ಮಹಾಶಿವರಾತ್ರಿ ಹಬ್ಬದಂದು ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ!
ಮಹಾಶಿವರಾತ್ರಿ ಹಬ್ಬದಂದು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿಕೊಟ್ಟು ಜಾಗರಣೆ ಮಾಡುತ್ತಾ ಶಿವಸ್ತುತಿಯಲ್ಲಿ ತೊಡಗಿದ್ದಾರೆ. ಇತ್ತ, 2A ಮೀಸಲಾತಿಗಾಗಿ ಧರಣಿಗೆ ಮುಂದಾಗಿರುವ ಪಂಚಮಸಾಲಿ ಸಮುದಾಯದವರು ಸಹ ಶಿವರಾತ್ರಿಯನ್ನು ಕೊಂಚ ಡಿಫರೆಂಟ್ ಆಗಿ ಆಚರಿಸೋಕೆ ಸಜ್ಜಾಗಿದ್ದಾರೆ.

ಬೆಂಗಳೂರು: ಮಹಾಶಿವರಾತ್ರಿ ಹಬ್ಬದಂದು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿಕೊಟ್ಟು ಜಾಗರಣೆ ಮಾಡುತ್ತಾ ಶಿವಸ್ತುತಿಯಲ್ಲಿ ತೊಡಗಿದ್ದಾರೆ. ಇತ್ತ, 2A ಮೀಸಲಾತಿಗಾಗಿ ಧರಣಿಗೆ ಮುಂದಾಗಿರುವ ಪಂಚಮಸಾಲಿ ಸಮುದಾಯದವರು ಸಹ ಶಿವರಾತ್ರಿಯನ್ನು ಕೊಂಚ ಡಿಫರೆಂಟ್ ಆಗಿ ಆಚರಿಸೋಕೆ ಸಜ್ಜಾಗಿದ್ದಾರೆ.

ಪೂಜೆ ಕಂ ಧರಣಿಯ ನೇತೃತ್ವ ವಹಿಸಿದ ಜಯಮೃತ್ಯುಂಜಯಶ್ರೀ

ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ
ಹೌದು, ಶಿವರಾತ್ರಿ ಹಬ್ಬದ ಪ್ರಯುಕ್ತ ಪಂಚಮಸಾಲಿಗರು ವಿಶೇಷ ಪೂಜೆ ಜೊತೆ ಪ್ರತಿಭಟನೆ ಸಹ ಮುಂದುವರಿಸಿದರು. ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಈ ವಿಭಿನ್ನ ಪೂಜೆ ಕಂ ಧರಣಿಗೆ ಜಯಮೃತ್ಯುಂಜಯಶ್ರೀಗಳು ನೇತೃತ್ವ ವಹಿಸಿದ್ದಾರೆ.

ಪೂಜೆಯಲ್ಲಿ ಭಾಗವಹಿಸಿದ ಚಿಣ್ಣರು
ಸಮುದಾಯದವರು ಇಂದು ರಾತ್ರಿ ಜಾಗರಣೆ ನಡೆಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು, ಈ ವೇಳೆ ಮಾತನಾಡಿದ ಶ್ರೀಗಳು ಪೂಜೆ ಬಳಿಕ ಜಾಗರಣೆ ಮಾಡಿ ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತೀವ್ರ ಹೋರಟ ಸಹ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು.

ಜಯಮೃತ್ಯುಂಜಯಶ್ರೀ

ಧರಣಿಯಲ್ಲಿ ಪಾಲ್ಗೊಂಡ ಪಂಚಮಸಾಲಿಗ ಸಮುದಾಯದ ಸದಸ್ಯರು
ಇದನ್ನೂ ಓದಿ: ಸ್ವಲ್ಪದರಲ್ಲಿ ತಪ್ಪಿತು ಭಾರಿ ಗಂಡಾಂತರ: ಶಿವಮೊಗ್ಗದಿಂದ ತೊಲಗಿತು ದಕ್ಷಿಣ ಆಫ್ರಿಕಾ ರೂಪಾಂತರ