ಬೇಡಿಕೆಗೆ ತಕ್ಕಂತೆ ರೈಲು ಸಂಚಾರ ಆರಂಭಿಸಲಾಗುವುದು: ರೈಲ್ವೆ ಸಚಿವ ಪಿಯೂಷ್ ಗೋಯಲ್
ತಿರುಮಲಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಾಲಾಜಿಯ ದರ್ಶನ ಪಡೆದರು. ಸಚಿವರನ್ನು ಸ್ವಾಗತಿಸಿ, ದರ್ಶನಕ್ಕೆ ಟಿಟಿಡಿ ಅಧಿಕಾರಿಗಳು ವ್ಯವಸ್ಥೆಯನ್ನು ಮಾಡಿದ್ದರು. ರೈಲ್ವೆ ಸಚಿವ ಪಿಯೂಷ್ ಗೋಯಲ್ಗೆ ಆಂಧ್ರದ ಹಣಕಾಸು ಸಚಿವ ರಾಜೇಂದ್ರನಾಥರೆಡ್ಡಿ ಸಾಥ್ ನೀಡಿದರು.
ಹೈದರಾಬಾದ್: ಭಾರತ ವಿಶ್ವಕ್ಕೆ ತನ್ನ ಸಾಮರ್ಥ್ಯ ಏನೆಂದು ತೋರಿಸಿದೆ. ಪ್ರಪಂಚದ ಹಲವು ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ವಿಶ್ವದ 150 ದೇಶಗಳಿಗೆ ಭಾರತ ಔಷಧಿಗಳನ್ನು ಕಳಿಸಿದೆ. 57 ದೇಶಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಸುತ್ತಿದೆ ಎಂದು ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ದೇಶದಲ್ಲಿ ಶೇ.80ರಷ್ಟು ರೈಲುಗಳ ಸಂಚಾರ ಆರಂಭವಾಗಿದೆ. ಬೇಡಿಕೆಗೆ ತಕ್ಕಂತೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ತಿರುಮಲಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಾಲಾಜಿಯ ದರ್ಶನ ಪಡೆದರು. ಸಚಿವರನ್ನು ಸ್ವಾಗತಿಸಿ, ದರ್ಶನಕ್ಕೆ ಟಿಟಿಡಿ ಅಧಿಕಾರಿಗಳು ವ್ಯವಸ್ಥೆಯನ್ನು ಮಾಡಿದ್ದರು. ರೈಲ್ವೆ ಸಚಿವ ಪಿಯೂಷ್ ಗೋಯಲ್ಗೆ ಆಂಧ್ರದ ಹಣಕಾಸು ಸಚಿವ ರಾಜೇಂದ್ರನಾಥರೆಡ್ಡಿ ಸಾಥ್ ನೀಡಿದರು.
ವಸುದೈವಕ ಕುಟುಂಬವನ್ನಾಗಿ ನೋಡುತ್ತಿರುವ ಮೋದಿ 130 ಕೋಟಿ ಜನಸಂಖ್ಯೆಯುಳ್ಳ ಭಾರತ ಇಡೀ ವಿಶ್ವಕ್ಕೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ವಿಶ್ವದಲ್ಲಿ ಸ್ವಾಭಿಮಾನಿ ಭಾರತವಾಗಿ ಸ್ಥರವಾಗಿ ನಿಂತಿರುವ ವೇಳೆ ಬಾಲಾಜಿಯ ದರ್ಶನ ಸಂತಸ ಉಂಟು ಮಾಡಿದೆ. ಪ್ರಪಂಚದ ಅನೇಕ ದೇಶಗಳು ಭಾರತದತ್ತ ತಿರುಗಿ ನೋಡುತ್ತಿವೆ. ಪ್ರಧಾನಿ ಮೋದಿ ಇಡೀ ವಿಶ್ವವನ್ನು ವಸುದೈವಕ ಕುಟುಂಬವನ್ನಾಗಿ ನೋಡುತ್ತಿದ್ದಾರೆ. ಕೊರೊನಾ ವೇಳೆ 150 ದೇಶಗಳಿಗೆ ಭಾರತ ಔಷಧಿಗಳನ್ನು ಕಳುಹಿಸಿರುವುದು ಸಂತಸದ ವಿಷಯ. ಸಂಪೂರ್ಣವಾಗಿ ಕೊರೊನಾ ಹಾವಳಿ ಕಡಿಮೆಯಾಗಿಲ್ಲ. ಇದರಿಂದ ಕೆಲವು ದಿನ ಕೊರೊನಾ ನಿಬಂಧನೆಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಸರಕು ರವಾನೆಯನ್ನು ಭಾರತೀಯ ರೈಲ್ವೆ ಮಾಡಿದೆ. ಈಗಾಗಲೇ ಶೇಕಡಾ 80ರಷ್ಟು ರೈಲುಗಳ ಓಡಾಟ ಆರಂಭಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಇರುವ ಕಡೆಗಳಲ್ಲಿ ಇನ್ನಷ್ಟು ರೈಲು ಓಡಿಸಲಾಗುವುದು. ತಿರುಪತಿಯಲ್ಲಿ ರೈಲ್ವೆ ಸ್ಟೇಷನ್ ವಿಸ್ತರಣೆ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಇನ್ನಷ್ಟು ಮಂದಿ ಭಕ್ತರಿಗೆ ಬಾಲಾಜಿ ದರ್ಶನಕ್ಕೆ ಬರಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ
ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ