ಪಹಲ್ಗಾಮ್ ಎನ್ನುವ ಸ್ವರ್ಗದಲ್ಲಿ ತೇಲಾಡುವಾಗ ಕಣ್ಣೆದುರೇ ಗಂಡನನ್ನ ಕೊಂದ ಉಗ್ರರ ಭೀಕರತೆ ಬಿಚ್ಚಿಟ್ಟ ಪತ್ನಿ
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಶಿವಮೊಗ್ಗದ ಮಂಜುನಾಥ್ ರಾವ್ ಪಂಚಭೂತಗಳಲ್ಲಿ ಲೀನರಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ರಾವ್ ಅವರ ಹೆಂಡತಿ ಪಲ್ಲವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಭೀಕರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಶಿವಮೊಗ್ಗ, (ಏಪ್ರಿಲ್ 24): ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಶಿವಮೊಗ್ಗದ ಮಂಜುನಾಥ್ ರಾವ್ ಪಂಚಭೂತಗಳಲ್ಲಿ ಲೀನರಾದರು. ಶಿವಮೊಗ್ಗದ ತುಂಗಾ ನದಿ ತೀರದ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದ್ದು, ಮಂಜುನಾಥ್ ರಾವ್ ಚಿತೆಗೆ ಪುತ್ರ ಅಭಿಜೇಯ ಅಗ್ನಿ ಸ್ಪರ್ಶ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ರಾವ್ ಅವರ ಹೆಂಡತಿ ಪಲ್ಲವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಭೀಕರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಉಗ್ರರ ಸ್ವರ್ಗದಲ್ಲಿ ತೇಲಾಡುತ್ತಿದ್ದ ಪ್ರವಾಸಿಗರ ಮೇಲೆ ಉಗ್ರರ ಅಟ್ಟಹಾಸ ಹೇಗಿತ್ತು ಎನ್ನುವುದನ್ನು ಬಿಚ್ಚಿಟ್ಟರು.
Latest Videos