ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮೃತ ಮಂಜುನಾಥ್ ಪುತ್ರ
ಅಮ್ಮ ನನ್ನ ಕರ್ಕೊಂಡು ಬರುತ್ತಿರುವಾಗ ಎಲ್ಲರೂ ಓಡೋಕೆ ಶುರುಮಾಡಿದ್ರು, ಆಗ ಅಲ್ಲಿ ಎಲ್ಲರಿಗೂ ಗೊತ್ತಾಗಿತ್ತು ಉಗ್ರರು ಫೈರಿಂಗ್ ಮಾಡುತ್ತಿದ್ದಾರೆ ಅಂತಾ. ನಾನು ಅಮ್ಮ ಓಡೋಕೆ ಶುರು ಮಾಡಿದ್ವಿ. ಅಪ್ಪ ಎಲ್ಲಿ ಅಂತಾ ಹಿಂದೆ ತಿರುಗಿ ನೋಡಿದ್ರೆ ಶೂಟ್ ಆಗಿ ಬಿದ್ದಿದ್ರು ಎಂದು ಹೇಳಿದರು. ಅಲ್ಲದೇ ಆ ವೇಳೆ ಸ್ಥಳೀಯ ಇಬ್ಬರು ಕಾಶ್ಮೀರಿಗಳು ನಮ್ಮನ್ನು ಕಾಪಾಡಿದರು ಎಂದರು.
ಶಿವಮೊಗ್ಗ, (ಏಪ್ರಿಲ್ 24): ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ನೀನು ಹಿಂದೂನಾ? ಅಲ್ಲ ಮುಸ್ಲಿಂನಾ ಅಂತ ಕೇಳಿ ತಲೆಗೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಇದರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್ ಹಾಗೂ ಬೆಂಗಳೂರು ಭರತ್ ಭೂಷಣ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಇನ್ನು ತಂದೆ ಮಂಜುನಾಥ್ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ, ಮೊದಲು ಏನೋ ಫೈರಿಂಗ್ ಮಾಡುತ್ತಿದ್ದ ಶಬ್ದ ಕೇಳಿಸಿತ್ತು. ನಾವು ಸೈನ್ಯದ ಟ್ರೈನಿಂಗ್ ನಡೆಯುತ್ತಿರಬೇಕು. ಇಲ್ಲಾ ಏನೋ ಪಟಾಕಿ ಹೊಡಿತಿದ್ದಾರೆ ಅಂತಾ ಅನ್ಕೊಂಡ್ವಿ. ನೋಡಿದ್ರೆ ಎಲ್ಲರೂ ಓಡೋಕೆ ಶುರು ಮಾಡಿದ್ರು. ನಾನು ದೂರದಲ್ಲಿ ಕೂತಿದ್ದೆ. ಅಪ್ಪ ಅಮ್ಮ ನಂಗೆ ಏನೋ ತರೋಕೆ ಹೋದ್ರು. ನನ್ನನ್ನು ಅಲ್ಲೇ ಕೂರೋಕೆ ಹೇಳಿ ಹೋದ್ರು. ಮತ್ತೇ ಅಪ್ಪ ಅಮ್ಮನ ಜೊತೆ ನನ್ನ ಕರ್ಕೊಂಡು ಬರೋಕೆ ಹೇಳಿದ್ರು. ಅಮ್ಮ ನನ್ನ ಕರ್ಕೊಂಡು ಬರುತ್ತಿರುವಾಗ ಎಲ್ಲರೂ ಓಡೋಕೆ ಶುರುಮಾಡಿದ್ರು, ಆಗ ಅಲ್ಲಿ ಎಲ್ಲರಿಗೂ ಗೊತ್ತಾಗಿತ್ತು ಉಗ್ರರು ಫೈರಿಂಗ್ ಮಾಡುತ್ತಿದ್ದಾರೆ ಅಂತಾ. ನಾನು ಅಮ್ಮ ಓಡೋಕೆ ಶುರು ಮಾಡಿದ್ವಿ. ಅಪ್ಪ ಎಲ್ಲಿ ಅಂತಾ ಹಿಂದೆ ತಿರುಗಿ ನೋಡಿದ್ರೆ ಶೂಟ್ ಆಗಿ ಬಿದ್ದಿದ್ರು ಎಂದು ಹೇಳಿದರು. ಅಲ್ಲದೇ ಆ ವೇಳೆ ಸ್ಥಳೀಯ ಇಬ್ಬರು ಕಾಶ್ಮೀರಿಗಳು ನಮ್ಮನ್ನು ಕಾಪಾಡಿದರು ಎಂದರು.