AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆಗೆ ಕೆಲ ಗಂಟೆಗಳ ಮುಂಚೆಯೂ ಈಕೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು!

ತಾಯ್ತನ ಸಾಮಾನ್ಯವಾದುದಲ್ಲ. ಅದರಲ್ಲೂ ತಾಯಿಯಾಗಿರುವಾಕೆ ನೌಕರಿಯನ್ನೂ ಮಾಡುತ್ತಿದ್ದರೆ, ಆಕೆಯ ಹೊಣೆಗಾರಿಕೆ ಮತ್ತು ಅದನ್ನು ನಿರ್ವಹಿಸಲು ಪಡುವ ಪಡಿಪಾಟಲು ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ.

ಹೆರಿಗೆಗೆ ಕೆಲ ಗಂಟೆಗಳ ಮುಂಚೆಯೂ ಈಕೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು!
ಡಾ.ಸೊಮ್ಯ ಗುಜ್ರಾರ್, ಜೈಪುರ ಮೇಯರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 12, 2021 | 5:20 PM

ಜೈಪುರ: ಕಾಯಕವೇ ಕೈಲಾಸ ಅಂತ 12ನೇ ಶತಮಾನದಲ್ಲಿ ಹೇಳಿದ ಬಸವಣ್ಣನವರು ನುಡಿದಂತೆ ನಡೆದರು. ಆದರೆ, ಅವರು ಲಿಂಗೈಕ್ಯರಾದ ನಂತರದ ಈ 9 ಶತಮಾನಗಳಲ್ಲಿ ಅವರು ಹೇಳಿದ ಮಾತನ್ನು ಎಷ್ಟು ಜನ ಪಾಲಿಸಿರಬಹುದೆಂದು ನೋಡಹೊರಟರೆ ದೊಡ್ಡ ನಿರಾಶೆ ಎದುರಾಗುತ್ತದೆ. ಬಸವಣ್ಣನವರು ಹೇಳಿದ್ದನ್ನು ಅನೇಕರು ತಮ್ಮ ಬದುಕಿನಲ್ಲಿ, ಮಾತಿನಲ್ಲಿ ಪುನರುಚ್ಛರಿಸಿರಬಹುದು, ಹಾಗೆ ನಡೆದಕೊಂಡವರು ಮಾತ್ರ ತೀರಾ ವಿರಳ. ಆದರೆ ಇಲ್ಲೊಬ್ಬ ಮಹಿಳೆ ಇದ್ದಾರೆ, ಡಾ. ಸೊಮ್ಯ ಗುರ್ಜರ್ ಅಂತ, ಅವರಿಗೆ ಬಸವಣ್ಣನವರ ಕುರಿತು ಗೊತ್ತಿದೆಯೋ ಇಲ್ಲವೋ ಅಂತ ಅವರೇ ಹೇಳಬೇಕು, ಅದರೆ ಆ ಶರಣರು 900 ವರ್ಷಗಳಷ್ಟು ಹಿಂದೆ ಹೇಳಿದ್ದನ್ನು ಅಕೆ ಆಕ್ಷರಶಃ ಪಾಲಿಸುತ್ತಿದ್ದಾರೆ.

ತಾಯ್ತನ ಸಾಮಾನ್ಯವಾದುದಲ್ಲ. ಅದರಲ್ಲೂ ತಾಯಿಯಾಗಿರುವಾಕೆ ನೌಕರಿಯನ್ನೂ ಮಾಡುತ್ತಿದ್ದರೆ, ಆಕೆಯ ಹೊಣೆಗಾರಿಕೆ ಮತ್ತು ಅದನ್ನು ನಿರ್ವಹಿಸಲು ಪಡುವ ಪಡಿಪಾಟಲು ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ.

ನಮ್ಮ ಕಥಾನಾಯಕಿ ಸೊಮ್ಯ ಜೈಪುರ ನಗರದ ಮೇಯರ್. ಇಡೀ ಜೈಪುರ ನಗರದ ಉಸ್ತುವಾರಿ ಅವರ ಹೆಗಲ ಮೇಲಿದೆ. ಅವರಿಗೆ ವೈಯಕ್ತಿಕ ಜೀವನದಲ್ಲಿ ಲಭ್ಯವಿರುವ ಐಷಾರಾಮಗಳಿಗಿಂತ ಸಾರ್ವಜನಿಕ ಸೇವೆಯೇ ಬದುಕಿನ ಗುರಿ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ತುಂಬು ಗರ್ಭಿಣಿಯಾಗಿದ್ದ ಆಕೆ ಹೆರಿಗೆಗೆ ಕೆಲವೇ ಗಂಟೆ ಮೊದಲು ಸಹ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು!

ಹೌದು, ಆಕೆ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದು ಗುರುವಾರ ಬೆಳಗಿನ ಜಾವ, ಅದರೆ ಬುಧವಾರ ತಡರಾತ್ರಿಯವರೆಗೆ ಆಕೆ ಜೈಪುರ ನಗರಸಭೆಯ ಸಭೆಯೊಂದರಲ್ಲಿ ಮಗ್ನರಾಗಿದ್ದರು.

Dr Somya Gujrar

ಡಾ.ಸೊಮ್ಯ ಗು

ಸೊಮ್ಯ ಗುರುವಾರ ಬೆಳಗ್ಗೆ ತಾವು ಮಾಡಿರುವ ಟ್ವೀಟ್​ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಕಾಯಕವೇ ಕೈಲಾಸ! ಬುಧವಾರ ತಡರಾತ್ರಿಯವರೆಗೆ ನಡೆದ ಮುನಿಸಿಪಲ್ ಕಾರ್ಪೊರೇಷನ್ ಸಭೆಯೊಂದರಲ್ಲಿ ಭಾಗಿಯಾಗಿದ್ದೆ, ರಾತ್ರಿ 12.30 ಕ್ಕೆ ಕುಕೂನ್ ಆಸ್ಪತ್ರೆಗೆ ದಾಖಲಾಗಿ ಹೆರಿಗೆ ನೋವು ಅನುಭಸಿದ ನಂತರ ಗುರುವಾರ ದೇವರ ಆಶೀರ್ವಾದಿಂದ ಬೆಳಗಿನ ಜಾವ ಗಂಡುಮಗುವಿಗೆ ಜನ್ಮ ನೀಡಿದೆ. ನಾನು ಮತ್ತು ನವಜಾತ ಶಿಶು ಆರೋಗ್ಯವಾಗಿದ್ದೇವೆ,’ ಎಂದು ಟ್ವೀಟ್ ಮಡಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿದ್ದುಕೊಂಡೇ ಮಗುವೊಂದಕ್ಕೆ ಜನ್ಮ ನೀಡಿರುವ ರಾಜಸ್ತಾನದ ಪ್ರಥಮ ಮಹಿಳೆ ಸೊಮ್ಯ ಆಗಿದ್ದಾರೆ. ಹೆರಿಗೆಗೆ ಮೊದಲು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ‘ತುಂಬು ಗರ್ಭಿಣಿಯಾಗಿರುವ ಸಮಯದಲ್ಲಿ ಕೆಲಸ ಮಾಡುವುದು ನಿಜಕ್ಕೂ ರೋಮಾಂಚಕ ಮತ್ತು ಸವಾಲು ಕೂಡ ಹೌದು. ಹೊಸ ಕೆಲಸಗಳನ್ನು, ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ನೋವುಗಳನ್ನು ಮರೆಯಲು ನನಗೆ ಸಹಾಯ ಮಾಡುತ್ತದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ವೈರಲ್ | ನಿಂದಿಸಿದವರ ಮುಂದೆಯೇ ಸಾಮ್ರಾಟನಾಗಿ ಮೆರೆದ ಸಿರಾಜ್​ ಮಾನವೀಯ ಮುಖ

ಮೂಲಗಳ ಪ್ರಕಾರ, ಗರ್ಭಾವಸ್ಥೆಯ ಕೊನೆ ಹಂತಗಳಲ್ಲೂ ಸೊಮ್ಯ ಕಚೇರಿಯ ಕೆಲಸಗಳಲ್ಲಿ ಭಾಗಿಯಾಗಿದ್ದರು. ಜನೆವರಿ 30 ರಂದು ನಡೆದ ಆಯುಷ್ಮಾನ್ ಭಾರತ್ ಮಹಾತ್ಮಾ ಗಾಂಧಿ ರಾಜಸ್ತಾನ ಅರೋಗ್ಯ ಜೀವವಿಮೆ ಯೋಜನೆಯ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ತಮ್ಮ ಗರ್ಭಾವಸ್ಥೆಯ ಕೊನೆ ತಿಂಗಳಲ್ಲಿ ಫೀಲ್ಡ್​ನಲ್ಲಿ ಕೆಲಸ ಮಾಡುವ ಜೊತೆಗೆ ಜೈಪುರ ಮುನಿಸಿಪಲ್ ಕಾರ್ಪೊರೇಷನ್​ನ ಬಜೆಟ್ ಸಹ ಮಂಡಿಸಿದರು. ಜೈಪುರ ಕಾರ್ಪೊರೇಷನ್​ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಲೂ ಆವರು ಗರ್ಭಿಣಿಯಾಗಿದ್ದರು.

ಮತ್ತೊಂದು ವಿಷಯವನ್ನು ಇಲ್ಲಿ ಹೇಳಲೇಬೇಕು. ಅವರ ಇಲ್ಲವೇ ಮಗುವಿನ ಆರೋಗ್ಯದಲ್ಲಿ ಯಾವುದೇ ಏರುಪೇರಾಗದಿದ್ದರೆ ಒಂದು ವಾರದ ನಂತರ ಕೆಲಸಕ್ಕೆ ವಾಪಸ್ಸಾಗಲು ಆಕೆ ನಿರ್ಧರಿಸಿದ್ದಾರೆ!

ಸಾರ್ವನಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮತ್ತು ತುಂಬು ಗರ್ಭಿಣಿಯಾಗಿದ್ದಾಗಲೂ ಕಚೇರಿಯಲ್ಲಿ ಕೆಲಸ ಮಾಡಿರುವ ಸೌಮ್ಯ ಅವರಿಗೆ ಸಾಮಾಹಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಲವಾರು ನೆಟ್ಟಿಗರು ಆಕೆಯನ್ನು ‘ಹೊಸಯುಗದ ಮಹಿಳೆ’ ಎಂದು ಬಣ್ಣಿಸುತ್ತಿದ್ದಾರೆ.

Published On - 5:15 pm, Fri, 12 February 21

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು