ಸ್ಯಾಂಕಿ ಟ್ಯಾಂಕ್ಗೆ ಭೇಟಿ ನೀಡಿ ಫಾಲ್ಸ್ ಕೆಲಸ ಪರಿಶೀಲಿಸಿದ ಡಿಸಿಎಂ ಅಶ್ವತ್ಥ ನಾರಾಯಣ್
ಸಾರ್ವಜನಿಕರ ವಾಯುವಿಹಾರಕ್ಕೆ, ಪಾದಚಾರಿಗಳ ವಾಕಿಂಗ್ಗೆ ಅನುಕೂಲಕರವಾಗಿರುವ ಸ್ಯಾಂಕಿ ಟ್ಯಾಂಕ್ನ ಕೆಲ ಭಾಗಗಳನ್ನು ತಮ್ಮ ತಂಡದ ಜತೆ ಪರಿಶೀಲಿಸಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸ್ಯಾಂಕಿ ಕೆರೆ ಬಳಿ ಹೊಸದಾಗಿ ಸೃಷ್ಟಿಸಲು ಹೊರಟಿರುವ ಫಾಲ್ಸ್ನ ಕೆಲಸದ ಪ್ರಗತಿಯನ್ನು ಉಪ ಮುಖ್ಯಮಂತ್ರಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಸಿದ್ಧ ಜಲಮೂಲವಾದ ಸ್ಯಾಂಕಿ ಕೆರೆ ಸ್ಯಾಂಕಿ ಟ್ಯಾಂಕ್ ಎಂದೇ ಹೆಸರು ಗಳಿಸಿದೆ. ದಿನೇ ದಿನೇ ಸ್ಯಾಂಕಿ ಟ್ಯಾಂಕ್ನ ಜನಪ್ರಿಯತೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಮೂಲಸೌಕರ್ಯದ ಅವಶ್ಯಕತೆ ಅರಿತ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ದಿಢೀರ್ ಭೇಟಿ ನೀಡಿ ಕೆರೆಯ ಪ್ರದೇಶವನ್ನು ವೀಕ್ಷಿಸಿದರು. ಸಾರ್ವಜನಿಕರ ವಾಯುವಿಹಾರಕ್ಕೆ, ಪಾದಚಾರಿಗಳ ವಾಕಿಂಗ್ಗೆ ಅನುಕೂಲಕರವಾಗಿರುವ ಸ್ಯಾಂಕಿ ಟ್ಯಾಂಕ್ನ ಕೆಲ ಭಾಗಗಳನ್ನು ತಮ್ಮ ತಂಡದ ಜತೆ ಪರಿಶೀಲಿಸಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಅಷ್ಟೇ ಅಲ್ಲ ಬಳಿ ಹೊಸದಾಗಿ ಸೃಷ್ಟಿಸಲು ಹೊರಟಿರುವ ಫಾಲ್ಸ್ನ ಕೆಲಸದ ಪ್ರಗತಿಯ ಬಗ್ಗೆ ಚರ್ಚಿಸಿದರು.

ಸ್ಯಾಂಕಿ ಟ್ಯಾಂಕ್ನಲ್ಲಿ ಸೃಷ್ಟಿಸಲಾಗುತ್ತಿರುವ ಕೃತಕ ಜಲಪಾತ

ಕೃತಕ ಜಲಪಾತದ ಒಂದು ನೋಟ

ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಸ್ಯಾಂಕಿ ಟ್ಯಾಂಕ್ಗೆ ಭೇಟಿ ನೀಡಿದರು.
ಕೆರೆಯನ್ನು ಅಭಿವೃದ್ಧಿಪಡಿಸಲು ಹಲವು ಕೆಲಸಗಳು ನಡಿಯುತ್ತಿದ್ದು, ಪಾದಚಾರಿ ಮಾರ್ಗ ಅಭಿವೃದ್ಧಿಪಡುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಸಾರ್ವಜನಿಕರು ಸ್ಯಾಂಕಿ ಟ್ಯಾಂಕ್ ಪಕ್ಕ ಸೃಷ್ಟಿಸುತ್ತಿರುವ ಫಾಲ್ಸ್ ನಿರ್ಮಾಣದ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಿದರು.
ಪ್ರಸ್ತುತ ಇವರು ಉನ್ನತ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲ ಮತ್ತು ಜೀವನೋಪಾಯ ಸಚಿವರಾಗಿದ್ದಾರೆ. ಹಾಗೂ ಮಲ್ಲೇಶ್ವರಂ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯರು. 20 ಆಗಸ್ಟ್ 2019ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾದ್ದರು.
ಅಶ್ವತ್ ನಾರಾಯಣ್ ಅವರು ಟಿ.ಕೆ ನಾರಾಯಣಪ್ಪ ಮತ್ತು ವಿ.ಎಲ್ ಪದ್ಮಮ್ಮ ಅವರ ಪುತ್ರ. ಫೆಬ್ರವರಿ 02, 1969ರಂದು ಜನಿಸಿದರು. ಹಾಗೂ ಇವರು ಎಮ್ಬಿಬಿಎಸ್ ಪದವೀಧರರು. 2004ರಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರ ಒತ್ತಾಯಕ್ಕೆ ಕಾಲೇಜು ಓಪನ್ ಮಾಡಿದ್ದೇವೆ -DCM ಡಾ. ಅಶ್ವತ್ಥ್ ನಾರಾಯಣ
CN Ashwath Narayan Birthday ಇಂದು ಡಾ. ಸಿ.ಎನ್. ಅಶ್ವತ್ ನಾರಾಯಣ್ಗೆ ಹುಟ್ಟುಹಬ್ಬದ ಸಂಭ್ರಮ
Published On - 5:48 pm, Thu, 11 March 21