Grammys 2021: ರೈತರಿಗೆ ಬೆಂಬಲ ಎಂದು ಬರೆದ ಮಾಸ್ಕ್ ಧರಿಸಿ 63ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾದ ಖ್ಯಾತ ಯುಟ್ಯೂಬರ್ ಲಿಲ್ಲೀ ಸಿಂಗ್
Lilly Singh in Grammys 2021: ಕೆಂಪು ಹಾಸಿನ, ಪ್ರಶಸ್ತಿ ಸಮಾರಂಭದ ಫೋಟೊಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂದು ನನಗೆ ಗೊತ್ತಿದೆ. ಮಾಧ್ಯಮದವರೇ ಇಲ್ಲಿ ನೋಡಿ, #IStandWithFarmers #GRAMMY ಎಂಬ ಹ್ಯಾಷ್ ಟ್ಯಾಗ್ ಬಳಸಿ ಲಿಲ್ಲೀ ಸಿಂಗ್ ತಮ್ಮ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ ಮಾರ್ಚ್ 14ರಂದು ನಡೆದ 63ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಕಾಮಿಡಿಯನ್-ಯುಟ್ಯೂಬರ್ ಲಿಲ್ಲೀ ಸಿಂಗ್ ‘I Stand With Farmers’ ಎಂದು ಬರೆದಿರುವ ಮಾಸ್ಕ್ ಧರಿಸಿ ಭಾಗಿಯಾಗಿದ್ದಾರೆ. ಕಪ್ಪು ಬಣ್ಣದ ಮಾಸ್ಕ್ ನಲ್ಲಿ ರೈತರಿಗೆ ಬೆಂಬಲ ಸೂಚಿಸುತ್ತೇನೆ ಎಂದು ಬರೆದಿದ್ದು, ಈ ಫೋಟೊವನ್ನು ಲಿಲ್ಲೀ ಟ್ವೀಟ್ ಮಾಡಿದ್ದಾರೆ. ಕೆಂಪು ಹಾಸಿನ, ಪ್ರಶಸ್ತಿ ಸಮಾರಂಭದ ಫೋಟೊಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂದು ನನಗೆ ಗೊತ್ತಿದೆ. ಮಾಧ್ಯಮದವರೇ ಇಲ್ಲಿ ನೋಡಿ, #IStandWithFarmers #GRAMMY ಎಂಬ ಹ್ಯಾಷ್ ಟ್ಯಾಗ್ ಬಳಸಿ ಲಿಲ್ಲೀ ಸಿಂಗ್ ತಮ್ಮ ಫೋಟೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಗತ್ತಿನ ಅತಿ ದೊಡ್ಡ ಸಂಗೀತ ಕಲಾವಿದರು ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು , ಜಗತ್ತಿನಾದ್ಯಂತ ಸಾವಿರಾರು ಮಂದಿ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಲಿಲ್ಲೀ ಸಿಂಗ್ ಅವರ ಪೋಸ್ಟಿಗೆ ರೂಪದರ್ಶಿ ಅಮಂಡಾ ಸೆರ್ನಿ, WWE ಕುಸ್ತಿಪಟು ಸುನಿಲ್ ಸಿಂಗ್, ನಟಿ ಶ್ರುತಿ ಸೇತ್ ಕಾಮೆಂಟ್ ಮಾಡಿದ್ದಾರೆ. ಲಿಲ್ಲೀ ಸಿಂಗ್ ಜತೆ ಗಾಯಕ ಜೇ ಸೀನ್ , ವ್ಲೋಗರ್ ಅಮಂಡಾ ಸೆರ್ನಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
I know red carpet/award show pictures always get the most coverage, so here you go media. Feel free to run with it ✊? #IStandWithFarmers #GRAMMYs pic.twitter.com/hTM0zpXoIT
— Lilly // #LateWithLilly (@Lilly) March 15, 2021
Respect!!!! https://t.co/M9aFHjsYUs
— Shruti Seth (@SethShruti) March 15, 2021
ಗ್ರ್ಯಾಮಿ ಸಮಾರಂಭದಲ್ಲಿ ರೈತರ ಪ್ರತಿಭಟನೆ ಪರ ದನಿಯೆತ್ತಿದಕ್ಕೆ ಲಿಲ್ಲೀ ಸಿಂಗ್ ಅವರನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ಶ್ಲಾಘಿಸಿದ್ದಾರೆ.
???????? @Lilly taking the Indian #FarmersProtests to the #GRAMMYs https://t.co/wxCd2WXPnn
— Swara Bhasker (@ReallySwara) March 15, 2021
ಫೆಬ್ರವರಿ ತಿಂಗಳಾರಂಭದಲ್ಲಿ ಖ್ಯಾತ ಪಾಪ್ ತಾರೆ ರಿಹಾನ್ನಾ ದೆಹಲಿ ಗಡಿಭಾಗದಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಮಾಡಿದ ಟ್ವೀಟ್ ಸಂಚಲನ ಸೃಷ್ಟಿಸಿತ್ತು. ರೈತರ ಪರವಾಗಿ ದನಿಯೆತ್ತಿದ್ದಕ್ಕೆ ಧನ್ಯವಾದಗಳು ಎಂದು ಲಿಲ್ಲೀ ಸಿಂಗ್ ರಿಹಾನ್ನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದರು. ತುಂಬಾ ಧನ್ಯವಾದಗಳು. ಇದು ಮಾನವೀಯತೆಯ ವಿಷಯ. #IstandWithFarmers ಎಂದು ಲಿಲ್ಲೀ ಸಿಂಗ್ ಟ್ವೀಟ್ ಕಾಮೆಂಟ್ ಮಾಡಿದ್ದರು.
View this post on Instagram
ಅಮಾಂಡ ಸೆರ್ನಿ ಅವರು ಪ್ರತಿಭಟನೆ ನಿರತ ಮಹಿಳಾ ರೈತರ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಜಗತ್ತು ನೋಡುತ್ತಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ನೀವು ಭಾರತೀಯರು ಅಥವಾ ಪಂಜಾಬಿಗಳು ಅಥವಾ ದಕ್ಷಿಣ ಏಷ್ಯಾದವರೇ ಆಗಿರಬೇಕು ಎಂದೇನಿಲ್ಲ. ಮಾನವೀಯತೆ ಎಂಬುದನ್ನು ನೀವು ಅರ್ಥ ಮಾಡಿಕೊಂಡರಷ್ಟೇ ಸಾಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಮಾನವೀಯತೆ, ನಾಗರಿಕ ಹಕ್ಕು- ಕಾರ್ಮಿಕರಿಗೆ ಸಮಾನತೆ ಮತ್ತು ಘನತೆ ಬಗ್ಗೆ ಸದಾ ಬೇಡಿಕೆಯೊಡ್ಡುತ್ತಲೇ ಇರಿ #FarmersProtest #internetshutdown ಎಂದು ಬರೆದಿದ್ದರು.
ಯಾರು ಈ ಲಿಲ್ಲೀ ಸಿಂಗ್? ಕೆನಡಾದ ಯುಟ್ಯೂಬರ್, ಕಾಮಿಡಿಯನ್, ಟಾಕ್ ಶೋ ನಿರೂಪಕಿ, ನಟಿ ಆಗಿದ್ದಾರೆ ಲಿಲ್ಲೀ ಸಿಂಗ್. ಟೊರಂಟೊಲ್ಲಿ ಹುಟ್ಟಿ ಬೆಳೆದ ಲಿಲ್ಲೀ 2010ರಲ್ಲಿ ಯುಟ್ಯೂಬ್ ವಿಡಿಯೊಗಳನ್ನು ಮಾಡಲು ಆರಂಭಿಸಿದ್ದರು, 2016ರಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಆದಾಯಗಳಿಸುವ ಯುಟ್ಯೂಬರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಲಿಲ್ಲೀ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಇದನ್ನೂ ಓದಿ: ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್
India Together ಹ್ಯಾಷ್ಟ್ಯಾಗ್ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್
Published On - 1:43 pm, Mon, 15 March 21