ವಿಂಗ್ ಕಮಾಂಡರ್ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಅವನ ಹೆಸರೇ ಇಲ್ಲ: ಅಶ್ವಿನಿ ಗೌಡ, ಕರವೇ
ಶಿಲಾದಿತ್ಯ ಬೋಸ್ ಮೇಲೆ ಎಫ್ಐಆರ್ ಆಗಿದೆ, ಆದರೆ ನಮ್ಮ ಕನ್ನಡದ ಪೊಲೀಸರು ಬಹಳ ಬುದ್ಧಿವಂತಿಕೆ ಪ್ರದರ್ಶಿಸಿ ಎಫ್ಐಅರ್ನಲ್ಲಿ ಡ್ರೈವರ್ ಅಂತ ಬರೆದಿದ್ದಾರೆಯೇ ಹೊರತು ಅವನ ಹೆಸರಿಲ್ಲ, ಹೆಸರೇ ಇಲ್ಲವೆಂದ ಮೇಲೆ ಯಾರ ವಿರುದ್ಧ ತನಿಖೆ ನಡೆಸುತ್ತಾರೆ? ಕರ್ನಾಟಕದ ಪೊಲೀಸರು ಕನ್ನಡಿಗರನ್ನೇ ಹೀಗೆ ಕಡೆಗಣಿಸಿದರೆ ನ್ಯಾಯಕ್ಕಾಗಿ ಯಾರಲ್ಲಿಗೆ ಹೋಗೋದು ಅಂತ ಅಶ್ವಿನಿ ಪ್ರಶ್ನಿಸುತ್ತಾರೆ.
ಬೆಂಗಳೂರು, ಏಪ್ರಿಲ್ 22: ವಿಕಾಸ್ ಮೇಲಿನ ಹಲ್ಲೆ ಪ್ರಕರಣವನ್ನು ಕರ್ನಾಟಕ ರಕ್ಷಣಾ ವೇದಿಕೆಯೂ (Karnataka Rakshana Vedike) ಬಹಳ ಗಂಭೀರವಾಗಿ ಪರಗಣಿಸಿದ್ದು ವಿಕಾಸ್ನನ್ನು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನ ಗೌಡ, ಸಿಸಿಟಿವಿ ಫುಟೇಜ್ ನೋಡುತ್ತಿದ್ದರೆ ರಕ್ತ ಕುದಿಯುತ್ತದೆ, ಆ ಪಾಟಿ ಕನ್ನಡದ ಹುಡುಗನ ಮೇಲೆ ಹಲ್ಲೆ ಮಾಡಿದ್ದಾನೆ ವಿಂಗ್ ಕಮಾಂಡರ್ ಎನ್ನುತ್ತಾರೆ. ಹೊರ ರಾಜ್ಯಗಳಿಂದ ಬಂದವರು ಕನ್ನಡ ಮಾತಾಡದ್ದಕ್ಕೆ ತಮ್ಮ ಮೇಲೆ ಹಲ್ಲೆ, ನಾವು ಬೆಂಗಳೂರಲ್ಲಿ ಸುರಕ್ಷಿತವಾಗಿದ್ದೇವೆಯೇ ಅಂತ ಪೋಸ್ಟ್ಗಳನ್ನು ಮಾಡಿ ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ, ಆದರೆ ವಿಕಾಸ್ನೊಂದಿಗೆ ನಾವಿದ್ದೇವೆ ಎಂದು ಅಶ್ವಿನಿ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ರೋಡ್ರೇಜ್, ಹಲ್ಲೆ ಪ್ರಕರಣ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ