AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ

ಸದರಿ ಅಧ್ಯಯನ ಹೇಳುವಂತೆ ಕೊರೊನಾ ಲಾಕ್​ಡೌನ್​ ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆ ಅಡ್ಡ ಪರಿಣಾಮ ಬೀರಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ ಶೇ.85ಕ್ಕೂ ಹೆಚ್ಚು ಮಂದಿ ವರ್ಕ್​ ಫ್ರಂ ಹೋಮ್​ ನಮಗೆ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದು, ಶೇ.81 ಮಂದಿ ಕಚೇರಿ ಕೆಲಸ ಮತ್ತು ವೈಯಕ್ತಿಕ ಕೆಲಸದ ಮಧ್ಯೆ ನಮಗೆ ವ್ಯತ್ಯಾಸ ಕಂಡುಕೊಳ್ಳುವುದೇ ಕಷ್ಟವಾಯಿತು ಎಂದಿದ್ದಾರೆ.

ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ
ಸಾಂದರ್ಭಿಕ ಚಿತ್ರ
Skanda
| Edited By: |

Updated on: Mar 11, 2021 | 9:29 PM

Share

ಇತ್ತೀಚೆಗೆ ನಡೆಸಲಾಗಿರುವ ಒಂದು ಅಧ್ಯಯನದ ಪ್ರಕಾರ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವ ಮಂದಿ ಪೈಕಿ ಉದ್ಯೋಗ ಮತ್ತು ವೈಯಕ್ತಿಕ ಕೆಲಸ ಎರಡನ್ನೂ ಏಕಕಾಲಕ್ಕೆ ನಿಭಾಯಿಸಲು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಒತ್ತಡ ಎದುರಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಶೇ.61ಕ್ಕೂ ಹೆಚ್ಚು ಮಹಿಳೆಯರು ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಕುಳಿತು ಕೆಲಸ ಮಾಡುವಾಗ ತಮ್ಮ ಪುರುಷ ಸಂಗಾತಿಗಿಂತಲೂ ಹೆಚ್ಚಿನ ಒತ್ತಡ ಅನುಭವಿಸಿದ್ದಾರಂತೆ. ಈ ಬಗ್ಗೆ SCIKEY Market Network ವರದಿ ತಯಾರಿಸಿದ್ದು, ಅಧ್ಯಯನದಲ್ಲಿ ಬಯಲಾದ ಅಂಶ ಅಚ್ಚರಿಗೆ ಕಾರಣವಾಗಿದೆ.

ಸದರಿ ಅಧ್ಯಯನ ಹೇಳುವಂತೆ ಕೊರೊನಾ ಲಾಕ್​ಡೌನ್​ ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆ ಅಡ್ಡ ಪರಿಣಾಮ ಬೀರಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ ಶೇ.85ಕ್ಕೂ ಹೆಚ್ಚು ಮಂದಿ ವರ್ಕ್​ ಫ್ರಂ ಹೋಮ್​ ನಮಗೆ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದು, ಶೇ.81 ಮಂದಿ ಕಚೇರಿ ಕೆಲಸ ಮತ್ತು ವೈಯಕ್ತಿಕ ಕೆಲಸದ ಮಧ್ಯೆ ನಮಗೆ ವ್ಯತ್ಯಾಸ ಕಂಡುಕೊಳ್ಳುವುದೇ ಕಷ್ಟವಾಯಿತು ಎಂದಿದ್ದಾರೆ. ಅಧ್ಯಯನದಲ್ಲಿ 2,500 ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳು ಪಾಲ್ಗೊಂಡಿದ್ದು, ಐಟಿ, ಆರೋಗ್ಯ, ಮಾಧ್ಯಮ, ಹಣಕಾಸು, ಮನರಂಜನೆ, ಶಿಕ್ಷಣ, ತಂತ್ರಜ್ಞಾನ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಇನ್ನು ಇದೇ ಅಧ್ಯಯನದಲ್ಲಿ ಶೇ.24ರಷ್ಟು ಮಹಿಳೆಯರು ಕಚೇರಿ ಕೆಲಸದ ಒತ್ತಡದ ಮಧ್ಯೆಯೂ ತಮ್ಮ ವೈಯಕ್ತಿಕ ಕೆಲಸಕ್ಕೆ ಸಮಯ ಹುಡುಕಿಕೊಳ್ಳುವುದು ಸಾಧ್ಯವಾಗಿತ್ತು ಎಂದಿದ್ದಾರೆ. ಶೇ.21ರಷ್ಟು ಮಹಿಳೆಯರಂತೂ ವರ್ಕ್​ ಫ್ರಂ ಹೋಮ್ ಹೀಗೇ ಮುಂದುವರೆಯಲಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿಕೊಂಡರೆ, ಶೇ.48ರಷ್ಟು ಮಂದಿ ಕಚೇರಿ ಕೆಲಸಕ್ಕೂ ಅವಕಾಶ ಇರಬೇಕು ಎಂದು ಬಯಸಿದ್ದಾರೆ. ಒಟ್ಟಾರೆ ಅಧ್ಯಯನದಲ್ಲಿ ಶೇ.61ರಷ್ಟು ಮಹಿಳೆಯರು ತಮಗೆ ಉದ್ಯೋಗ ಮತ್ತು ವೈಯಕ್ತಿಕ ಕೆಲಸದ ಅವಶ್ಯಕತೆಗಳನ್ನು ಪೂರೈಸುವುದು ಸವಾಲಾಯಿತು. ಕುಟುಂಬ ಮತ್ತು ಕಚೇರಿಗೆ ಎಷ್ಟು ಸಮಯ ಕೊಡಬೇಕು, ಏನು ಮಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವೆನಿಸಿತು ಎಂದು ಹೇಳಿಕೊಂಡಿದ್ದಾರೆ.

ಅಂತೆಯೇ, ಮನೆಯಿಂದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಗಳು ಹೇಗೆ ಸಹಕರಿಸಿದವು ಎಂಬ ಪ್ರಶ್ನೆಗೆ ಶೇ.36ರಷ್ಟು ಮಹಿಳೆಯರು ಸಂಸ್ಥೆಯ ಸಹಕಾರ ಅತ್ಯುತ್ತಮವಾಗಿತ್ತು ಎಂದರೆ, ಶೇ.21 ಮಂದಿ ಬೇಸರ ಹೊರಹಾಕಿದ್ದಾರೆ. ಇನ್ನೊಂದೆಡೆ ಮನೆಯಿಂದ ಕೆಲಸ ಮಾಡಲು ಸಂಸ್ಥೆ ಒದಗಿಸಿದ ಸೌಲಭ್ಯದ ಬಗ್ಗೆ ಶೇ.21ಮಂದಿ ಸಂತಸ ವ್ಯಕ್ತಪಡಿಸಿದರೆ, ಶೇ.8 ಮಂದಿ ಉಪಕರಣಗಳ ಹೊರತಾಗಿ ಇಂಟರ್​ನೆಟ್​ ಸೌಲಭ್ಯವನ್ನು ತಾವೇ ಭರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಶೇ.65ರಷ್ಟು ಮಹಿಳೆಯರು ಕೆಲಸದ ಅವಧಿ ಇಳಿಸಬೇಕು ಅಥವಾ ಕೆಲಸದ ಅವಧಿ ಬದಲಾಯಿಸಿಕೊಳ್ಳಲು ಅವಕಾಶ ಬೇಕು ಎಂದೂ ಬಯಸಿದ್ದಾರೆ. ವರ್ಕ್​ ಫ್ರಂ ಹೋಮ್​ನಿಂದಾಗಿ ಮಾನಸಿಕ ಒತ್ತಡವೂ ಹೆಚ್ಚಾಗಿದ್ದು, ಅದನ್ನು ನಿಭಾಯಿಸಲು ಸಂಸ್ಥೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿದ್ದಾಗಿ ಶೇ.12ರಷ್ಟು ಜನ ಹೇಳಿದ್ದು, ಶೇ.6ರಷ್ಟು ಜನ ಮಾನಸಿಕ ನೆಮ್ಮದಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಸಂಸ್ಥೆ ಮಾಹಿತಿ ಒದಗಿಸಿತ್ತೆಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸದರಿ ವರದಿಯು ಹೊಸ ಅಂಶವೊಂದನ್ನು ಬಯಲು ಮಾಡಿದ್ದು, ಲಾಕ್​ಡೌನ್​ ಅವಧಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಸಹಕರಿಸಿದೆ.

ಇದನ್ನೂ ಓದಿ: Women in road accidents: ಮಹಿಳೆಯರು ಚಿಕ್ಕಗಾತ್ರದ ಕಾರುಗಳನ್ನು ಓಡಿಸುವುದರಿಂದಲೇ ಹೆಚ್ಚು ಆಪಘಾತಕ್ಕೀಡಾಗುತ್ತಾರೆ: ಸಂಶೋಧನೆ

Self Love: ನಿಮ್ಮನ್ನು ನೀವು ಅಗಾಧವಾಗಿ ಪ್ರೀತಿಸಿಕೊಂಡರೆ ಮಾತ್ರ ಈ ಜಗತ್ತನ್ನು ಪ್ರೀತಿಸುವುದು ಸುಲಭ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ