ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ

ಬೆಂಗಳೂರು ಮೂಲದ ಎಂ ವಿ ಕನ್ಸ್ಟ್ರಕ್ಷನ್​ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ 2019 ರ ಕೊನೆಯಲ್ಲಿ ಆರಂಭವಾಗಿದ್ದು, 2021 ರ ಮಾರ್ಚ್ ವೇಳೆಗೆ ಮುಕ್ತಾಯವಾಗಬೇಕಿತ್ತು. ಕೊರೊನಾ ಕಾರಣದಿಂದ ಕಾಮಗಾರಿಗೆ ತಡೆಯಾಗಿತ್ತು.

ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ
ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ದೂಳುಮಯ
Follow us
sandhya thejappa
|

Updated on:Mar 11, 2021 | 4:36 PM

ವಿಜಯಪುರ: ಇಬ್ರಾಹಿಂಪುರ ಎಂಬ ಗ್ರಾಮ ನಗರಕ್ಕೆ ಅಂಟಿಕೊಂಡಿದೆ. ಸದ್ಯ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡ ಕಾರಣ ಇದು ನಗರದ ಭಾಗವೇ ಆಗಿದೆ. ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರೇ ಹೆಚ್ಚಾಗಿ ಇಲ್ಲಿ ವಾಸ ಮಾಡುತ್ತಾರೆ. ಸದ್ಯ ಇಲ್ಲಿನ ಜನರಿಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶಾಪವಾಗಿ ಪರಿಣಮಿಸಿದೆ. ವಿಜಯಪುರ ಬೆಂಗಳೂರು ರಸ್ತೆ ಸಂಪರ್ಕ ಮಾಡುವ ಈ ಆರ್​ಓಬಿ (ರೈಲ್ವೆ ಓವರ್ ಬ್ರಿಡ್ಜ್) ಕಾಮಗಾರಿಯಿಂದ ಹತ್ತಾರು ಸಮಸ್ಯೆಗೆ ದಾರಿಯಾಗಿದೆ.

ಬೆಂಗಳೂರು ಮೂಲದ ಎಂ ವಿ ಕನ್ಸ್ಟ್ರಕ್ಷನ್​ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ 2019 ರ ಕೊನೆಯಲ್ಲಿ ಆರಂಭವಾಗಿದ್ದು, 2021 ರ ಮಾರ್ಚ್ ವೇಳೆಗೆ ಮುಕ್ತಾಯವಾಗಬೇಕಿತ್ತು. ಕೊರೊನಾ ಕಾರಣದಿಂದ ಕಾಮಗಾರಿಗೆ ತಡೆಯಾಗಿತ್ತು. ಸದ್ಯ ಇದೇ ಕಾಮಗಾರಿ ಇಬ್ರಾಹಿಂಪುರ ವಾಸಿಗಳ ನಿದ್ದೆಗೆಡಿಸಿದೆ. ಕಾಮಗಾರಿಯ ಕಾರಣ ವಿಪರೀತ ಧೂಳು ಇಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಮಕ್ಕಳು, ವೃದ್ಧರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗೆ ಈಡು ಮಾಡುತ್ತಿದೆ. ಆಸ್ಪತ್ರೆಯ ಖರ್ಚು ವೆಚ್ಚಗಳು ಬಡವರಿಗೆ, ಕೂಲಿ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಮನೆಯ ಬಳಿ ಸಂಗ್ರಹಿಸಿಟ್ಟಿರುವ ನೀರು ನಿತ್ಯ ಧೂಳುಮಯವಾಗುತ್ತಿದೆ. ಜೊತೆಗೆ ನಿತ್ಯ ಜನರು ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಮಾತ್ರವಲ್ಲದೇ ಇಬ್ರಾಹಿಂಪುರ ಬಳಿ ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಿರುವ ಕಾರಣ ರೈತಾಪಿ ಜನರು ನಿತ್ಯ ತಮ್ಮ ಜಮೀನಿಗೆ ತೆರಳಲು 6 ರಿಂದ 8 ಕಿಲೋಮೀಟರ್ ಸುತ್ತು ಹಾಕಿಕೊಂಡು ಹೋಗಬೇಕಿದೆ.

ಸರಣಿ ಕಳ್ಳತನಕ್ಕೆ ಯತ್ನ ಕಾಮಗಾರಿ ಹಾಗೂ ಧೂಳಿನ ಕಾರಣದಿಂದ ರೈತರ ಜಾನುವಾರುಗಳ ಮೇಲೂ ಪರಿಣಾಮ ಬೀರಿದ್ದು, ಮುಖ್ಯ ರಸ್ತೆಯಲ್ಲಿ ನಡೆಯುವ ವ್ಯಾಪಾರ ವಹಿವಾಟಿಗೂ ತೊಂದರೆಯಾಗುತ್ತಿದೆ. ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲಾ. ಅಂಗಡಿಗಳ ಬಾಡಿಗೆಯನ್ನು ತೆಗೆಯಲು ಕಷ್ಟವಾಗಿದೆ ಎಂದು ಇಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ಅಂಗಡಿ, ಮಳಿಗೆ, ಮನೆಗಳ ಬಾಗಿಲಿಗೆ ಪ್ಲಾಸ್ಟಿಕ್ ಕವರ್ ಹಾಕುವ ಮೂಲಕ ಧೂಳಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.

ಧೂಳಿನಿಂದ ಶೇಕರಿಸಿದ ನೀರು ಕಲುಷಿತವಾಗುತ್ತಿದೆ

ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ

ರೈಲ್ವೇ ಕ್ರಾಸಿಂಗ್ ಬಳಿಯಿಂದ ಬೆಂಗಳೂರು ಹೈವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿರುವ ಕಾರಣದಿಂದ ಇಲ್ಲಿ ಜನ ಸಂಚಾರ ವಿರಳವಾಗಿದೆ. ರಸ್ತೆ ಮಧ್ಯದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ತಡೆ ಗೋಡೆಯಂತಾಗಿದೆ. ಇದೇ ಕಾರಣದಿಂದ ಮನೆಗಳ್ಳತನ ನಡೆದಿವೆ. ನಿನ್ನೆ (ಫೆಬ್ರವರಿ 10) ಅಂಗಡಿಗಳ ಸರಣಿ ಕಳ್ಳತನ ಯತ್ನ ನಡೆದಿರುವುದು ಎಲ್ಲರ ಆತಂಕ್ಕೆ ಕಾರಣವಾಗಿದೆ. ನಿನ್ನೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಕಳ್ಳರು ಸಾಲು ಸಾಲು ಅಂಗಡಿಗಳನ್ನು ಕಳ್ಳತನ ಮಾಡಲು ಯತ್ನಸಿದ್ದಾರೆ. ಕಬ್ಬಿಣದ ರಾಡ್ ಮೂಲಕ ಅಂಗಡಿಗಳ ಶೆಟರ್ ಮುರಿಯಲು ಯತ್ನ ಮಾಡಿದ್ದಾರೆ. ಕಳ್ಳತನ ಯತ್ನದ ಕೃತ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ. ಅಮೃತ್ ಹೇರ್ ಸಲೂನ್ನನ್ನು ನಕಲಿ ಕೀ ಬಳಸಿ ಶೆಟರ್ ಓಪನ್ ಮಾಡಿದ ಕಳ್ಳರು ಡ್ರಾನಲ್ಲಿ ಇಟ್ಟಿದ್ದ 8,000 ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ಕಟಿಂಗ್ ಶಾಪ್ ಮಾಲೀಕ ಹೇಳಿದ್ದಾರೆ. ಜನ ಸಂಚಾರ ವಿರಳವಾದ ಕಾರಣ ಕಳ್ಳತನ ನಡೆಯುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಧೂಳಿನಿಂದ ಮಾಸ್ಕ್ ಹಾಕಿಕೊಂಡು ಓಡಾಡುತ್ತಿರುವ ಜನರು

ಕಳ್ಳತನಕ್ಕೆ ತನ್ನ

ಇದನ್ನೂ ಓದಿ

India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

Maha Shivaratri; ಕಾಯುವನೇ ಶಿವ?: ಕಣ್ಣು ಬಿಡಡ ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ

Published On - 4:36 pm, Thu, 11 March 21