಧಾ ಪ್ರಕರಣದಿಂದ ಕೈ ಬಿಡುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ ಮಂಗಳವಾರ ವಾದ ಮಂಡಿಸಿದರು.

ಇದನ್ನೂ ಓದಿ: ಮುತ್ತಪ್ಪ ರೈ ಪುತ್ರನ ಹತ್ಯೆ ಯತ್ನ ಹಿಂದೆ ಶಾರ್ಪ್​ಶೂಟರ್? ರಿಕ್ಕಿ ಮೇಲಿನ ಗುಂಡಿನ ದಾಳಿಗೆ ಅಸಲಿ ಕಾರಣವೇನು?

ಪ್ರಕರಣದಲ್ಲಿ ವಿನಾಕಾರಣ ಅನುರಾಧಾ ಹೆಸರು ತಂದಿದ್ದಾರೆ. ಆಸ್ತಿ ವಿವಾದ 6 ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಏಪ್ರಿಲ್ 14 ರಂದೇ ಅನುರಾಧಾ ಯುರೋಪ್​ಗೆ ತೆರಳಿದ್ದಾರೆ. ಕೊಲೆ ಯತ್ನ ಕೇಸ್​ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ವಾದ ಆಲಿಸಿದ ಜಡ್ಜ್ ಅನುರಾಧ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಸದ್ಯಕ್ಕೆ ಅನುರಾಧಾಗೆ ರಿಲೀಫ್ ಸಿಕ್ಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ