ಬೀದರ್​ನಲ್ಲಿ ಬೀದಿ ನಾಯಿಗಳ ಕಾಟ: ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಲು ಮುಂದಾದ ನಗರಸಭೆ

ನಗರದಲ್ಲಿ ಬೀದಿ ನಾಯಿಗಳ ಕಾಟ ಕೆಲವು ದಿನಗಳಿಂದ ಹೆಚ್ಚಾಗಿತ್ತು. ಬಡಾವಣೆಯ ಜನರು ಬೀದಿ ನಾಯಿಗಳ ಹಾವಳಿಗೆ ಭಯಭೀತರಾಗಿದ್ದು, ಮನೆಯ ಬಾಗಿಲುಗಳನ್ನು ಹಾಕಿಕೊಂಡು ಕೂರುವಂತಾಗಿತ್ತು. ಒಂದು ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಮಕ್ಕಳು ಕೈಯಲ್ಲಿ ತಿಂಡಿ ಹಿಡಿದು ಹೊರ ಬರುವಂತೆ ಇಲ್ಲ.

ಬೀದರ್​ನಲ್ಲಿ ಬೀದಿ ನಾಯಿಗಳ ಕಾಟ: ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಲು ಮುಂದಾದ ನಗರಸಭೆ
ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ
Follow us
sandhya thejappa
|

Updated on:Mar 11, 2021 | 5:42 PM

ಬೀದರ್: ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟದಿಂದ ಭಯದಲ್ಲಿಯೇ ಜನರು ಓಡಾಡಬೇಕಾಗಿತ್ತು. ಬೀದಿ ನಾಯಿಗಳ ಹಾವಳಿಗೆ ರೋಸಿ ಹೋಗಿದ್ದ ಸಾರ್ವಜನಿಕರು ನಾಯಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರು. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಕೆಡಿಪಿ ಸಭೆಯಲ್ಲಿ ಬೀದಿ ನಾಯಿಗಳಿಂದಾಗುವ ತೊಂದರೆ ನಿವಾರಿಸುವಂತೆ ಆಗ್ರಹಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ನಗರಸಭೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದು, ಕಾರ್ಯಾಚರಣೆ ಶುರುಮಾಡಿದೆ.

ಬಡವರ ಬಡಾವಣೆಯಲ್ಲೇ ಬೀದಿ ನಾಯಿಗಳ ಹಾವಳಿ ನಗರದಲ್ಲಿ ಬೀದಿ ನಾಯಿಗಳ ಕಾಟ ಕೆಲವು ದಿನಗಳಿಂದ ಹೆಚ್ಚಾಗಿತ್ತು. ಬಡಾವಣೆಯ ಜನರು ಬೀದಿ ನಾಯಿಗಳ ಹಾವಳಿಗೆ ಭಯಭೀತರಾಗಿದ್ದು, ಮನೆಯ ಬಾಗಿಲುಗಳನ್ನು ಹಾಕಿಕೊಂಡು ಕೂರುವಂತಾಗಿತ್ತು. ಒಂದು ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಮಕ್ಕಳು ಕೈಯಲ್ಲಿ ತಿಂಡಿ ಹಿಡಿದು ಹೊರ ಬರುವಂತೆ ಇಲ್ಲ. ಅಲ್ಲದೆ ಮನೆಯ ಬಾಗಿಲುಗಳು ತೆರೆದರೆ ಸಾಕು ಸೀದಾ ಒಳಗೆ ನುಗ್ಗಿ ಅಡುಗೆ ಪಾತ್ರೆ, ಮತ್ತಿತರ ಸಾಮಗ್ರಿಗಳನ್ನು ಕಚ್ಚಿಕೊಂಡು ಓಡಿ ಹೋಗುತ್ತವೆ. ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಪೋಷಕರು ಹೋಗಿ ಬಿಟ್ಟು ಬರಬೇಕಾದ ಪರಿಸ್ಥಿತಿ ಕಳೆದ ಕೆಲವು ದಿನಗಳಿಂದ ನಗರದಲ್ಲಿ ನಿರ್ಮಾಣವಾಗಿತ್ತು. ಅದರಲ್ಲೂ ಬಡವರೆ ಹೆಚ್ಚು ವಾಸಮಾಡುವ ಬಡಾವಣೆಗಳಾದ ಹಾರೂಗೆರೆ, ನೌದಗೆರಾ, ಮೈಲೂರ ರಸ್ತೆ, ನಯಾಕಮಾನ, ಓಲ್ಡ್ ಸಿಟಿ, ಚೌಬಾರಾದಲ್ಲಿ ಅತೀ ಹೆಚ್ಚು ಬೀದಿ ನಾಯಿಗಳು ಕಂಡು ಬರುತ್ತಿದ್ದವು. ಒಂದೆ ತಿಂಗಳಲ್ಲಿ ಈ ಬಡಾವಣೆಗಳ ಸಮಾರು 40 ಕ್ಕೂ ಹೆಚ್ಚಿನ ಜನರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಬೀದಿ ನಾಯಿಗಳನ್ನ ನಿಯಂತ್ರಣವಾಗಿಸಿ ಎಂದು ಸಾರ್ವಜನಿಕರು ನಗರ ಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ನಗರ ಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದು, ಕಾರ್ಯಾಚರಣೆ ಕೂಡಾ ಆರಂಭಿಸಿದ್ದಾರೆ.

100 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಆಕಸ್ಮಿಕವಾಗಿ ಕಚ್ಚಿದರೂ ಅವುಗಳಿಂದ ಅಪಾಯಕಾರಿ ರೇಬಿಸ್ ಕಾಯಿಲೆ ಹರಡದಂತೆ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡಲು ಮತ್ತು ಸಂತತಿ ಆಗದಂತೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಲು ಮುಂದಾಗಿರುವ ನಗರಸಭೆ ಒಂದು ನಾಯಿಗೆ 450 ರೂಪಾಯಿ ಖರ್ಚು ಮಾಡುತ್ತಿದೆ. ಬೀದಿ ನಾಯಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆಯನ್ನ ಪಶುಸಂಗೋಪನಾ ಇಲಾಖೆಯ ವೈದ್ಯರು ಮಾಡುತ್ತಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ನಾಯಿಗಳ ಆರೈಕೆಯನ್ನ ಮಾಡುವ ಕೆಲಸವನ್ನ ಹೈದರಾಬಾದ್​ನಿಂದ ಬಂದಿರುವ ನಾಯಿ ಹಿಡಿಯುವ ತಂಡ ಮಾಡುತ್ತಿದೆ. ಈಗಾಗಲೇ 100 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಪೂರೈಸಿದೆ.

ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಲು ಮುಂದಾಗಿರುವ ನಗರಸಭೆ ಒಂದು ನಾಯಿಗೆ 450 ರೂಪಾಯಿ ಖರ್ಚು ಮಾಡುತ್ತಿದೆ

ಈಗಾಗಲೇ 100 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಪೂರೈಸಿದೆ

ಬೀದಿ ನಾಯಿಗಳಿಂದ ಸಾರ್ವಜನಿಕರ ಓಡಾಟಕ್ಕೂ ಕಷ್ಟವಾಗಿತ್ತು. ವಾಹನ ಸವಾರರು ಪರದಾಡಬೇಕಿತ್ತು. ಬೀದಿ ನಾಯಿಗಳ ಹಾವಳಿ ತಡೆಯಲು ನಗರಸಭೆ ಅಧಿಕಾರಿಗಳು ಈ ಹಿಂದೆಯೇ ಎಚ್ಚೆತ್ತುಕೊಳ್ಳಬೇಕಿತ್ತು. ತಡವಾಗಿಯಾದರೂ ಎಚ್ಚೆತ್ತಿಕೊಂಡಿರುವುದು ನೆಮ್ಮದಿ ವಿಚಾರ ಎಂದು ಸ್ಥಳಿಯರು ಹೇಳುತ್ತಿದ್ದಾರೆ.

ಪ್ರಾಣಿ ಜನನ ನಿಯಂತ್ರಣ ಕಾಯ್ದೆ 2001 ರ ಪ್ರಕಾರ ಬೀದಿ ನಾಯಿಗಳನ್ನು ಸ್ಥಳಾಂತರಿಸುವುದಾಗಲಿ, ಸಾಯಿಸುವುದಾಗಲಿ ಮಾಡುವಂತಿಲ್ಲ

ಪ್ರಾಣಿ ಜನನ ನಿಯಂತ್ರಣ ಕಾಯ್ದೆ 2001 ರ ಪ್ರಕಾರ ಬೀದಿ ನಾಯಿಗಳನ್ನು ಸ್ಥಳಾಂತರಿಸುವುದಾಗಲಿ, ಸಾಯಿಸುವುದಾಗಲಿ ಮಾಡುವಂತಿಲ್ಲ. ಹಾಗಾಗಿ ಅವುಗಳನ್ನು ಸೆರೆ ಹಿಡಿದು ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆಯಷ್ಟೆ. ಬೀದಿ ನಾಯಿಗಳನ್ನು ಬಲೆ ಮೂಲಕ ಸೆರೆಹಿಡಿದು ಆಧುನಿಕ, ಸುಧಾರಿತ ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಅದೇ ದಿನ ಸ್ವಸ್ಥಾನಗಳಲ್ಲಿ ಬಿಡಲಾಗುತ್ತಿದೆ.

ಕೋಟೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ, ಅಧಿಕಾರಿಗಳ ನಿರ್ಲಕ್ಷ್ಯ: ಕ್ರಮಕ್ಕೆ ಸ್ಥಳೀಯರ ಆಗ್ರಹ

ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ

Published On - 5:41 pm, Thu, 11 March 21