ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ

ಜೋಡೆತ್ತಿನ ಗಾಡಿ ಓಟದ ವೇಳೆ ಜನರತ್ತ ಬಂಡಿ ನುಗ್ಗಿ ಬಂದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧೆ ಸೇರಿದಂತೆ ಐವರಿಗೆ ಗಾಯಗಳಾಗಿದೆ. ಸದ್ಯ, ವೃದ್ಧೆ ಅನಸೂಯಮ್ಮ ಮತ್ತು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ
ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ
Follow us
KUSHAL V
|

Updated on: Mar 11, 2021 | 5:04 PM

ಚಿತ್ರದುರ್ಗ: ಜೋಡೆತ್ತಿನ ಗಾಡಿ ಓಟದ ವೇಳೆ ಜನರತ್ತ ಬಂಡಿ ನುಗ್ಗಿ ಬಂದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧೆ ಸೇರಿದಂತೆ ಐವರಿಗೆ ಗಾಯಗಳಾಗಿದೆ. ಸದ್ಯ, ವೃದ್ಧೆ ಅನಸೂಯಮ್ಮ ಮತ್ತು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

CTR YETTINGADI RACE 10

ಜನರತ್ತ ನುಗ್ಗಿ ಬಂದ ಎತ್ತಿನ ಬಂಡಿ

CTR YETTINGADI RACE 4

ವೃದ್ಧರೊಬ್ಬರನ್ನು ತುಳಿದು ಮುನ್ನುಗ್ಗಿದ ಎತ್ತುಗಳು

ಕೆಂಚಾಂಬ ರೈತ ಯುವಕರ ಸಂಘದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಂಘವು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸ್ಪರ್ಧೆಯ ಆಯೋಜನೆ ಮಾಡಿತ್ತು ಎಂದು ಹೇಳಲಾಗಿದೆ. ಹೀಗಾಗಿ, ಸಂಘದ ಸದಸ್ಯರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ.

CTR YETTINGADI RACE 5

ಸ್ಪರ್ಧೆ ವೇಳೆ ನಡೆದ ಭೀಕರ ಅವಘಡ

CTR YETTINGADI RACE 3

ಎತ್ತುಗಳ ಓಟದ ರಭಸಕ್ಕೆ ಮಗುಚಿದ ಬಂಡಿ

ಇನ್ನು, ಈ ಕುರಿತು ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೋಡೆತ್ತಿನ ಓಟದ ಸ್ಪರ್ಧೆಗೆ ಬ್ರೇಕ್ ಹಾಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ‌.ರಾಧಿಕಾ ಪ್ರತಿಕ್ರಿಯಿಸಿದ್ದು ಅವಘಡದಲ್ಲಿ ವೃದ್ಧೆ ಅನಸೂಯಮ್ಮ ಸೇರಿ ಐವರಿಗೆ ಗಾಯಗಳಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಂಚಾಂಬ ರೈತ ಯುವಕರ ಸಂಘ ಸ್ಪರ್ಧೆ ಆಯೋಜಿಸಿತ್ತು. ಆದರೆ, ಆಯೋಜಕರು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಜೊತೆಗೆ, ಪೊಲೀಸರು ಸೂಚಿಸಿದ ನಿಯಮಗಳನ್ನು ಆಯೋಜಕರು ಪಾಲಿಸಿಲ್ಲ. ಹಾಗಾಗಿ, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

CTR YETTINGADI RACE 6

ಅವಘಡದಲ್ಲಿ ಗಾಯಗೊಂಡ ವೃದ್ಧೆ

CTR YETTINGADI RACE 1

ಘಟನಾ ಸ್ಥಳದಲ್ಲಿ ಸಾರ್ವಜನಿಕರು

CTR YETTINGADI RACE 7

ಸ್ಪರ್ಧೆಗೆ ಬ್ರೇಕ್​ ಹಾಕಿದ ಪೊಲೀಸರು

CTR YETTINGADI RACE 8

ಜನರನ್ನು ಚದುರಿಸಿದ ಪೊಲೀಸರು

ಮೆಣಸು ಕೊಯ್ಲು ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವು ಮೆಣಸು ಕೊಯ್ಲು ಮಾಡುವ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ವಿನೋದ್(21) ಮೃತ ಕಾರ್ಮಿಕ. ಉರ್ವಿನ್ ಖಾನ್ ಕಾಫಿ ಎಸ್ಟೇಟ್​ನಲ್ಲಿ ಘಟನೆ ನಡೆದಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣ: ಮೂವರು ಖಾಕಿ ವಶಕ್ಕೆ ಇತ್ತ, ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಕ್ಷಾ ಪ್ರಿಯಕರ ಯತಿರಾಜ್ ಸೇರಿದಂತೆ ಸೌರವ್ ಮತ್ತು ಭವಿತ್​ರನ್ನು ವಶಕ್ಕೆ ಪಡೆಯಲಾಗಿದೆ.

ಉಳ್ಳಾಲ ಠಾಣೆಯ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಮೂವರು ಬಂಧಿತರು ವಿದ್ಯಾರ್ಥಿನಿ ಪ್ರೇಕ್ಷಾ ಮನೆ ಬಳಿ ನಿನ್ನೆ ಹೋಗಿದ್ದರು ಎಂಬ ಮಾಹಿತಿ ದೊರೆತಿದೆ. ಪ್ರೇಕ್ಷಾ ಸಾವನ್ನಪ್ಪುವ ವೇಳೆ ಮಂಗಳೂರು ಹೊರವಲಯದಲ್ಲಿರುವ ಕುಂಪಲ ಆಶ್ರಯ ಕಾಲೋನಿಯಲ್ಲಿರುವ ಆಕೆಯ ಮನೆ ಬಳಿ ಯುವಕರು ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಶವ ಸಿಕ್ಕಿತ್ತು‌.

MNG PREKSHA STUDENT MODEL 1

ಮೃತ ಮಾಡೆಲ್​ ವಿದ್ಯಾರ್ಥಿನಿ  ಪ್ರೇಕ್ಷಾ

ಇದನ್ನೂ ಓದಿ: ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ