ಈ ವರ್ಷದಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್​​ಗಳು ಇಂದು ದಾಖಲು; ಮಹಾರಾಷ್ಟ್ರದ ಹಲವು ನಗರಗಳು ಮತ್ತೆ ಲಾಕ್​

Coronavirus: ಇನ್ನು ದೇಶದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ದೇಶಕ್ಕೆ ಕಾಲಿಟ್ಟಾಗಿನಿಂದಲೂ ಮಹಾರಾಷ್ಟ್ರವೇ ಪ್ರಥಮಸ್ಥಾನದಲ್ಲಿದ್ದು, ಇದೀಗ ಎರಡನೇ ಅಲೆಯಲ್ಲೂ ಅದೇ ರಾಜ್ಯವೇ ಮುಂದಿದೆ.

ಈ ವರ್ಷದಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್​​ಗಳು ಇಂದು ದಾಖಲು; ಮಹಾರಾಷ್ಟ್ರದ ಹಲವು ನಗರಗಳು ಮತ್ತೆ ಲಾಕ್​
ಕೊರೊನಾ ವೈರಸ್ ಪ್ರಾತಿನಿಧಿಕ ಚಿತ್ರ

ದೆಹಲಿ: ದೇಶದಲ್ಲಿ ಒಂದೆಡೆ ಕೊವಿಡ್​ 19 ಲಸಿಕೆ ಅಭಿಯಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಜನಸಾಮಾನ್ಯರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ಇನ್ನೊಂದೆಡೆ ಕೊರೊನಾ ಸೋಂಕಿನ (Coronavirus) ಪ್ರಮಾಣವೂ ಹೆಚ್ಚುತ್ತಿದೆ. ಈ ವರ್ಷ (2021)ದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ಇಂದು (ಮಾ.13) ದಾಖಲಾಗಿದ್ದು, ಮತ್ತೆ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಇಂದು ದೇಶದಲ್ಲಿ 24,882 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,13,33,728ಕ್ಕೆ ಏರಿಕೆಯಾಗಿದೆ.

2020ರಲ್ಲಿ ನವೆಂಬರ್​ ಅಂತ್ಯದವರೆಗೂ ಪ್ರತಿದಿನ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಅದಾದ ಬಳಿಕ ಡಿಸೆಂಬರ್​​ನಲ್ಲಿ ಕಡಿಮೆಯಾಗುತ್ತ ಬಂದಿತ್ತು. 2020ರ ಡಿಸೆಂಬರ್​ 20ರಂದು 26,624 ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅದಾದ ಮೇಲೆ ತಗ್ಗಿತ್ತು. ಆದರೆ 2021 ಪ್ರಾರಂಭವಾದ ಮೇಲೆ ಇದೇ ಮೊದಲ ಬಾರಿಗೆ 24ಸಾವಿರಕ್ಕೂ ಅಧಿಕ ಕೇಸ್​ಗಳು ಇಂದು ಪತ್ತೆಯಾಗಿವೆ.

ಕಳೆದ 24ಗಂಟೆಯಲ್ಲಿ 140 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,58,446ಕ್ಕೆ ಏರಿಕೆಯಾಗಿದೆ. ಇಂದಿಗೆ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 2,02,022 ದಾಖಲಾಗಿದ್ದು, ಚೇತರಿಕೆಯ ಪ್ರಮಾಣ ಶೇ.96.82ರಷ್ಟಿದೆ. ಕೊರೊನಾ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 1,09,73,260. ಹಾಗೇ ಸೋಂಕಿನಿಂದ ಸಾಯುವವರ ಪ್ರಮಾಣ ಶೇ.1.40ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊವಿಡ್​-19 ಶುರುವಾದ ಮೇಲೆ ಅದು ಉತ್ತುಂಗಕ್ಕೆ ಏರಲು ತುಂಬ ದಿನ ತೆಗೆದುಕೊಳ್ಳಲಿಲ್ಲ. ಫೆಬ್ರವರಿಯಲ್ಲಿ ಮೊದಲ ಕೇಸ್​ ಪತ್ತೆಯಾದ ಬೆನ್ನಲ್ಲೇ ತುಂಬ ವೇಗವಾಗಿ ಏರತೊಡಗಿತ್ತು. 2020ರ ಆಗಸ್ಟ್​ 7ರಂದು 20 ಲಕ್ಷ ದಾಟಿತ್ತು.. ಹಾಗೇ ಡಿಸೆಂಬರ್​ 19ರಂದು ಒಂದು ಕೋಟಿ ತಲುಪಿತ್ತು.

ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟು ಕ್ರಮ
ಇನ್ನು ದೇಶದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ದೇಶಕ್ಕೆ ಕಾಲಿಟ್ಟಾಗಿನಿಂದಲೂ ಮಹಾರಾಷ್ಟ್ರವೇ ಪ್ರಥಮಸ್ಥಾನದಲ್ಲಿದ್ದು, ಇದೀಗ ಎರಡನೇ ಅಲೆಯಲ್ಲೂ ಅದೇ ರಾಜ್ಯವೇ ಮುಂದಿದೆ. ಇದೀಗ ಮಹಾರಾಷ್ಟ್ರದಲ್ಲಿ ಪುಣೆ, ನಾಗ್ಪುರ ಸೇರಿ, ಹಲವು ನಗರಗಳನ್ನು ಕೊರೊನಾ ಹಾಟ್​ಸ್ಪಾಟ್​​ಗಳೆಂದು ಗುರುತಿಸಲಾಗಿದ್ದು, ಮತ್ತೆ ಲಾಕ್​ಡೌನ್ ಹೇರಲಾಗಿದೆ.

ಇದನ್ನೂ ಓದಿ: ಕೊರೊನಾ 2ನೇ ಅಲೆ ಭೀತಿ ಬೆನ್ನಲ್ಲೇ ಟಫ್ ರೂಲ್ಸ್ ಜಾರಿ: ಸಭೆ, ಸಮಾರಂಭಕ್ಕೆ ಅತಿಥಿಗಳ ಸಂಖ್ಯೆ ಫಿಕ್ಸ್​

ಅನಾರೋಗ್ಯದಿಂದ ಮೃತಪಟ್ಟ ಖ್ವಾಂಡ್ವಾ ಬಿಜೆಪಿ ಸಂಸದ; ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಪತ್ತೆ

Click on your DTH Provider to Add TV9 Kannada