ಚಿಕ್ಕಮಗಳೂರು: ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು
ಮಾ.29ಕ್ಕೆ ನಿಗದಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಚಿಕ್ಕಮಗಳೂರು ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮುಂದಾಗಿವೆ.
ಚಿಕ್ಕಮಗಳೂರು: ಮಾ.29ಕ್ಕೆ ನಿಗದಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮುಂದಾಗಿವೆ. ಮನೆ, ಜಮೀನು ದಾಖಲೆ ಪತ್ರ ಮಾಡಿಸಿಕೊಳ್ಳಲು ಗ್ರಾಮಸ್ಥರು ಹಲವು ದಶಕಗಳಿಂದ ಹೋರಾಟ ಮಾಡುತ್ತಿವೆ. ಪ್ರತಿ ಚುನಾವಣೆ ವೇಳೆ ಜಿಲ್ಲಾಡಳಿತ ಭರವಸೆ ಕೊಟ್ಟು ಕೈ ಚೆಲ್ಲಿ ಕೂರುತ್ತಿದೆ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಮನೆ, ಜಮೀನು ದಾಖಲೆ ಪತ್ರ ಮಾಡಿಸಿಕೊಳ್ಳಲು ಹಲವು ದಶಕಗಳಿಂದ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಚುನಾವಣೆ ವೇಳೆ ಭರವಸೆ ಕೊಟ್ಟು ಸುಮ್ಮನಾಗುವ ಜಿಲ್ಲಾಡಳಿತ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕುಂದೂರು, ಮಾಳಿಕೊಪ್ಪ, ಮಠದಹಳ್ಳಿ ಗ್ರಾಮಸ್ಥರು ಸಭೆ ನಡೆಸಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ ಮಾಡಿದ್ದಾರೆ. ಐದು ವರ್ಷದ ಹಿಂದೆಯೂ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾಗ, ಜಿಲ್ಲಾಡಳಿತ ದಾಖಲಾತಿ ನೀಡುವ ಭರವಸೆ ನೀಡಿತ್ತು. ಆದರೆ, ಈವರೆಗೂ ದಾಖಲಾತಿ ನೀಡಲು ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಚುನಾವಣೆ ಬಂದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಹುಡುಗಿಯರು ಜೀನ್ಸ್, ಸ್ಕರ್ಟ್ ಧರಿಸಿದರೆ, ಚುನಾವಣಾ ಅಭ್ಯರ್ಥಿ ಮದ್ಯ ಹಂಚಿದರೆ ಬಹಿಷ್ಕಾರದ ಎಚ್ಚರಿಕೆ
ಇದನ್ನೂ ಓದಿ: 35ವರ್ಷಗಳಿಂದಲೂ ಪೊಲೀಸ್ ಕಾನ್ಸ್ಟೆಬಲ್ ಕುಟುಂಬಕ್ಕೆ ಬಹಿಷ್ಕಾರ; ಮದುಮಗನಲ್ಲಿ ಮಡುಗಟ್ಟಿದ ನೋವು