Horoscope ದಿನ ಭವಿಷ್ಯ | ಈ ರಾಶಿಯವರಿಗೆ ಉದ್ಯೋಗ ಪ್ರಾಪ್ತಿ ಭಾಗ್ಯವಿದೆ
Today Horoscope ಮಾರ್ಚ್ 12, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಚತುರ್ದಶಿ ತಿಥಿ, ಶುಕ್ರವಾರ, ಮಾರ್ಚ್ 10, 2021. ಶತಭಿಷೆ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 10.55 ರಿಂದ ಇಂದು ಬೆಳಿಗ್ಗೆ 12.24ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.26. ಸೂರ್ಯಾಸ್ತ: ಸಂಜೆ 6.25.
ತಾ.12-03-2021 ರ ಶುಕ್ರವಾರದ, ರಾಶಿಭವಿಷ್ಯ
ಮೇಷ: ವಿನಾಕಾರಣ ನಿಂದನೆಯ ಸಂಭವವಿದೆ. ಖರ್ಚುಹೆಚ್ಚಾಗುವುದು ಯೋಗ ಇರುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವುದು. ಶುಭ ಸಂಖ್ಯೆ: 9
ವೃಷಭ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 2
ಮಿಥುನ: ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವುದು. ಹಳೆಯ ಸಾಲ ತೀರುವುದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವವು. ಶುಭ ಸಂಖ್ಯೆ: 6
ಕರ್ಕ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವುದು. ಶುಭ ಸಂಖ್ಯೆ: 6
ಸಿಂಹ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ. ಹಿರಿಯರ ಸಲಹೆ ದೊರೆಯುವುದು. ಶುಭ ಸಂಖ್ಯೆ: 8
ಕನ್ಯಾ: ಅಪೇಕ್ಷಿತ ಸ್ಥಾನಮಾನಗಳು ದೊರೆಯುವವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂತ ಅಧಿಕ ಖರ್ಚು ಇರುವುದು. ಶುಭ ಸಂಖ್ಯೆ: 4
ತುಲಾ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 1
ವೃಶ್ಚಿಕ: ವೃತ್ತಿಪರತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ:7
ಧನು: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು. ಶುಭ ಸಂಖ್ಯೆ: 3
ಮಕರ: ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ. ಶುಭ ಸಂಖ್ಯೆ: 6
ಕುಂಭ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡಯುವುದು ಉತ್ತಮ. ಶುಭ ಸಂಖ್ಯೆ: 2
ಮೀನ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವುದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 1 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937
Published On - 6:27 am, Fri, 12 March 21