Valentine’s Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!

Valentines Day: ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

Valentine's Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!
ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ!
Follow us
guruganesh bhat
| Updated By: ರಶ್ಮಿ ಕಲ್ಲಕಟ್ಟ

Updated on: Feb 12, 2021 | 6:56 PM

ಅವರಿಬ್ಬರಿಗೆ ಪ್ರೇಮವಾಯಿತು ಎಂಬ ಒಂದು ಸಾಲು ಇಡೀ ಪ್ರೇಮಕಥೆಗಳ ಸಾರ. ಮೊದಲಾದರೆ, ಪ್ರೇಮ ಕಥೆಗಳಲ್ಲಿ ಅವನು ಅವಳು ಎಂದರೆ ಸಾಕಿತ್ತು. ಈಗ ಅವನಿಗೂ ಇವನಿಗೂ ಅಥವಾ ಅವಳಿಗೂ ಇವಳಿಗೂ ಪ್ರೇಮವುಂಟಾಯಿತು ಎಂದು ಬರೆಯುವಷ್ಟು ಕಾಲ ಬದಲಾಗಿದೆ, ಆದರೆ ಪ್ರೇಮ ಮಾತ್ರ ಅದೇ, ಸ್ಥಿರ.

ಮಾತು ಮೌನ ಎಲ್ಲದರಲ್ಲೂ ಪ್ರೇಮದ ತಾಪಮಾನದ ಹವೆ. ಅದು ಬಿಸಿಲು ಕಾಲವಿರಲಿ ಅಥವಾ ಚಳಿ ಇಲ್ಲವೇ ಸುಡು ಬಿಸಿಲು. ಕಡು ಪ್ರೇಮಕ್ಕೆ ಕಾಲದ ಪರಿವಿಲ್ಲ ಅರಿವಿಲ್ಲ. ಆಸೆ, ಇಚ್ಛೆ, ಸ್ವಪ್ನ, ಹಸಿವು, ತುರಿಕೆ, ಬಾಯಾರಿಕೆಯಷ್ಟೇ ಸಹಜ ಪ್ರೇಮ. ಅದು ನನ್ನ ಪ್ರೇಮ, ನಮ್ಮ ಪ್ರೇಮ. ಜಗಕೆ ಬಗೆಬಗೆಯ ಪ್ರೀತಿಯನ್ನು ನಮ್ಮೆದೆಯಿಂದ ಮೊಗೆಮೊಗೆದು ಕೊಟ್ಟರೆ ಅದೂ ಕ್ರಿಯೆಗೆ ತಕ್ಕುನಾಗಿಯೇ ಪ್ರತಿಕ್ರಿಯಿಸುತ್ತದೆ. ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

ಪ್ರೇಮ ಒಂದು ಅನರ್ಥಕೋಶ

ಪ್ರೇಮಕ್ಕೆ ಔಷಧಿಯನ್ನು ಆಯಾ ಕಾಲ, ಆಯಾ ಋತು ಆಯಾ ಮನಸ್ಸಿಗೆ ತಕ್ಕಂತೆ ಆಯಾ ಪ್ರೇಮಿಗಳೇ ಅರೆಯಬೇಕು. ಪ್ರೇಮವಾವುದು, ಆಕರ್ಷಣೆಯಾವುದು, ಯಾವುದು ಯಾವುದೋ ದುಸ್ವಪ್ನದಿಂದ ಆಚೆ ಎಳೆಯುವ ಮಾಯಕದ ಭಾವ ಎಂಬುದು ನಮನಮಗೇ ಅರ್ಥವಾಗಬೇಕು. ಪ್ರೇಮದ ನಮ್ಮದೇ ಶಬ್ದಕೋಶದಲ್ಲಿ ಪದಗಳುಂಟೆ? ಪದಗಳಿಗೆ ಅರ್ಥವುಂಟೇ? ಪ್ರೇಮ ಒಂದು ಅನರ್ಥಕೋಶ, ಶಿಸ್ತಿಲ್ಲದೆ ಹರಡಿದ ಬಸಳೆ ಚಪ್ಪರ. ರುಚಿರುಚಿ ಮೇಲೋಗರದಡುಗೆ.

ಎರಡು ಮಾತು ಬಂದರೆ ಅದರ ಹಿಂದೆ ಪ್ರೀತಿಯಿದೆ. ಹಾಗೆಂದು ಎರಡು ಲತ್ತೆ ಬಿಗಿದುದರ ಹಿಂದೆಯೂ ಪ್ರೇಮವೇ ಅಡಕವಾಗಿದೆ ಎಂದು ತಿಳಿಯುವವರು ಇದ್ದಾರೆ ಎಂಬುದು ಜಗದ ಸತ್ಯ. ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಆ ಕ್ಷಣಕ್ಕೆ ದಕ್ಕುವ ಅಪರಿಚಿತ ಪ್ರೇಮ ಇಡೀ ದಿನದ ದುಮ್ಮಾನಗಳನ್ನು ಇಲ್ಲವಾಗಿಸಬಹುದು. ನಮ್ಮನ್ನು ಬಂಧಿಸುವ; ಸ್ವತಂತ್ರದ ರೆಕ್ಕೆ ಉಡಿಸುವ; ವಿಮುಕ್ತಿ ಕೊಡಿಸುವ; ಇದ್ದರೂ ಇಲ್ಲದ ಇರದೆಯೂ ತುಳುಕುವ ಪ್ರೇಮ ನಮಗೆ ಶೀಘ್ರವೇ ಮದುವೆ ಮಾಡಿಸಲಿ.

ಇದನ್ನೂ ಓದಿ: Valentines Day: ಹೆಣ್ಣಿಗೆ ತುಸು ಹೆಚ್ಚೇ ನಾಚಿಕೆ ಕಣೋ.. ಸತಾಯಿಸದೇ ಕಣ್ಮುಂದೆ ಬಂದು ಬಿಡು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್