AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು?

Karnataka Voter List Revision: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ 16.3 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆಯಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅವರು ನೀಡಿರುವ ಅಧಿಕೃತ ಮಾಹಿತಿ ಹಾಗೂ ಅಂಕಿ-ಅಂಶಗಳ ಸಂಪೂರ್ಣ ವಿವರಗಳು ಇಲ್ಲಿವೆ.

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು?
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ Image Credit source: ceo_karnataka X Account
ಪ್ರಸನ್ನ ಹೆಗಡೆ
|

Updated on:Aug 05, 2026 | 6:18 PM

Share

ಬೆಂಗಳೂರು, ಆಗಸ್ಟ್​​ 05: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಸ್ಟ್​​ 8ರ ವರೆಗೂ ನಡೆಯಲಿದ್ದು, ಮನೆ-ಮನೆ ಗಣತಿ ಡಿಜಿಟಲೀಕರಣ ಕಾರ್ಯ ಶೇ.99.84ರಷ್ಟು ಪೂರ್ಣಗೊಂಡಿದೆ. ರಾಜ್ಯದಲ್ಲಿ 5,54,32,314 ಕೋಟಿ ಮತದಾರರಿದ್ದು, ಎಲ್ಲಾ 5.54 ಕೋಟಿ ಎಣಿಕೆ ನಮೂನೆಗಳನ್ನು ಮುದ್ರಿಸಿ BLOಗಳಿಗೆ ವಿತರಣೆ ಮಾಡಲಾಗಿದೆ. ಈ ಪೈಕಿ ಸಾರ್ವಜನಿಕರು 6,88,525 ಮತದಾರರು ಆನ್‌ಲೈನ್ ಮೂಲಕವೇ ನಮೂನೆ ಸಲ್ಲಿಕೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

4,43,04,632 (79.80%) ಮತದಾರರ ವಿವರಗಳು ಡಿಜಿಟಲಿಕರಣ ಸಕ್ರಿಯ ಎಂದು ದೃಢೀಕರಣವಾಗಿದೆ. 1,11,07,461 (20.04%) ದಾಖಲೆಗಳು ASDDO ಪರಿಶೀಲನಾ ವರ್ಗಕ್ಕೆ ಸೇರಿವೆ. 66,64,943(12.02%) ಮತದಾರರು ಶಾಶ್ವತ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದ್ದು, 16,30,872 (2.94%) ಮೃತರ ಬಗ್ಗೆ ಮಾಹಿತಿ ಸಿಕ್ಕಿದೆ. 16,30,753 (2.94%) ಪತ್ತೆಯಾಗದ/ಗೈರುಹಾಜರಾದ ಮತದಾರರ ಮಾಹಿತಿ ಸಿಕ್ಕಿದ್ದು, 5,02,235 (0.91%) ‘ಇತರೆ’ ವರ್ಗದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. 16,30,753ರಷ್ಟು ಮತದಾರರು ಪತ್ತೆಯಾಗಿಲ್ಲ ಎಂದವರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಅತಿ ಹೆಚ್ಚು ಮತದಾರರು ಲಿಸ್ಟ್​​ನಿಂದ ಹೊರಕ್ಕೆ?

ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರು ವೋಟರ್​​ ಲಿಸ್ಟ್​​ನಿಂದ ಉಳಿಯುತ್ತಾರಾ ಎಂಬ ಪ್ರಶ್ನೆಯೀಗ ಉದ್ಭವಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.45ರಷ್ಟು ಮತದಾರರು ನಾಪತ್ತೆಯಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 47ರಷ್ಟು ಮತದಾರರ ಪತ್ತೆ ಆಗಿಲ್ಲ. ಬೆಂಗಳೂರು ಕೇಂದ್ರದಲ್ಲಿ ಶೇಕಡಾ 48ರಷ್ಟು ಮತದಾರ ಮಾಹಿತಿ ಲಭ್ಯವಾಗಿಲ್ಲವಾದರೆ, ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 51ರಷ್ಟು ಮತದಾರರು ನಾಪತ್ತೆಯಾಗಿದ್ದಾರೆ. ಈ ಅಂಕಿ-ಅಂಶಗಳು ಶಿಫ್ಟಿಂಗ್ ಆದವರು, ಮೃತಪಟ್ಟವರು ಮತ್ತು ಟ್ರೇಸ್ ಆಗದೇ ಇರುವವರನ್ನು ಒಳಗೊಂಡಿದೆ.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ; 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು!

ಜಿಬಿಎ ವ್ಯಾಪ್ತಿಯಲ್ಲಿ 10 ಲಕ್ಷ ಫಾರಂ-6 ವಿತರಣೆ ಆಗಿರೋದಾಗಿ ವಿ.ಅನ್ಬುಕುಮಾರ್ ಅವರು ತಿಳಿಸಿದ್ದು, ಮೃತರ ಬಗ್ಗೆ ಸಂಪೂರ್ಣ ವಿವರಣೆ ಪಡೆದು ಲಿಸ್ಟ್​ನಲ್ಲಿ ಹಾಕಿದ್ದೇವೆ. ಯಾರು ಫಾರಂ ರಿಟರ್ನ್ ಮಾಡಿದ್ದಾರೋ ಅವರ ಹೆಸರು ಇರಲಿದೆ. ಫಾರಂ ರಿಟರ್ನ್ ಮಾಡದವರ ಹೆಸರು ಪಟ್ಟಿಯಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲರೂ ಆದಷ್ಟು ಬೇಗ ಫಾರಂಗಳನ್ನು ರಿಟರ್ನ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಪ್ರದೇಶಗಳಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ

ಹಾವೇರಿ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಪ್ಪಳ, ವಿಜಯನಗರ, ಗದಗ, ಕೋಲಾರ, ಕೊಡಗು, ಧಾರವಾಡ, ಯಾದಗಿರಿ,ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ, GBA ನಾತ್೯, GBA ಸೆಂಟ್ರಲ್, GBA ದಕ್ಷಿಣದಲ್ಲಿ ಶೇಕಡ ನೂರರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ ಆಗಿರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:49 pm, Wed, 5 August 26

Follow Us