ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ IMA ಠೇವಣಿದಾರರ ಅರ್ಹ ಕ್ಲೈಂಗಳನ್ನು ಇತ್ಯರ್ಥಪಡಿಸುವ ವಿಧಾನದ ವಿವರ ಹೀಗಿದೆ

ಸಕ್ಷಮ ಪ್ರಾಧಿಕಾರಿ ಹಾಗೂ ವಿಶೇಷಾಧಿಕಾರಿಗಳು ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ IMA ಠೇವಣಿದಾರರ ಅಹ್ರ ಕ್ಲೈಂಗಳನ್ನು ಈ ಕೆಳಕಂಡಂತೆ ಇತ್ಯರ್ಥಪಡಿಸುವ ವಿಧಾನವನ್ನು ವಿವರಿಸಲಾಗಿದೆ.

ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ IMA ಠೇವಣಿದಾರರ ಅರ್ಹ ಕ್ಲೈಂಗಳನ್ನು ಇತ್ಯರ್ಥಪಡಿಸುವ ವಿಧಾನದ ವಿವರ ಹೀಗಿದೆ
ಮನ್ಸೂರ್​ ಖಾನ್​
Follow us
KUSHAL V
|

Updated on:Mar 11, 2021 | 11:41 PM

ಬೆಂಗಳೂರು: ಸಕ್ಷಮ ಪ್ರಾಧಿಕಾರಿ ಹಾಗೂ ವಿಶೇಷಾಧಿಕಾರಿಗಳು ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ IMA ಠೇವಣಿದಾರರ ಅಹ್ರ ಕ್ಲೈಂಗಳನ್ನು ಈ ಕೆಳಕಂಡಂತೆ ಇತ್ಯರ್ಥಪಡಿಸುವ ವಿಧಾನವನ್ನು ವಿವರಿಸಲಾಗಿದೆ.

1)ಎಲ್ಲಾ ಅರ್ಹ ಕ್ಲೈಂದಾರರಿಗೆ ಗರಿಷ್ಠ ರೂ.50,000ಗಳು ಅವರ ವಾಸ್ತವಿಕ ಅರ್ಹ ಮೊತ್ತಕ್ಕೆ ನಿಯಮಿತಗೊಳಿಸಿ ವರ್ಗಾವಣೆ ಮಾಡುವುದು

2) ಎಲ್ಲಾ ಅರ್ಹ ಕ್ಲೈಂದಾರರಿಗೆ ಪಾವತಿಸಬೇಕಾದ ಅರ್ಹ ಮೊತ್ತವನ್ನು ಈಗಾಗಲೇ ಆಗಿರುವ ಪಾವತಿಗಳು ಅಥವಾ ಪಡೆದ ಲಾಭಾಂಶವನ್ನು ಅವರಿಗೆ ಸಂಬಂಧಿಸಿದ ಮೂಲ ಹೂಡಿಕೆ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಂಡು ಲೆಕ್ಕಹಾಕಲಾಗಿರುತ್ತದೆ

3) ಆನ್​ಲೈನ್ ಕ್ಲೈಂ ಅರ್ಜಿಯನ್ನು ಆಧಾರ್ OTP ದೃಢೀಕರಣದ ಮೂಲಕ ಅಥವಾ ಅವರ IMA ಅಲ್ಲದ ಬ್ಯಾಂಕ್ ಖಾತೆಯಿಂದ ರೂ 1.ರ ವರ್ಗಾವಣೆ ಮಾಡಿದ UTR ಸಂಖ್ಯೆ ದೃಢೀಕರಣದ ಮೂಲಕ ಸಲ್ಲಿಸಿದ ಹಕ್ಕುದಾರರು ಆಧಾರ್ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅಥವಾ ಅವರ IMAಬ್ಯಾಂಕ್ ಖಾತೆಯಿಂದ ರೂ 1.ರ ವರ್ಗಾವಣೆ ಮಾಡಿದ UTR ಸಂಖ್ಯೆಯ ದೃಢೀಕರಣದ ಹೆಚ್ಚುವರಿ ದೃಢೀಕರಣ ಪೂರ್ಣಗೊಳಿಸಿದ ನಂತರವೇ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ

4) ಹೆಚ್ಚುವರಿ ದೃಢೀಕರಣವನ್ನು ಮೇಲೆ ತಿಳಿಸಿದ ವಿಧಾನಗಳ ಮೂಲಕ ಅಂತರ್​ಜಾಲದಲ್ಲಿ imaclaims.karnataka.gov.in ಅಥವಾ ಯಾವುದೇ ಸರ್ಕಾರಿ ಸೇವಾ ಕಿಯೋಸ್ಕ್​ಗಳಾದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಹಕರ ಸೇವಾ ಕೇಂದ್ರ ಇತ್ಯಾದಿ ಅಂದರೆ ಆನ್​ಲೈನ್ ಕ್ಲೈಂ ಅರ್ಜಿಗಳನ್ನು ಸಲ್ಲಿಸುವ ಎಲ್ಲಾ ಸ್ಥಳಗಳಲ್ಲಿ ನಿರ್ವಹಿಸಬಹುದಾಗಿರುತ್ತದೆ

5) ಹೆಚ್ಚುವರಿ ದೃಢೀಕರಣ ಮಾಡಲು ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರದಿದ್ದರೆ ಅಥವಾ IMAಬ್ಯಾಂಕ್ ಖಾತೆ ಚಾಲ್ತಿಯಲ್ಲಿರದಿದ್ದರೆ, ಆ ಅರ್ಜಿದಾರರು ಗುರುತಿನ ದಾಖಲೆಗಳಾದ ಪಾಸ್​ಪೋರ್ಟ್​, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, EPIC ಕಾರ್ಡ್​, ಭಾವಚಿತ್ರವಿರುವ ಬ್ಯಾಂಕ್ ಪಾಸ್​ಬುಕ್​ ಇತ್ಯಾದಿಗಳೊಂದಿಗೆ ಸಕ್ಷಮ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡುವುದು

6) ರೂ.50,000ಒಳಗಿನ ಕ್ಲೈಂ ಮೊತ್ತವನ್ನು ಆರಂಭಿಕ ಮೊತ್ತವಾಗಿ ಆರ್ಹ ಅರ್ಜಿದಾರರಿಗೆ ನೀಡಲಾಗುತ್ತದೆ. ನಂತರ ನ್ಯಾಯಾಲಯವು IMA ಆಸ್ತಿಗಳಿಗೆ ಸಂಬಂಧಿಸಿದಂತೆ ಅಂತಿಮ ಮುಟ್ಟುಗೋಲು ಆದೇಶ ನೀಡಿದ ಮೇಲೆ ಹಾಗೂ ಅವುಗಳನ್ನು ಹರಾಜು ಮೂಲಕ ವಿಲೇ ಮಾಡಿದ ಮೊತ್ತವು ಸಕ್ಷಮ ಪ್ರಾಧಿಕಾರಿ ಖಾತೆಗೆ ಜಮೆಯಾದಾಗ, ಆಗಿಂದ್ದಾಗ್ಗೆ ನ್ಯಾಯಾಲಯವು ನೀಡುವ ಆದೇಶಾನುಸಾರ ಮೊತ್ತವನ್ನು ಕ್ಲೈಂದಾರರಿಗೆ ವರ್ಗಾವಣೆ ಮಾಡಲಾಗುವುದು

7) ರೂ.50,000ಗಳವರೆಗಿನ ಕ್ಲೈಂಗಳ ಇತ್ಯರ್ಥವನ್ನು ಕಡಿಮೆ ಅರ್ಹ ಮೊತ್ತವನ್ನು ಹೊಂದಿರುವ ಠೇವಣಿದಾರರಿಂದ ಪಾವತಿಸುವ ಮೂಲಕ ಪ್ರಾರಂಭಿಸಲಾಗುವುದು

ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದಂದು ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ!

Published On - 11:37 pm, Thu, 11 March 21

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು