Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ವಾಹನದಲ್ಲಿ ಮಾಸ್ಕ್​ ಹಾಕದಿದ್ದರೆ ದಂಡ ಹಾಕುವಂತಿಲ್ಲ! ಮುಂಬೈನಲ್ಲಿ ಜಾರಿಗೆ ಬಂತು ಹೊಸ ನಿಯಮ; ಬೆಂಗಳೂರಿನಲ್ಲಿ ಯಾವಾಗ?

ಮುಂಬೈನಲ್ಲಿ ಭಾನುವಾರದಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಸ್ವಂತ ವಾಹನದಲ್ಲಿ ಸಂಚಾರ ಮಾಡುವವರು ಮುಖಕ್ಕೆ ಮಾಸ್ಕ್​ ಹಾಕುವುದು ಕಡ್ಡಾಯವಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹೇಳಿದೆ.

ಸ್ವಂತ ವಾಹನದಲ್ಲಿ ಮಾಸ್ಕ್​ ಹಾಕದಿದ್ದರೆ ದಂಡ ಹಾಕುವಂತಿಲ್ಲ! ಮುಂಬೈನಲ್ಲಿ ಜಾರಿಗೆ ಬಂತು ಹೊಸ ನಿಯಮ; ಬೆಂಗಳೂರಿನಲ್ಲಿ ಯಾವಾಗ?
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Jan 18, 2021 | 7:02 PM

ಮುಂಬೈ: ಸ್ವಂತ ವಾಹನದಲ್ಲಿ ಸಂಚಾರ ಮಾಡುವಾಗ ಮಾಸ್ಕ್​ ಹಾಕುವ ಅವಶ್ಯಕತೆ ಏನು? ಸಾಮಾನ್ಯವಾಗಿ ಸ್ವಂತ ವಾಹನದಲ್ಲಿ ಕುಟುಂಬದವರು ಹಾಗೂ ಆಪ್ತರೇ ಸಂಚಾರ ಮಾಡುತ್ತಾರೆ. ಹೀಗಾಗಿ, ಸ್ವಂತ ವಾಹನದಲ್ಲಿ ತೆರಳುವಾಗ ಮಾಸ್ಕ್​ ಅವಶ್ಯತೆ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಈ ವಿಚಾರವನ್ನು ಮನಗಂಡ ಬೃಹತ್​ ಮುಂಬೈ ಮಹಾನಗರ ಪಾಲಿಕೆ, ಖಾಸಗಿ ವಾಹನದಲ್ಲಿ ತೆರಳುವವರಿಗೆ ಮುಖ ಧಿರಿಸು ಕಡ್ಡಾಯವಲ್ಲ ಎಂದು ಹೇಳಿದೆ.

ಮುಂಬೈನಲ್ಲಿ ಭಾನುವಾರದಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಸ್ವಂತ ವಾಹನದಲ್ಲಿ ಸಂಚಾರ ಮಾಡುವವರು ಮುಖಕ್ಕೆ ಮಾಸ್ಕ್​ ಹಾಕುವುದು ಕಡ್ಡಾಯವಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹೇಳಿದೆ. ಉಳಿದಂತೆ ಟ್ಯಾಕ್ಸಿ, ಬಸ್​, ರಿಕ್ಷಾ ಸೇರಿ ಇತರ ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್​ ಹಾಕುವುದು ಕಡ್ಡಾಯವಾಗಿದೆ.

ಬೆಂಗಳೂರಲ್ಲೂ ಇದೇ ವಾದ: ಕಾರು ಮತ್ತಿತ್ಯಾದಿ ಸ್ವಂತ ವಾಹನದಲ್ಲಿ ಸಾಗುತ್ತಿರುವ ವೇಳೆ ಮಾಸ್ಕ್​ ಹಾಕಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ದಂಡ ಹಾಕಿದ ಸಾಕಷ್ಟು ಉದಾಹರಣೆಗಳು ಬೆಂಗಳೂರಿನಲ್ಲಿ ನಡೆದಿವೆ. ಇದು ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದ. ಏಕೆಂದರೆ, ಮನೆ ಮಂದಿಯೇ ಕಾರಿನಲ್ಲಿ ಕೂತಿರುತ್ತಾರೆ. ಅಷ್ಟೇ ಅಲ್ಲ, ಹೊರ ಜಗತ್ತಿನೊಂದಿಗೆ ಇವರು ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ, ಮಾಸ್ಕ್​ ಅವಶ್ಯಕತೆ ಇಲ್ಲ ಎನ್ನುವುದು ಅನೇಕರ ಹೇಳುತ್ತಾ ಬಂದಿದ್ದಾರೆ. ಕೊರೊನಾ ಹಾಟ್​ ಸ್ಪಾಟ್​ ಎನಿಸಿಕೊಂಡ ಮುಂಬೈನಲ್ಲೇ ಈ ನಿಯಮ ಜಾರಿಗೆ ಬಂದಿದೆ. ಹೀಗಿರುವಾಗ ಕರ್ನಾಟಕದಲ್ಲಿ ಈ ನಿಯಮ ಜಾರಿಗೆ ತರಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ತಗ್ಗಿಲ್ಲ ಕೊರೊನಾ ಪ್ರಕರಣ ಕರ್ನಾಟಕದಲ್ಲಿ ಈ ಮೊದಲು ನಿತ್ಯ 5 ಸಾವಿರ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ರಾಜ್ಯದಲ್ಲಿ ಕೊರೊನಾ ಸದ್ಯ ನಿಯಂತ್ರಣಕ್ಕೆ ಬಂದಿದ್ದು, ನಿತ್ಯ ಬರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿಕೆ ಆಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಭಾನುವಾರ ಹೊಸದಾಗಿ 2,910 ಕೊರೊನಾ ಕೇಸ್​ ಪತ್ತೆ ಆಗಿದ್ದು, ಈ ಮೂಲಕ ಪ್ರಕರಣಗಳ ಸಂಖ್ಯೆ 19,87,678ಕ್ಕೆ ಏರಿಕೆ ಆಗಿದೆ. ಕೊರೊನಾದಿಂದ 50,388 ಜನರು ಮೃತಪಟ್ಟಿದ್ದಾರೆ.

ಕೊರೊನಾ ಬಂದಮೇಲೆ ಪತ್ನಿಯನ್ನು ತಬ್ಬಿಕೊಳ್ಳಲು, ಚುಂಬಿಸಲು ಸಾಧ್ಯವಾಗಿಲ್ಲ: ಫಾರುಕ್​ ಅಬ್ದುಲ್ಲಾ ಬೇಸರ

Published On - 6:08 pm, Mon, 18 January 21

ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ