ಟಿಎಂಸಿ ಸೇರಿದ ಪತ್ನಿಗೆ ಬಿಜೆಪಿ ಸಂಸದನಿಂದ ವಿಚ್ಛೇದನದ ಬೆದರಿಕೆ
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ, ಸೌಮಿತ್ರ ಖಾನ್ಗೆ ಬಂಕೂರ್ ಜಿಲ್ಲೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಆಗ ಪತಿ ಪರ ಏಕಾಂಗಿಯಾಗಿ ಪ್ರಚಾರ ನಡೆಸಿದ ಸುಜಾತ ಮಂಡಲ್ ಖಾನ್, ಪತಿ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಏರಿಳಿತದಿಂದಾಗಿ ಈಗ ಕೆಲವರ ವೈವಾಹಿಕ ಸಂಬಂಧಕ್ಕೂ ಕುತ್ತು ಬರುವಂತಾಗಿದೆ. ಬಿಜೆಪಿ ನಾಯಕಿ ಸುಜಾತಾ ಮಂಡಲ್ ಖಾನ್ ಟಿಎಂಸಿ ಪಕ್ಷ ಸೇರಿದ ಹಿನ್ನೆಲೆಯಲ್ಲಿ ಸುಜಾತ ಮಂಡಲ್ ಪತಿ, ಪಶ್ಚಿಮ ಬಂಗಾಳದ ಬಿಜೆಪಿ ಲೋಕಸಭಾ ಸದಸ್ಯ ಸೌಮಿತ್ರ ಖಾನ್ ಪತ್ನಿಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ, ಸೌಮಿತ್ರ ಖಾನ್ಗೆ ಬಂಕೂರ್ ಜಿಲ್ಲೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಆಗ ಪತಿ ಪರ ಏಕಾಂಗಿಯಾಗಿ ಪ್ರಚಾರ ನಡೆಸಿದ ಸುಜಾತ ಮಂಡಲ್ ಖಾನ್, ಪತಿ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದರು. ಈಗ ಸುಜಾತಾ ಮಂಡಲ್ ಖಾನ್ ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ. ಸೌಮಿತ್ರ ಖಾನ್ ಪತ್ನಿಗೆ ವಿಚ್ಛೇದನ ನೀಡುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭ ಹತ್ತಕ್ಕೂ ಹೆಚ್ಚು ಶಾಸಕರು, ಒಬ್ಬರು ಎಂಪಿ, ಓರ್ವ ಮಾಜಿ ಎಂಪಿ ಸಹಿತ ಹಲವು ಟಿಎಂಸಿ ಕಾರ್ಯಕರ್ತರು ಬಿಜೆಪಿ ಸೇರಿದ್ದರು. ಪಶ್ಚಿಮ ಬಂಗಾಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಪಕ್ಷ ರಾಜಕೀಯ ಈಗ ಪತಿ- ಪತ್ನಿ ಸಂಬಂಧಕ್ಕೂ ತೊಡಕುಂಟುಮಾಡಿದೆ.
ಪಶ್ಚಿಮ ಬಂಗಾಳ: ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಅಧಿಕಾರಿ, 11 ಶಾಸಕರು, 1 ಎಂಪಿ ಬಿಜೆಪಿ ಸೇರ್ಪಡೆ
Published On - 6:00 pm, Mon, 21 December 20