Women in road accidents: ಮಹಿಳೆಯರು ಚಿಕ್ಕಗಾತ್ರದ ಕಾರುಗಳನ್ನು ಓಡಿಸುವುದರಿಂದಲೇ ಹೆಚ್ಚು ಆಪಘಾತಕ್ಕೀಡಾಗುತ್ತಾರೆ: ಸಂಶೋಧನೆ

ಇಂಡಿಯನ್ ಇನ್ಸಿಟ್ಯೂಟ್​ ಆಫ್ ಹೈವೇ ರೀಸರ್ಚ್ ಸಂಸ್ಥೆಯ ಸಂಶೋಧನಾಕಾರರು ಅಪಘಾತಗಳಿಗೆ ಸಂಬಂಧಿಸಿದಂತೆ ಲಿಂಗ ತಾರತಮ್ಯ ಏನಾದರೂ ಪಾತ್ರ ನಿರ್ವಹಿಸತ್ತದೆಯೇ ಅಥವಾ ಮಹಿಳೆಯರ ದೇಹ ರಚನೆ ಹೆಚ್ಚು ಗಾಯಗೊಳ್ಳುವಂಥ ಪ್ರಮೇಯವನ್ನು ಸೃಷ್ಟಿಸುತ್ತದೆಯೇ ಎನ್ನುವುದನ್ನು ಸಮೀಕ್ಷೆ ನಡೆಸಿದ್ದಾರೆ.

Women in road accidents: ಮಹಿಳೆಯರು ಚಿಕ್ಕಗಾತ್ರದ ಕಾರುಗಳನ್ನು ಓಡಿಸುವುದರಿಂದಲೇ ಹೆಚ್ಚು ಆಪಘಾತಕ್ಕೀಡಾಗುತ್ತಾರೆ: ಸಂಶೋಧನೆ
ಎರಡು ಕಾರುಗಳ ನಡುವೆ ಡಿಕ್ಕಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 11, 2021 | 10:14 PM

ಗುರುವಾರದಂದು ಬಿಡುಗಡೆಯಾಗಿರುವ ಸಂಶೋಧನಾ ವರದಿಯೊಂದರ ಪ್ರಕಾರ ರಸ್ತೆ ಅಪಘಾತಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಗಂಭೀರವಾದ ಗಾಯಗಳಿಗೆ ಈಡಾಗುವದರ ಹಿಂದೆ ಅವರು ಸಾಮಾನ್ಯವಾಗಿ ಡ್ರೈವ್ ಮಾಡುವ ಹಗುರ ಮತ್ತು ಸಣ್ಣ ಸೈಜಿನ ಕಾರುಗಳ ಜೊತೆಗೆ ಅಪಘಾತಗಳ ಸ್ವರೂಪ ಕಾರಣವಾಗುತ್ತದೆ.

ಇಂಡಿಯನ್ ಇನ್ಸಿಟ್ಯೂಟ್​ ಆಫ್ ಹೈವೇ ರೀಸರ್ಚ್ ಸಂಸ್ಥೆಯ ಸಂಶೋಧನಾಕಾರರು ಅಪಘಾತಗಳಿಗೆ ಸಂಬಂಧಿಸಿದಂತೆ ಲಿಂಗ ತಾರತಮ್ಯ ಏನಾದರೂ ಪಾತ್ರ ನಿರ್ವಹಿಸತ್ತದೆಯೇ ಅಥವಾ ಮಹಿಳೆಯರ ದೇಹ ರಚನೆ ಹೆಚ್ಚು ಗಾಯಗೊಳ್ಳುವಂಥ ಪ್ರಮೇಯವನ್ನು ಸೃಷ್ಟಿಸುತ್ತದೆಯೇ ಎನ್ನುವುದನ್ನು ಸಮೀಕ್ಷೆ ನಡೆಸಿದ್ದಾರೆ. 1998ರಿಂದ 2015ರವರೆಗೆ ಪೊಲೀಸರು ಮುಖಾಮುಖಿಯಾಗಿ ಮತ್ತು ಪಕ್ಕದಿಂದ ಆಗುವ ಅಪಘಾತಗಳಲ್ಲಿ ಜಖಂಗೊಂಡ ವಾಹನಗಳನ್ನು ಟೋ ಮಾಡಿಕೊಂಡು ಹೋಗಿರುವ ದಾಖಲೆ ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿದ್ದಾರೆ. ಮುಖಾಮುಖಿ ಡಿಕ್ಕಿಗಳಿಂದ ಆಗಿರುವ ಅಪಘಾತಗಳಲ್ಲಿ ಮಹಿಳೆಯರು ಮೂಳೆ ಮುರಿದುಕೊಂಡಿರುವ, ಅಷ್ಟೇನೂ ಘಾತಕವಲ್ಲದ ಮತ್ತು ಕನ್ಕಷನ್​ಗೆ ಒಳಗಾದ ಪ್ರಕರಣಗಳು ಪುರುಷರಿಗಿಂತ ಮೂರುಪಟ್ಟು ಜಾಸ್ತಿಯಿವೆ. ಹಾಗೆಯೇ, ಇನ್ನೂ ಅಪಾಯಕಾರಿಯೆನಿಸುವ ಮೆದುಳಿನ ಗಾಯ ಹಾಗೂ ಶ್ವಾಸಕೋಶದೊಳಗೆ ಗಾಳಿ ತೂರಿ ಆಗುವ ಗಂಭೀರ ಸಮಸ್ಯೆಗಳು (lung collapse) ಪುರಷರಿಗಿಂತ ಮಹಿಳೆಯರಲ್ಲಿ ಎರಡು ಪಟ್ಟು ಜಾಸ್ತಿಯಿದೆ.

ಮಿನಿವ್ಯಾನ್ ಮತ್ತು ಎಸ್​ಯುವಿ ವಾಹನಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆಹಾಕಿರುವ ಸಂಶೋಧನಾಕಾರರು, ಈ ವಾಹನಗಳಿಗೆ ಸಂಭವಿಸಿರುವ ಅಪಘಾತಗಳಲ್ಲಿ ಪುರುಷ ಮತ್ತು ಮಹಿಳೆಯರು ಸರಿಸಮನಾಗಿ ಭಾಗಿಯಾಗಿದ್ದಾರೆ. ಆದರೆ ಕಾರು ಅಪಘಾತಗಳಲ್ಲಿ ಶೇಕಡಾ 70 ರಷ್ಟು ಮಹಿಳೆಯರು ಭಾಗಿಯಾಗಿದ್ದರೆ, ಪುರುಷರ ಪಾಲು ಶೇಕಡಾ 60ರಷ್ಟಿದೆ. ಪಿಕಪ್​​ಗಳ ಸಂದರ್ಭದಲ್ಲಿ ಶೇಕಡಾ 20 ರಷ್ಟು ಪುರುಷರು ಆಪಘಾತಕ್ಕೀಡಾಗಿದ್ದರೆ ಮಹಿಳೆಯರ ಶೇಕಡಾ 5 ರಷ್ಟು ಮಾತ್ರ ಎಂದು ಸಂಶೋಧನೆ ತಿಳಿಸುತ್ತದೆ.

Women in accidents

ಅಪಘಾತವೊಂದರಲ್ಲಿ ಜಖಂಗೊಂಡಿರುವ ಚಿಕ್ಕಗಾತ್ರದ ಕಾರು

ಎರಡು ವಾಹನಗಳ ಮುಖಾಮುಖಿ ಹಾಗೂ ಮುಂದಿರುವ ವಾಹನಕ್ಕೆ ಹಿಂಬದಿಯಿಂದ ಗುದ್ದುವ ಡಿಕ್ಕಿಗಳಲ್ಲಿ ಪುರುಷರೇ ಹೆಚ್ಚು ಸಲ ಡ್ರೈವಿಂಗ್ ಅಸನದಲ್ಲಿ ಇರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಲಭ್ಯವಿರುವ ಸಂಖ್ಯೆಗಳ ಆಧಾರದಲ್ಲಿ ಹೇಳುವುದಾದರೆ ಮಹಿಳೆಯರೇ ಸಾಮಾನ್ಯವಾಗಿ ಹಗುರ ಮತ್ತು ಸಣ್ಣ ಸೈಜಿನ ಕಾರಗಳ್ನ್ನು ಓಡಿಸುತ್ತಾರೆ. ಪುರುಷರಿಂದ ಮುಖಾಮುಖಿಯಾಗಿ ಇಲ್ಲವೆ ಹಿಂಬದಿಯಿಂದ ಗುದ್ದುವುದರಿಂದ ಅಪಘಾತಕ್ಕೊಳಗಾಗುವ ಕಾರುಗಳನ್ನು ಹೆಚ್ಚಾಗಿ ಮಹಿಳೆಯರು ಓಡಿಸುತ್ತಿರುತ್ತಾರೆ. ಈ ಸಮಸ್ಯೆಯ ಕಡೆ ಗಮನ ಹರಿಸಿದ್ದೇಯಾದರೆ ಅಪಘಾತ ಮತ್ತು ಗಾಯಗಳಾಗುವ ಸಂಭಾವ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ, ಎಂದು ಸಂಶೋಧನೆಯಲ್ಲಿ ಭಾಗಿಯಾಗಿದ್ದ ತಜ್ಞೆಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

ಹಾಗೆಯೇ, ಸಂಶೋಧನೆ ಪ್ರಕಾರ, ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಕಾಲಿನ ಗಾಯಕ್ಕೀಡಾಗುತ್ತಾರೆ. ಹಾಗಾಗಿ ಕಾರು ಸುರಕ್ಷತೆ ಬಗ್ಗೆ ಸಂಶೋಧನೆ ನಡೆಸುವವರು ಪುರುಷ ಮತ್ತು ಮಹಿಳೆಯರ ದೇಹ ರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಶ್ ಟೆಸ್ಟ್​ ಡಮ್ಮಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಂಶೋಧನೆ ತಿಳಿಸುತ್ತದೆ.

Published On - 10:11 pm, Thu, 11 February 21