ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಕಳೆದುಕೊಂಡ ಬೆನ್ನಲ್ಲೇ ಶಮಂತ್ಗೆ ಹುಡುಗಿ ಪಟಾಯಿಸೋ ಟಾಸ್ಕ್!
ಶಮಂತ್ ಮನೆ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದರಿಂದ ಸಹಜವಾಗಿಯೇ ಎಲ್ಲರಿಗೂ ಕೆಲಸ ಹೇಳುತ್ತಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ.

ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಬ್ರೋ ಗೌಡ ತುಂಬಾನೇ ಭಿನ್ನವಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಮನೆ ಹೊರಗೆ 22 ಹುಡುಗಿಯರು ಇವರಿಗೆ ಬಿದ್ದಿದ್ದರು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಒಬ್ಬರೂ ಬಿದ್ದಿರಲಿಲ್ಲ. ದಿವ್ಯಾ ಮೇಲೆ ಕ್ರಶ್ ಹೊಂದಿದ್ದರೂ ಅದು ಮೊದಲ ಹಂತದಲ್ಲೇ ವಿಫಲವಾಗಿತ್ತು! ಈಗ ಬಿಗ್ ಬಾಸ್ ಮನೆಯಲ್ಲಿ ಬ್ರೋ ಗೌಡಗೆ ಹುಡುಗಿ ಪಟಾಯಿಸುವ ಟಾಸ್ಕ್ ನೀಡಲಾಗಿದೆ! ಅಷ್ಟಕ್ಕೂ ಈ ಟಾಸ್ಕ್ ನೀಡಿದ್ದು ಬೇರೆ ಯಾರೂ ಅಲ್ಲ ಶುಭಾ ಪೂಂಜಾ. 11 ದಿನ ಸಂಜೆ ಕೂತು ಮಾತನಾಡುವಾಗ ಶುಭಾ ಪೂಂಜಾ ಮಾತು ಆರಂಭಿಸಿದರು. ಶಮಂತ್ ಬಿಗ್ ಬಾಸ್ ಮನೆಯಲ್ಲಿ ಒಬ್ಬಳನ್ನೂ ಪಟಾಯಿಸಿಲ್ಲ. ಹೊರಗೆ ಅಷ್ಟು ಜನ ಬಿದ್ರು, ಇಷ್ಟು ಜನ ಬಿದ್ರು ಅಂತಾನೆ. ಅವನಿಗೆ ಮನೆ ಹೊರಗೆ 22 ಜನ ಬಿದ್ದಿದ್ದೇ ಸುಳ್ಳು ಎಂದು ನಕ್ಕಿದ್ದಾರೆ ಶುಭಾ.
ಇನ್ನು, ಶಮಂತ್ ಮನೆ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದರಿಂದ ಸಹಜವಾಗಿಯೇ ಎಲ್ಲರಿಗೂ ಕೆಲಸ ಹೇಳುತ್ತಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ. ಶಮಂತ್ಗೆ ಹುಡುಗಿಯರನ್ನು ಕೆಡಗಿಕೊಳ್ಳುವ ನ್ಯಾಕ್ ಇಲ್ಲ. ನೋಡಿದಾಗೆಲ್ಲ ಕೆಲಸ ಕೊಡ್ತಾನೆ. ಹೀಗಾದ್ರೆ ಯಾರೂ ಬೀಳ್ತಾರೆ ಎಂದು ನಕ್ಕಿದ್ದಾರೆ.
ಶಮಂತ್ ಕ್ಯಾಪ್ಟನ್ಸಿ ಮಕ್ತಾಯ.. ಶಮಂತ್ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ನಾಯಕರಾಗಿದ್ದರು. ಗುರುವಾರಕ್ಕೆ ಇದು ಅಂತ್ಯವಾಗಿದೆ. ಕ್ಯಾಪ್ಟನ್ಸಿ ಆಟದಲ್ಲಿ ರಾಜೀವ್ ಹೊಸ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ಲೇ ಆಗಲೇ ಇಲ್ಲ ಗುಡ್ ಮಾರ್ನಿಂಗ್ ಸಾಂಗ್; ಇದಕ್ಕೆ ಕಾರಣ ಮಾತ್ರ ವಿಚಿತ್ರ!