AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಆಟಗಾರರಿಗೆ ಈ ವಿಷಯದಲ್ಲಿ ‘ಹೊಟ್ಟೆಕಿಚ್ಚು’ ಇದೆ!

Sanju Samson  - Abhishek Sharma: ಈ ಬಾರಿಯ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಕಾರಣಕರ್ತರು ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್. ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ 7 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 98 ರನ್​ಗಳು.

ಟೀಮ್ ಇಂಡಿಯಾ ಆಟಗಾರರಿಗೆ ಈ ವಿಷಯದಲ್ಲಿ 'ಹೊಟ್ಟೆಕಿಚ್ಚು' ಇದೆ!
Sanju Samson
ಝಾಹಿರ್ ಯೂಸುಫ್
|

Updated on: Mar 15, 2026 | 8:30 AM

Share

ಟೀಮ್ ಇಂಡಿಯಾದ ಆರಂಭಿಕ ಜೋಡಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಮತ್ತೆ ಜೊತೆಯಾಗಿದ್ದಾರೆ. ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ. ಬದಲಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ. ಈ ಕಾರ್ಯಕ್ರಮದಲ್ಲಿ ನಡೆಸಲಾದ ಚಿಟ್​ ಚಾಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಅಭಿಷೇಕ್ ಶರ್ಮಾ ಕುರಿತಾಗಿ ಪಡುತ್ತಿರುವ ‘ಹೊಟ್ಟೆಕಿಚ್ಚ’ನ್ನು ಸಂಜು ಸ್ಯಾಮ್ಸನ್​ ಬಹಿರಂಗಪಡಿಸಿದ್ದಾರೆ.

ಮಾರ್ಚ್ 2026 ರಲ್ಲಿ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್  ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಒಳಗಿನ ಕೆಲ ತಮಾಷೆಯ ಮತ್ತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಭಿಷೇಕ್ ಶರ್ಮಾ ವಿರುದ್ಧದ  ‘ಹೊಟ್ಟೆಕಿಚ್ಚು’ ಕೂಡ ಒಂದು.

ಟೀಮ್ ಇಂಡಿಯಾ ಎಲ್ಲಿಗೆ ಹೋದರೂ ಬಸ್ ಸುತ್ತುವರಿಯುವ ಅಭಿಮಾನಿಗಳು ಕೇವಲ “ಅಭಿಷೇಕ್, ಅಭಿಷೇಕ್” ಎಂದು ಕೂಗುತ್ತಿದ್ದರು. ಇದನ್ನು ನೋಡಿ ಉಳಿದ ಆಟಗಾರರು “ಅಭಿಮಾನಿಗಳಿಗೆ ನಾವು ಕಾಣಿಸುವುದೇ ಇಲ್ಲವೇ?” ಎಂದು ತಮಾಷೆ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ ಅಭಿಷೇಕ್ ಶರ್ಮಾಗೆ ಸಿಗುತ್ತಿರುವ ಜನಪ್ರಿಯತೆ ನೋಡಿ ಆಟಗಾರರು ತಮಾಷೆಯಾಗಿ ಹೊಟ್ಟೆಕಿಚ್ಚು ಪಡುತ್ತಿದ್ದರು. “ನಾವೆಲ್ಲಾ ಇಲ್ಲಿ ಇಲ್ವಾ? ಕೇವಲ ಅಭಿಷೇಕ್ ಮಾತ್ರ ಕಾಣಿಸುತ್ತಿದ್ದಾನಾ?” ಎಂದು ಕಿಚಾಯಿಸುತ್ತಿದ್ದರು ಎಂಬ ವಿಚಾರವನ್ನು ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಅಭಿಷೇಕ್ ಶರ್ಮಾ ಪ್ರಸ್ತುತ ತಂಡದ ಸೂಪರ್ ಸ್ಟಾರ್. ಅಭಿಮಾನಿಗಳಿಂದ ಅವರಿಗೆ ಅತಿಯಾದ ಪ್ರೀತಿ ಮತ್ತು ಪ್ರಚಾರ ಸಿಗುತ್ತಿದೆ. ಇದು ಬೇರೆ ಆಟಗಾರರಿಗೂ ಸಿಗಲಿ. ಹೀಗಾಗಿ ನೀನು ಬೇಗ ಮದುವೆಯಾಗು ಎಂದು ಸಂಜು ಸ್ಯಾಮ್ಸನ್ ಅಭಿಷೇಕ್ ಅವರ ಕಾಲೆಳೆದಿದ್ದಾರೆ.

ಇನ್ನು ಟಿ20 ವಿಶ್ವಕಪ್​ನ ಫೈನಲ್​ನಲ್ಲಿ  ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿಯು 98 ರನ್‌ಗಳ ಸ್ಫೋಟಕ ಆರಂಭಿಕ ಜೊತೆಯಾಟವಾಡಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಈ ಪಂದ್ಯದಲ್ಲಿ ಸಂಜು 46 ಎಸೆತಗಳಲ್ಲಿ 89 ರನ್ ಬಾರಿಸಿ ಮಿಂಚಿದ್ದರು. ಅತ್ತ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ  52 ರನ್ ಬಾರಿಸಿದ್ದರು.

ಹೀಗಾಗಿ ಈ ಜೋಡಿಯನ್ನು “ಐಸ್ ಅಂಡ್ ಫೈರ್” ಎಂದು ಕರೆಯಲಾಗುತ್ತಿತ್ತು. ಆದರೆ ಐಸ್ ಅಂಡ್ ಫೈರ್ ಬದಲಿಗೆ ಸಂಜು ಸ್ಯಾಮ್ಸನ್ ಮಾತ್ರ ತಮ್ಮನ್ನು “ಫೈರ್ ಅಂಡ್ ಫೈರ್” (Fire and Fire) ಎಂದು ಬಣ್ಣಿಸಿದ್ದಾರೆ. ಈ ಮೂಲಕ ಅಭಿ-ಸಂಜು ಜೋಡಿಗೆ ಸಂಜು ಸ್ಯಾಮ್ಸನ್ ಬೆಂಕಿ ಹೆಸರನ್ನಿಟ್ಟಿದ್ದಾರೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಸದ್ಯ ಇಬ್ಬರು ದಾಂಡಿಗರು ವಿಶ್ರಾಂತಿಯಲ್ಲಿದ್ದು, ಶೀಘ್ರದಲ್ಲೇ ಮುಂಬರುವ ಐಪಿಎಲ್​ಗಾಗಿ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇನ್ನು ಅಭಿಷೇಕ್ ಶರ್ಮಾ ಸನ್​ರೈಸರ್ಸ್ ಹೈದರಾಬಾದ್ ತಂಡದ ಕ್ಯಾಂಪ್​ಗೆ ಸೇರಲು ಬ್ಯಾಗ್​ಗಳನ್ನು ಪ್ಯಾಕ್ ಮಾಡಿಟ್ಟುಕೊಂಡಿದ್ದಾರೆ.

Follow Us
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ