ನಮ್ಮದೇ ಕೊರೊನಾ ಲಸಿಕೆ ಪಡೆಯಿರಿ ಎಂದು ಆಫರ್ ನೀಡುತ್ತಿದೆ ಚೀನಾ; ಕ್ವಾಡ್ ಶೃಂಗಸಭೆ ಬಳಿಕ ಅಚ್ಚರಿಯ ಬೆಳವಣಿಗೆ!
ಚೀನಾಕ್ಕೆ ಹೋಗುವ ವಿದೇಶಿ ಯಾತ್ರಿಕರು ಅಲ್ಲಿನ ಕೊವಿಡ್-19 ಲಸಿಕೆ ಪಡೆದರೆ ಹೆಚ್ಚು ಕಾಗದ ಪತ್ರ ವ್ಯವಹಾರ ಮಾಡಬೇಕಾದ್ದಿಲ್ಲ. ಚೀನಾ ವೀಸಾಕ್ಕೆ ಅರ್ಜಿ ಸಲ್ಲಿಸುವ ವಿದೇಶಿ ಪ್ರವಾಸಿಗರಿಗೂ ಈ ನಿಯಮ ಅನ್ವಯವಾಗಲಿದೆ.
ಬೀಜಿಂಗ್: ಚೀನಾ ಕೊರೊನಾ ಲಸಿಕೆಯ ಮೇಲಿನ ಬಂಡವಾಳವನ್ನು ಹೆಚ್ಚಿಸಿದೆ. ಜಾಗತಿಕ ವಲಯದಲ್ಲಿ ಕೊವಿಡ್-19 ಲಸಿಕೆ ವಿತರಣೆಯ ಪ್ರಮಾಣದಲ್ಲಿ ಏರಿಸಲು ಚೀನಾ ಕೆಲಸ ಮಾಡುತ್ತಿದೆ. ಇದಕ್ಕಾಗಿ ಚೀನಾಕ್ಕೆ ತೆರಳುವ ವಿದೇಶಿ ಪ್ರಯಾಣಿಕರಿಗೆ ಹೊಸ ವಿಚಾರವೊಂದನ್ನು ತಿಳಿಸಿದೆ. ಚೀನಾದ ಮುಖ್ಯ ನಗರ ಹಾಂಗ್ಕಾಂಗ್ ಪ್ರವೇಶಿಸುವ ವಿದೇಶಿಗರು ಚೀನಾ ತಯಾರಿಸಿದ ಕೊರೊನಾ ಲಸಿಕೆ ಹಾಕಿಸಿಕೊಂಡರೆ, ಕಡಿಮೆ ಪೇಪರ್ ವರ್ಕ್ ಇರುತ್ತದೆ ಎಂದು ಹೇಳಿದೆ.
ಚೀನಾಕ್ಕೆ ಹೋಗುವ ವಿದೇಶಿ ಯಾತ್ರಿಕರು ಚೀನಾದ ಕೊವಿಡ್-19 ಲಸಿಕೆ ಪಡೆದರೆ ಹೆಚ್ಚು ಕಾಗದ ಪತ್ರ ವ್ಯವಹಾರ ಮಾಡಬೇಕಾದ್ದಿಲ್ಲ. ಚೀನಾ ವೀಸಾಕ್ಕೆ ಅರ್ಜಿ ಸಲ್ಲಿಸುವ ವಿದೇಶಿ ಪ್ರವಾಸಿಗರಿಗೂ ಈ ನಿಯಮ ಅನ್ವಯವಾಗಲಿದೆ. ಭಾರತ, ಅಮೆರಿಕಾ, ಆಸ್ಟ್ರೇಲಿಯಾ, ಜಪಾನ್ ದೇಶಗಳ ಕ್ವಾಡ್ ಒಕ್ಕೂಟ ಸಭೆ ನಡೆಸಿದ ಒಂದು ದಿನದ ಬಳಿಕ, ಅಂದರೆ ಇಂದು (ಮಾರ್ಚ್ 13) ಚೀನಾ ಹೀಗಂದಿದೆ.
ನಿನ್ನೆ (ಮಾರ್ಚ್ 12) ನಡೆದ ಕ್ವಾಡ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಸದ್ಯದ ಅಗತ್ಯವಾದ ಕೊರೊನಾ ಲಸಿಕೆ, ವಿದೇಶಗಳಿಗೆ ಲಸಿಕೆ ವಿತರಣೆ ಮಾಡುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಹಣ ಹೂಡುವ ಬಗ್ಗೆಯೂ ಸಭೆಯಲ್ಲಿ ಭಾಗವಹಿಸಿದ್ದ ಮಾತನಾಡಿದ್ದವು. ಈ ನಿರ್ಧಾರಗಳ ಬೆನ್ನಲ್ಲಿ ಚೀನಾ ಹೊಸ ತೀರ್ಮಾನ ಕೈಗೊಂಡು ಅಚ್ಚರಿ ಮೂಡಿಸಿದೆ.
ಚೀನಾ ತನ್ನ ದೇಶದಲ್ಲಿ ಉತ್ಪಾದನೆಗೊಂಡ ಕೊವಿಡ್ ಲಸಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಪ್ರಯತ್ನಿಸುತ್ತಿದೆ. ಚೀನಾ ಸರ್ಕಾರದ ವಕ್ತಾರ ಗುವೊ ವೈಮನ್ ನೀಡಿದ ಮಾಹಿತಿಯಂತೆ, ಫೆಬ್ರವರಿ ತಿಂಗಳ ಅಂತ್ಯಕ್ಕೆ ಚೀನಾ ತನ್ನ ದೇಶದ ಕೊರೊನಾ ಲಸಿಕೆಯನ್ನು ಸುಮಾರು 69 ದೇಶಗಳಿಗೆ ತಲುಪಿಸಿದೆ. ಜತೆಗೆ, 28 ದೇಶಗಳಿಗೆ ರಫ್ತು ಮಾಡತೊಡಗಿದೆ.
ಚೀನಾದ ಮಾಧ್ಯಮಗಳು ಕೂಡ ಸರ್ಕಾರದ ನಡೆಗೆ ಬೆಂಬಲಿಸಿ ಮಾಹಿತಿ ಪ್ರಸಾರ ಮಾಡುತ್ತಿದೆ. ಇತರ ದೇಶಗಳ ಮಾಡರ್ನಾ ಮತ್ತು ಫೈಜರ್-ಬಯೊ ಎನ್ ಟೆಕ್ ಲಸಿಕೆಯ ಬಗ್ಗೆ ಋಣಾತ್ಮಕ ಅಭಿಪ್ರಾಯಗಳನ್ನು ಹಂಚುತ್ತಿದೆ. ಚೀನಾ ಲಸಿಕೆಯೇ ಉತ್ತಮ ಆಯ್ಕೆ ಎಂದು ಹೇಳುತ್ತಿವೆ. ಆದರೆ, ಚೀನಾದ ಲಸಿಕೆಗಳು ಬಹುತೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಮೋದನೆ ಪಡೆದಿಲ್ಲ. ಚೀನಾ ಕೂಡ ವಿದೇಶಿ ಲಸಿಕೆಗಳನ್ನು ತಯಾರಿಸಲು ಮತ್ತು ಹಂಚಲು ತನ್ನ ದೇಶದಲ್ಲಿ ಪರವಾನಗಿ ನೀಡಿಲ್ಲ.
Published On - 6:05 pm, Sat, 13 March 21