ರಿಕ್ಕಿ ರೈ ಮೇಲೆ ಮಾರಣಾಂತಿಕ ಹಲ್ಲೆ ನಡೆಯಲು ಮುತ್ತಪ್ಪ ರೈ ಮಾಡಿಟ್ಟ ಭಾರೀ ಆಸ್ತಿ ಕಾರಣವಾಯಿತೇ?
ಮುತ್ತಪ್ಪ ರೈ ಅಪಾರ ಆಸ್ತಿಯ ಒಡೆಯರಾಗಿದ್ದರು ಮತ್ತು ಅವರು ಗತಿಸಿದ ಬಳಿಕ ಅವರ ಮಗ ಎಲ್ಲ ಆಸ್ತಿಗೆ ವಾರಸುದಾರರಾಗಿದ್ದಾರೆ. ಮುತ್ತಪ್ಪಗೆ ಒಬ್ಬ ಮಗಳು ಕೂಡ ಇದ್ದಾರೆ. ತಂದೆಯ ಮರಣ ನಂತರ ರಿಕ್ಕಿ ರಿಯಲ್ಟರ್ ಆಗಿ ಗುರುತಿಸಿಕೊಂಡಿದ್ದರು. ಅವರ ಮೇಲೆ ಹಲ್ಲೆ ನಡೆಯಲು ಮುತ್ತಪ್ಪ ಮಾಡಿಟ್ಟಿರುವ ಆಸ್ತಿ ಕಾರಣವಾಯಿತೋ ಅಥವಾ ರಿಕ್ಕಿಯ ಹತ್ಯೆ ಯತ್ನ ನಡೆಸಿದವರಿಗೆ ವೃತ್ತಿ ವೈಷಮ್ಯವಿತ್ತೋ ಅನ್ನೋದು ತನಿಖೆ ನಂತರ ಗೊತ್ತಾಗತ್ತದೆ.
ರಾಮನಗರ, ಏಪ್ರಿಲ್ 19: ಮುತ್ತಪ್ಪ ರೈ (Muthappa Rai) ಕ್ಯಾನ್ಸರ್ಗೆ ಬಲಿಯಾಗಿ 5 ವರ್ಷ ಕಳೀತಾ ಬಂತು. ಅವರ ಸಾವಿನೊಂದಿಗೆ ವೈರಿಗಳು ಕೂಡ ಸ್ತಬ್ಧರಾದರು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ನಿನ್ನೆ ಮಧ್ಯರಾತ್ರಿ ಅವರ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ. ರಿಕ್ಕಿ ಗಂಭೀರವಾಗಿ ಗಾಯಗೊಂಡಿರುವರಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿರುವ ನಮ್ಮ ವರದಿಗಾರ ಹೇಳುವ ಪ್ರಕಾರ ಹತ್ಯೆಗೆ ಸಂಚು ಹೂಡಿದವರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದರು. 70 ಎಂಎಂ ಪಿಸ್ಟಲ್ ನಿಂದ ಸಿಡಿದಿರುವ ಗುಂಡು ಕಾರಿನ ಮುಂಭಾಗದ ಡೋರ್ ಮತ್ತು ಸೀಟನ್ನು ಸೀಳಿಕೊಂಡು ಹಿಂದಿನ ಸೀಟಲ್ಲಿ ಕೂತಿದ್ದ ರಿಕ್ಕಿ ಕೈ ಮತ್ತು ಮೂಗಿಗೆ ತಾಕಿದೆ.
ಇದನ್ನೂ ಓದಿ: Gun Firing on Rikki Rai: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಮೂಗು, ಕೈಗೆ ತಾಕಿದ ಗುಂಡು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ