CN Ashwath Narayan Birthday ಇಂದು ಡಾ. ಸಿ.ಎನ್. ಅಶ್ವತ್ ನಾರಾಯಣ್​ಗೆ​ ಹುಟ್ಟುಹಬ್ಬದ ಸಂಭ್ರಮ

ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್​ ಅಶ್ವತ್ಥ್ ನಾರಾಯಣ್​​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

CN Ashwath Narayan Birthday ಇಂದು ಡಾ. ಸಿ.ಎನ್. ಅಶ್ವತ್ ನಾರಾಯಣ್​ಗೆ​ ಹುಟ್ಟುಹಬ್ಬದ ಸಂಭ್ರಮ
ಡಾ. ಸಿ.ಎನ್​ ಅಶ್ವಥ್​ ನಾರಾಯಣ್​
shruti hegde

|

Feb 02, 2021 | 9:32 AM


ಬೆಂಗಳೂರು: ಪ್ರಸ್ತುತ ಕರ್ನಾಟಕ 8ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಎನ್​ ಅಶ್ವತ್ ನಾರಾಯಣ್​ ಅವರಿಗೆ ಇಂದು(ಫೆ.02) ಹುಟ್ಟುಹಬ್ಬದ ಸಂಭ್ರಮ. 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಅಶ್ವತ್ಥನಾರಾಯಣ​. ಮಾನ್ಯ ಉಪಮುಖ್ಯಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರ ಕೃಪೆ ಸದಾ ಇರಲಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್​ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಹಾಗೂ ಅಭಿಮಾನ ಬಳಗ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.ಪ್ರಸ್ತುತ ಇವರು ಉನ್ನತ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲ ಮತ್ತು ಜೀವನೋಪಾಯ ಸಚಿವರಾಗಿದ್ದಾರೆ. ಹಾಗೂ ಮಲ್ಲೇಶ್ವರಂ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯರು. 20 ಆಗಸ್ಟ್​ 2019ರಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್​ ಸಚಿವರಾಗಿ ಆಯ್ಕೆಯಾದರು.

ಅಶ್ವತ್ ನಾರಾಯಣ್​ ಅವರು ಟಿ.ಕೆ ನಾರಾಯಣಪ್ಪ ಮತ್ತು ವಿ.ಎಲ್​ ಪದ್ಮಮ್ಮ ಅವರ ಪುತ್ರ. ಫೆಬ್ರವರಿ 02, 1969ರಂದು ಜನಿಸಿದರು. ಹಾಗೂ ಇವರು ಎಮ್​ಬಿಬಿಎಸ್​ ಪದವೀಧರರು. 2004ರಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಿದರು.

https://tv9kannada.com/union-budget-2021-stock-market-end-with-heavy-serge

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada