Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

Dharwad road accident ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 13 ಮಂದಿಯ ಪೈಕಿ ಬಹುತೇಕರು ಒಂದೇ ಬ್ಯಾಚ್​ನವರು. ಇದೇ ಬ್ಯಾಚ್​ಗೆ ಸೇರಿದ, ಟ್ರಿಪ್​ ಪ್ಲಾನ್​ ಮಾಡಲು ಬಳಸಿಕೊಂಡಿದ್ದ ವಾಟ್ಸಾಪ್​ ಗ್ರೂಪ್​ನಲ್ಲಿಯೂ ಇದ್ದ ಆಶಾ ಅಗಲಿದ ಗೆಳತಿಯರನ್ನು ನೆನಪಿಸಿಕೊಂಡಿದ್ದಾರೆ. ಓದು ಮುಗಿಸಿದ ಎಷ್ಟೋ ವರ್ಷಗಳ ನಂತರ ಮತ್ತೆ ಒಂದಾಗಿದ್ದೆವು. ಆದರೆ ಈಗ ದೇವರು ಮತ್ತೆ ನಮ್ಮನ್ನು ದೂರ ಮಾಡಿಬಿಟ್ಟಿದ್ದಾನೆ ಎಂದು ಅವರು ಕಣ್ಣೀರಾಗುತ್ತಾರೆ.

Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು
ಕೊನೆಯದಾಗಿ ಗೆಳತಿರು ಕ್ಲಿಕ್ಕಿಸಿದ ಸೆಲ್ಫಿ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on:Feb 06, 2021 | 10:36 AM

ನಾವು ಪ್ರೌಢಶಾಲೆಯಲ್ಲಿ ಒಟ್ಟಿಗೇ ಓದಿದವರು. ನಂತರ ಎಲ್ಲರೂ ಶಿಕ್ಷಣ ಪಡೆಯಲು ಬೇರೆಡೆ ತೆರಳಿದೆವು. ಕಾಲಾಂತರದಲ್ಲಿ ಎಲ್ಲರಿಗೂ ಮದುವೆ ಆಯಿತು. ಈ ಅವಧಿಯಲ್ಲಿ ನಾವು ಒಬ್ಬರಿಗೊಬ್ಬರು ಸಂಪರ್ಕದಲ್ಲೇ ಇರಲಿಲ್ಲ. ಆದರೆ, ಸುಮಾರು 25 ವರ್ಷಗಳ ನಂತರ ನಾವು ವಾಟ್ಸಾಪ್​ ಮೂಲಕ ಮತ್ತೆ ಒಂದಾಗಿದ್ದೆವು. ನಮ್ಮದೇ ಗ್ರೂಪ್​ ಮಾಡಿ ಚ್ಯಾಟ್​ ಮಾಡಿಕೊಂಡಿದ್ದೆವು. ಆದರೆ, ಈಗ ನಾವು ಮತ್ತೆ ಬೇರೆ ಆಗಿದ್ದೇವೆ… ಇನ್ನು ಮತ್ತೆ ಒಂದಾಗೋಕೆ ಆಗುವುದೇ ಇಲ್ಲ… ಹೀಗೆ ಗದ್ಗದಿತತವಾಗಿ ಮಾತು ಆರಂಭಿಸಿದರು ಆಶಾ ಬಿ.ಎಸ್​.

ಇಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬಹುತೇಕರು ಒಂದೇ ಬ್ಯಾಚ್​ನವರು. ಇದರಲ್ಲಿ ಆಶಾ ಅವರ ಗೆಳೆತಿಯರು ಕೂಡ ಇದ್ದರು. ಹಲವು ವರ್ಷಗಳ ನಂತರ ಒಂದಾದ ಇವರನ್ನು ದೇವರು ಮತ್ತೆ ದೂರ ಮಾಡಿ ಬಿಟ್ಟಿದ್ದಾನೆ.

ನಾಲ್ಕು ತಿಂಗಳ ಹಿಂದೆ ಗ್ರೂಪ್​ ಸೇರಿದ್ದೆ… ನಾವು ಹೈಸ್ಕೂಲ್​ನಲ್ಲಿ ಒಟ್ಟಿಗೇ ಓದಿದವರು. ಹೈಸ್ಕೂಲ್​ ಶಿಕ್ಷಣ ಮುಗಿದ ನಂತರ ಒಬ್ಬರಿಗೊಬ್ಬರು ಸಂಪರ್ಕದಲ್ಲೇ ಇರಲಿಲ್ಲ. ಆದರೆ, ವಾಟ್ಸಾಪ್​ ನಮ್ಮನ್ನು ಮತ್ತೆ ಒಂದು ಮಾಡಿತ್ತು. ನಾಲ್ಕು ತಿಂಗಳ ಹಿಂದಷ್ಟೇ ನಮ್ಮ ಹೈಸ್ಕೂಲ್​ ವಾಟ್ಸಾಪ್​​ಗೆ ನಾನು ಸೇರಿಕೊಂಡಿದ್ದೆ. ನಿತ್ಯ ಚ್ಯಾಟ್​ ಮಾಡುತ್ತಿದ್ದೆವು. ಮನೆಯಲ್ಲಿ ಮಾಡಿದ ಅಡುಗೆಯನ್ನು ಗ್ರೂಪ್​ನಲ್ಲಿ ಹಾಕುತ್ತಿದ್ದೆವು. ಕೆಲವರು ವಾಯ್ಸ್​ ಚ್ಯಾಟ್​ ಮಾಡುತ್ತಿದ್ದರು. ಆದರೆ, ನಾವು ಒಂದಾದ ಕೆಲವೇ ತಿಂಗಳಲ್ಲೇ ದೇವರು ನಮ್ಮಿಂದ ಅವರನ್ನು ದೂರ ಮಾಡಿದ್ದಾನೆ ಎಂದು ಬೇಸರ ಹೊರ ಹಾಕುತ್ತಾರೆ ಆಶಾ..

20 ದಿನಗಳ ಹಿಂದೆ ನಡೆದಿತ್ತು ಟ್ರಿಪ್​ ಪ್ಲ್ಯಾನ್​ ಮೃತರಲ್ಲಿ ಒಬ್ಬರಾದ ಡಾಕ್ಟರ್​ ವೀಣಾ ಅವರು ಟ್ರಿಪ್​ ಪ್ಲ್ಯಾನ್​ ಮಾಡಿದ್ದರು. ಅವರು 20 ದಿನಗಳ ಹಿಂದೆ ಗ್ರೂಪ್​ನಲ್ಲಿ ಮೆಸೇಜ್​ ಹಾಕಿ ಗೋವಾ ಟ್ರಿಪ್​ ಪ್ಲ್ಯಾನ್​ ಮಾಡಿದ್ದೇವೆ. ಬರುವವರು ತಿಳಿಸಿ ಎಂದು ಹೇಳಿದ್ದರು. ನಾನು ಇರುವುದು ಬೆಂಗಳೂರಿನಲ್ಲಿ. ಅವರೆಲ್ಲರೂ ಇರುವುದು ದಾವಣಗೆರೆಯಲ್ಲಿ. ಹೀಗಾಗಿ, ನಾನು ಟ್ರಿಪ್​ಗೆ ತೆರಳಲು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಆದರೆ, ಈಗ ಅವರು ಮೃತಪಟ್ಟಿರುವ ವಿಚಾರ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ ಎನ್ನುತ್ತಾರೆ ಆಶಾ.

ಶಾಕ್​ ಮೇಲೆ ಶಾಕ್​ ನನಗೆ ಮುಂಜಾನೆ 9.40ಕ್ಕೆ ವಿಚಾರ ಗೊತ್ತಾಗಿತ್ತು. ಬೆಳಿಗ್ಗೆ ವೀಣಾ ಸತ್ತಿರುವ ಮಾಹಿತಿ ಸಿಕ್ಕಿತ್ತು. ಟ್ರಿಪ್​ ಹೋಗುವಾಗ ಅಪಘಾತದಲ್ಲಿ ಮೃತಪಟ್ಟರಂತೆ ಎನ್ನುವ ಮಾಹಿತಿ ದೊರೆತಿತ್ತು. ಈ ವಿಚಾರ ತಿಳಿದು ತೀವ್ರ ಬೇಸರಗೊಂಡಿದ್ದೆ. ಹೀಗಿರುವಾಗಲೇ, ಮೃತಪಟ್ಟವರಲ್ಲಿ ನಮ್ಮ ಹೈಸ್ಕೂಲ್​ ಬ್ಯಾಚ್​ಮೇಟ್ಸ್​​ನವರೇ ಹೆಚ್ಚಿದ್ದಾರೆ ಎನ್ನುವ ವಿಚಾರ ಗೊತ್ತಾಗಿತ್ತು. ಆಗ ನಾನು ಅಕ್ಷರಶಃ ಶಾಕ್​ಗೆ ಒಳಗಾಗಿದ್ದೆ ಎನ್ನುತ್ತಾರೆ ಆಶಾ.

ವೀಣಾ ತುಂಬಾನೇ ಆಪ್ತೆ ಆಗಿದ್ದರು… ಎಲ್ಲರಿಗಿಂತ ಹೆಚ್ಚು ನನಗೆ ವೀಣಾ ತುಂಬಾನೇ ಆಪ್ತರಾಗಿದ್ದರು. ಅವರು ಸದಾ ಚಟುವಟಿಕೆಯಿಂದ ಇರುತ್ತಿದ್ದರು. ನಾವು ಸಣ್ಣವರಿದ್ದಾಗ ಶಾಲೆ ಬಳಿ ಶೇಂಗಾ ಮೊದಲಾದವನ್ನು ಮಾರೋಕೆ ಅಜ್ಜಿಯರು ಬರುತ್ತಿದ್ದರು. ಅವರಲ್ಲಿ ಒಂದು ಅಜ್ಜಿಯನ್ನು ನಾಲ್ಕು ವರ್ಷಗಳ ಹಿಂದೆ ವೀಣಾ ಭೇಟಿ ಆಗಿ, ಫೋಟೋ ತೆಗೆದು ಸಂಭ್ರಮಿಸಿದ್ದರು. ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವ ವಿಚಾರ ನನಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಡುತ್ತಾರೆ ಆಶಾ.

(ನಿರೂಪಣೆ: ರಾಜೇಶ ಹೆಗಡೆ)

ಟೆಂಪೋಗೆ ಟಿಪ್ಪರ್​ ಡಿಕ್ಕಿ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಮಾಜಿ ಶಾಸಕರ ಸೊಸೆ ದುರ್ಮರಣ

Published On - 10:18 pm, Fri, 15 January 21

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!