ಅನಾರೋಗ್ಯದಿಂದ ಮೃತಪಟ್ಟ ಖ್ವಾಂಡ್ವಾ ಬಿಜೆಪಿ ಸಂಸದ; ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಪತ್ತೆ

ಬಿಜೆಪಿಯಲ್ಲಿ ನಂದು ಭಯ್ಯಾ ಎಂದೇ ಹೆಸರು ಗಳಿಸಿದ್ದ ಸಂಸದ ನಂದ ಕುಮಾರ್ ಸಿಂಗ್ ಚೌಹ್ವಾಣ್ ಅವರ ನಿಧನದಿಂದ ‘ಓರ್ವ ಉದಾತ್ತ ಮತ್ತು ಆದರ್ಶ ನಾಯಕನನ್ನು ಬಿಜೆಪಿ ಕಳೆದುಕೊಂಡಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಂಬನಿ ಮಿಡಿದಿದ್ದಾರೆ.

ಅನಾರೋಗ್ಯದಿಂದ ಮೃತಪಟ್ಟ ಖ್ವಾಂಡ್ವಾ ಬಿಜೆಪಿ ಸಂಸದ; ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಪತ್ತೆ
ಸಂಸದ ನಂದ ಕುಮಾರ್ ಸಿಂಗ್ ಚೌಹ್ವಾಣ್ (ಚಿತ್ರಕೃಪೆ: ಲೋಕಸಭಾ)
Follow us
guruganesh bhat
|

Updated on:Mar 02, 2021 | 11:40 AM

ಭೋಪಾಲ್: ಮಧ್ಯಪ್ರದೇಶದ ಖಂಡ್ವಾ ಲೋಕಸಭಾ ಕ್ಷೇತ್ರದ ಸಂಸದ ನಂದ ಕುಮಾರ್ ಸಿಂಗ್ ಚೌಹ್ವಾಣ್ ನಿನ್ನೆ ರಾತ್ರಿ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಕೆಲ ದಿನಗಳ ಹಿಂದೆ ದಾಖಲಾಗಿದ್ದ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಿಜೆಪಿ ಸಂತಾಪ ವ್ಯಕ್ತಪಡಿಸಿದೆ.

ಬಿಜೆಪಿಯಲ್ಲಿ ನಂದು ಭಯ್ಯಾ ಎಂದೇ ಹೆಸರು ಗಳಿಸಿದ್ದ ಸಂಸದ ನಂದ ಕುಮಾರ್ ಸಿಂಗ್ ಚೌಹ್ವಾಣ್, ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಮಧ್ಯಪ್ರದೇಶದಲ್ಲಿ ಬಿಜೆಪಿಯ ಬೆಳವಣಿಗೆಗೆ ನಂದ ಕುಮಾರ್ ಸಿಂಗ್ ಚೌಹ್ವಾಣ್ ಮುಖ್ಯ ಕಾರಣರಾಗಿದ್ದರು. ಸಂಸತ್ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದ ರೀತಿಯಿಂದಲೂ ಅವರು ಎಂದಿಗೂ ನಮ್ಮ ಸ್ಮರಣೆಯಲ್ಲಿ ಇರುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ನಂದು ಭಯ್ಯಾ ಎಂದೇ ಹೆಸರು ಗಳಿಸಿದ್ದ ಸಂಸದ ನಂದ ಕುಮಾರ್ ಸಿಂಗ್ ಚೌಹಾಣ್ ಅವರ ನಿಧನಕ್ಕೆ ಅಶ್ರುತರ್ಪಣ ಮಿಡಿದಿದ್ದಾರೆ. ‘ಓರ್ವ ಉದಾತ್ತ ಮತ್ತು ಆದರ್ಶ ನಾಯಕನನ್ನು ಬಿಜೆಪಿ ಕಳೆದುಕೊಂಡಿದೆ’ ಎಂದು ವ್ಯಾಖ್ಯಾನಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದಲ್ಲಿ ಪಕ್ಷದ ಪಾಲಿನ ಓರ್ವ ಪ್ರಬಲ ಸಂಘಟಕರಾಗಿದ್ದ ಸಂಸದ ನಂದ ಕುಮಾರ್ ಸಿಂಗ್ ಚೌಹಾಣ್ ಅವರ ಸಾವಿನಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಇಂದು ನಂದ ಕುಮಾರ್ ಸಿಂಗ್ ಚೌಹಾಣ್ ಅವರ ಮೃತದೇಹವನ್ನು ಬಿಜೆಪಿ ಕಚೇರಿಯ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು. ನಾಳೆ ಅವರ ಸ್ವಗ್ರಾಮದಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ : ಟಿಎಂಸಿ ಸೇರಿದ ಪತ್ನಿಗೆ ಬಿಜೆಪಿ ಸಂಸದನಿಂದ ವಿಚ್ಛೇದನದ ಬೆದರಿಕೆ

ಆಸ್ಪತ್ರೆ‌ ಬೆಡ್‌ನಿಂದ ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದೇನು ಗೊತ್ತೇ?

Published On - 11:38 am, Tue, 2 March 21