AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 

ವಾಷಿಂಗ್ಟನ್​​ ವಿಶ್ವವಿದ್ಯಾಲಯವು ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿದೆ ಮತ್ತು ಅದಕ್ಕೆ ಕಾರಣವನ್ನೂ ನೀಡಿದೆ.

ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Mar 12, 2021 | 6:46 AM

Share

ಜಾಬ್​ಗೆ ಸೇರಿದ ಮೇಲೆ ಜೀವನವೇ ಮುಗಿಯಿತು ಎಂಬುದು ಅನೇಕರ ಭಾವನೆ. ಕೆಲವರ ಪಾಲಿಗೆ ಇದು ನಿಜವೂ ಹೌದು. ಏಕೆಂದರೆ, ಕೆಲಸಕ್ಕೆ ಸೇರಿದ ಮೇಲೆ ಬಾಸ್​ ಹೇಳಿದಂತೆ ಕೇಳಬೇಕು. ರಾತ್ರಿ ಪಾಳಿಗೆ ಬರುವಂತೆ ಹೇಳಿದರೆ ಮರುಮಾತನಾಡದೆ ಬರಬೇಕು. ಆದರೆ, ಇನ್ನುಮುಂದೆ ನೈಟ್​ ಶಿಫ್ಟ್​ಗೆ ಓಕೆ ಎನ್ನುವ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಿ. ಏಕೆಂದರೆ, ನಿರಂತರ ರಾತ್ರಿ ಪಾಳಿಯಿಂದ ನಿಮ್ಮ ಆರೋಗ್ಯ ಸಂಪೂರ್ಣವಾಗಿ ಹದಗೆಡಬಹುದಂತೆ! ಹೀಗೊಂದು ಎಚ್ಚರಿಕೆಯನ್ನು ಹೊಸ ಅಧ್ಯಯನ ನೀಡಿದೆ. ವಾಷಿಂಗ್ಟನ್​​ ವಿಶ್ವವಿದ್ಯಾಲಯ ಈ ಆತಂಕಕಾರಿ ಮಾಹಿತಿ ಹೊರ ಹಾಕಿದೆ. ಅಷ್ಟೇ ಅಲ್ಲ, ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿ,  ಅದಕ್ಕೆ ಕಾರಣವನ್ನೂ ನೀಡಿದೆ. ಈ ಅಧ್ಯಯನ ಹೇಳುವ ಪ್ರಕಾರ ದೀರ್ಘಕಾಲ ರಾತ್ರಿ ಪಾಳಿ ಮಾಡಿದರೆ ಕ್ಯಾನ್ಸರ್​ ವಕ್ಕರಿಸಬಹುದಂತೆ!

ಪ್ರತಿ ವ್ಯಕ್ತಿ ರಾತ್ರಿ ಹೊತ್ತು ನಿದ್ರಿಸಬೇಕು ಮತ್ತು ಮುಂಜಾನೆ ಏಳಬೇಕು. ಆದರೆ, ರಾತ್ರಿ ಪಾಳಿಯಿಂದ ಇದು ತಲೆಕೆಳಗಾಗುತ್ತದೆ. ನೈಟ್​ ಶಿಫ್ಟ್​ ಮಾಡುವ ವ್ಯಕ್ತಿ ಹಗಲು ನಿದ್ರಿಸಿ ರಾತ್ರಿ ಎಚ್ಚರ ಇರುತ್ತಾನೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು, ಈ ಪದ್ಧತಿ ರೂಢಿಸಿಕೊಳ್ಳುವುದರಿಂದ ಡಿಎನ್​ಎ ಕೂಡ ಹಾನಿಗೆ ತುತ್ತಾಗುತ್ತದೆ. ಇದು ಕ್ಯಾನ್ಸರ್​​ಗೆ ಎಡೆಮಾಡಿಕೊಡಬಹುದು ಎನ್ನುತ್ತಿದೆ ಅಧ್ಯಯನ.

ಈ ರೀತಿ ರಾತ್ರಿ ಪಾಳಿ ಮಾಡುವವರನ್ನು ತಜ್ಞರ ತಂಡ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಅವರಲ್ಲಿ ಕ್ಯಾನ್ಸರ್​ ಕಾಣಿಸಿಕೊಂಡವರ ಪ್ರಮಾಣ ಹೆಚ್ಚಿದೆಯಂತೆ. ನಿದ್ರೆಯ ಅಸಮತೋಲನವೇ ಇದಕ್ಕೆ ನೇರ ಕಾರಣ ಎಂದು ಅಧ್ಯಯನ ತಿಳಿಸಿದೆ. ಇದರ ಜತೆಗೆ ಇನ್ನೂ ಅನೇಕ ಅಸಮತೋಲನಗಳು ನೈಟ್​ಶಿಫ್ಟ್​ನಿಂದ ಉಂಟಾಗಬಹುದು ಎಂದು ಅಧ್ಯಯನ ತಿಳಿಸಿದೆ.

ಹಗಲು ನಿದ್ರೆ ಮಾಡುವುದರಿಂದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದಿಲ್ಲ. ಹೀಗಾದಾಗ, ವಿಟಮಿನ್​ ಕೊರತೆ ಕೂಡ ಉಂಟಾಗಲಿದ್ದು, ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ

ಬೆಳಗೆದ್ದು ಗ್ರೀನ್​ ಟೀ ಅಥವಾ ಬ್ಲಾಕ್​ ಟೀ ಕುಡಿತೀರಾ? ಹಾಗಿದ್ರೆ ಈ ರೋಗಗಳು ನಿಮ್ಮ ಬಳಿ ಸುಳಿಯಲ್ಲ

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!