ಮ್ಯಾನ್ಮಾರ್: ಭುಗಿಲೆದ್ದ ಹಿಂಸೆಗೆ 40 ಬಲಿ, ಚೀನಾ ಆರ್ಥಿಕ ನೆರವಿನ ಕೈಗಾರಿಕೆಗಳಿಗೆ ಬೆಂಕಿ, ಅಂಗ್​ ಸಾನ್​ ಸೂಕಿ ಇಂದು ಕೋರ್ಟ್​ಗೆ

Protests in Myanmar: ಈ ಹಿಂದೆ ಮ್ಯಾನ್ಮಾರ್​ನಲ್ಲಿ ವಸಾಹತುಶಾಹಿ ಆಡಳಿತ ನಡೆಸುತ್ತಿದ್ದ ಬ್ರಿಟನ್​ ಸಹ ಅಲ್ಲಿನ ಹಾಲಿ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಕ್ಷಣ ಹಿಂಸಾಚಾರ ಕೊನೆಗಾಣಿಸಿ, ಚುನಾಯಿತ ಸರ್ಕಾರ ಸ್ಥಾಪಿಸುವಂತೆ ಸೇನಾಡಳಿತಕ್ಕೆ ಕರೆಕೊಟ್ಟಿದೆ.

ಮ್ಯಾನ್ಮಾರ್: ಭುಗಿಲೆದ್ದ ಹಿಂಸೆಗೆ 40 ಬಲಿ, ಚೀನಾ ಆರ್ಥಿಕ ನೆರವಿನ ಕೈಗಾರಿಕೆಗಳಿಗೆ ಬೆಂಕಿ, ಅಂಗ್​ ಸಾನ್​ ಸೂಕಿ ಇಂದು ಕೋರ್ಟ್​ಗೆ
ಮ್ಯಾನ್ಮಾರ್: ಭುಗಿಲೆದ್ದ ಹಿಂಸೆಗೆ 40 ಮಂದಿ ಸಾವು, ಚೀನಾ ಆರ್ಥಿಕ ನೆರವಿನ ಕೈಗಾರಿಕೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
Follow us
ಸಾಧು ಶ್ರೀನಾಥ್​
|

Updated on:Mar 15, 2021 | 5:40 PM

ಮ್ಯಾನ್ಮಾರ್: ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೂ, ಜನಪ್ರಿಯ ನಾಯಕಿ ಅಂಗ್​ ಸಾನ್​ ಸೂಕಿ ಅವರನ್ನು ಸಿಪಾಯಿ ದಂಗೆಯಲ್ಲಿ ದಿಢೀರನೆ ಅಧಿಕಾರದಿಂದ ಕೆಳಗಿಳಿಸಿದ ಅಲ್ಲಿನ ಮಿಲಿಟರಿ ಆಡಳಿತದ ವಿರುದ್ಧ ಜನ ದಂಗೆಯೇಳುವುದು ಇನ್ನೂ ನಿಂತಿಲ್ಲ. ಕಳೆದ ಫೆಬ್ರವರಿ 1 ರಂದು ಆರಂಭವಾಗಿ ದಿನೇ ದಿನೆ ಮ್ಯಾನ್ಮಾರ್​ನಲ್ಲಿ ಹಿಂಸಾಚಾರ ಎಲ್ಲೆಮೀರಿದೆ. ಅದೀಗ ಚೀನಾ ವಿರೋಧಿ ಆಕ್ರೋಶವಾಗಿ ಪರಿವರ್ತನೆಗೊಂಡಿದೆ.

ತಾಜಾ ಬೆಳವಣಿಗೆಗಳಲ್ಲಿ ಮ್ಯಾನ್ಮಾರ್​​ನಲ್ಲಿ ಭುಗಿಲೆದ್ದ ಹಿಂಸೆಗೆ ಭಾನುವಾರ 40 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಸೇನಾ ಪಡೆಗಳ ಅತಿರೇಕದಿಂದ ಪ್ರಮುಖ ಕೈಗಾರಿಕಾ ನಗರದಲ್ಲಿ 22 ಮಂದಿ ಅಸುನೀಗಿದ್ದಾರೆ ಚೀನಾ ಆರ್ಥಿಕ ನೆರವಿನ ಕೈಗಾರಿಕೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತನ್ಮೂಲಕ ಸೇನಾ ಆಡಳಿತವನ್ನು ಹೊರಹಾಕಲು ಸಾಂಕೇತಿಕವಾಗಿಯೂ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಪ್ರಮುಖ ಕೈಗಾರಿಕಾ ನಗರ ಹಯಿಂಗತಾಯಾದಲ್ಲಿ (Hlaingthaya) ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಚೀನಾ ಸಿಬ್ಬಂದಿ ಹೆಚ್ಚಾಗಿ ಪೆಟ್ಟು ತಿಂದಿದ್ದಾರೆ. ರಸಗೊಬ್ಬರ ಕಾರ್ಖಾನೆ ಮತ್ತು ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ತನ್ನ ಜನರನ್ನು ಮತ್ತು ಆಸ್ತಿಪಾಸ್ತಿಯನ್ನು ಸಂರಕ್ಷಿಸುವಂತೆ ಚೀನಾ ದೂತವಾಸ ಕಚೇರಿಯು ಸೇನೆಗೆ ಮೊರೆಯಿಟ್ಟಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಇನ್ನೇನು ಅಧಿಕಾರದ ಗದ್ದುಗೆಯೇರಬೇಕೆನ್ನುವಾಗ ಅಂಗ್​ಸಾನ್​ ಸೂಕಿಗೆ ಅವರನ್ನು ಅಧಿಕಾರ ವಂಚಿತರನ್ನಾಗಿಸುವಲ್ಲಿ ಸಿಪಾಯಿ ದಂಗೆ ಯಶಸ್ವಿಯಾಗಿತ್ತು. ಇದಕ್ಕೆ ಚೀನಾ ಸಹಕಾರ ನೀಡಿದೆ ಎಂಬುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಮ್ಯಾನ್ಮಾರ್​ನ ಮತ್ತೊಂದು ಪ್ರಮುಖ ಆರ್ಥಿಕ ಚಟುವಟಿಕೆ ಕೇಂದ್ರವಾದ ಯಾಂಗೋನ್ (Yangon)ನಲ್ಲಿಯೂ ಹಿಂಸಾಚಾರ ಹೆಚ್ಚಾಗಿದೆ. ಸದ್ಯಕ್ಕೆ 2-3 ಫ್ಯಾಕ್ಟರಿಗಳನ್ನು ನಾಶಗೊಳಿಸಿದ್ದೇವೆ. ಚೀನಾ ಫ್ಯಾಕ್ಟರಿಗಳು ಮ್ಯಾನ್ಮಾರ್​ನಲ್ಲಿ ಬಿಸಿನೆಸ್​ ಮಾಡಬೇಕು ಅಂತಿದ್ದರೆ ಮೊದಲು ಮ್ಯಾನ್ಮಾರ್​ ಜನತೆಯ ಭಾವನೆಗಳನ್ನು ಗೌರವಿಸಿ. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸ್ಥಳೀಯರು ಚೀನಾ ವಿರುದ್ಧ ಗುಡುಗಿದ್ದಾರೆ.

ಭಾನುವಾರ ನಡೆದಿರುವ ಹಿಂಸಾಚಾರವು ತೀವ್ರವಾಗಿದೆ. ಮ್ಯಾನ್ಮಾರ್​ ಸೇನಾ ಆಡಳಿತವು ತಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಭಟನಾನಿರತರನ್ನು ಶಿಕ್ಷಿಸಬೇಕು. ಚೀನಾದ ಕಂಪನಿಗಳು ಮತ್ತು ಚೀನಾ ಜನತೆಯ ಸುರಕ್ಷತೆ ಕಾಪಾಡಬೇಕು ಎಂದು ಚೀನಾ ದೂತವಾಸ ಮ್ಯಾನ್ಮಾರ್​ ಆಡಳಿತವನ್ನು ಆಗ್ರಹಿಸಿದೆ. ಗಮನಾರ್ಹವೆಂದರೆ ಮ್ಯಾನ್ಮಾರ್​ ಸೇನಾ ದಂಗೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧಿಸಿದ್ದರೆ ಚೀನಾ ಮಾತ್ರ ಸೇನಾಡಳಿತವನ್ನು ಬೆಂಬಲಿಸಿದೆ.

ವಿಶ್ವಸಂಸ್ಥೆಯ ವಿಶೇಷಾಧಿಕಾರಿ ಮ್ಯಾನ್ಮಾರ್​ ನಲ್ಲಿನ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೇನಾಡಳಿತದ ಪೈಶಾಚಿಕತೆ ಬಗ್ಗೆ ನೇರವಾಗಿ ನಾನು ಕೇಳಿ ತಿಳಿದುಕೊಂಡಿದ್ದೇನೆ ಎಂದು ಕ್ರಿಸ್ಟೈನ್ ಷಾರ್ನರ್ ಬರ್ಗೆನರ್​ ಪ್ರತಿಕ್ರಿಯಿಸಿದ್ದಾರೆ. ಮ್ಯಾನ್ಮಾರ್​ ಜನತೆಗೆ ಬೆಂಬಲ ಸೂಚಿಸುವ ಅಗತ್ಯವಿದೆ. ಅವರ ಪ್ರಜಾತಾಂತ್ರಿಕ ನಿಲುವುಗಳನ್ನು ಗೌರವಿಸುವ ಅಗತ್ಯವಿದೆ ಎಂದು ಕ್ರಿಸ್ಟೈನ್ ಷಾರ್ನರ್ ಬರ್ಗೆನರ್​ ಅವರು ಅಂತಾರಾಷ್ಟ್ರೀಯ ಸಮುದಾಯದವನ್ನೂ ಕೋರಿದ್ದಾರೆ. ಈ ಹಿಂದೆ ಮ್ಯಾನ್ಮಾರ್​ನಲ್ಲಿ ವಸಾಹತುಶಾಹಿ ಆಡಳಿತ ನಡೆಸುತ್ತಿದ್ದ ಬ್ರಿಟನ್​ ಸಹ ಅಲ್ಲಿನ ಹಾಲಿ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಕ್ಷಣ ಹಿಂಸಾಚಾರ ಕೊನೆಗಾಣಿಸಿ, ಚುನಾಯಿತ ಸರ್ಕಾರ ಸ್ಥಾಪಿಸುವಂತೆ ಸೇನಾಡಳಿತಕ್ಕೆ ಕರೆಕೊಟ್ಟಿದೆ.

ನವೆಂಬರ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಂಗ್​ಸಾನ್​ ಸೂಕಿ ಜಯಗಳಿಸಿದ್ದರು. ಆದರೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ. ಅದರಿಂದ ಅಂಗ್​ಸಾನ್​ ಸೂಕಿ ಅಧಕಾರಕ್ಕೆ ಏರಲು ಬಯಿಸಿದರು ಎಂಬುದು ಸೇನೆಯ ವಾದವಾಗಿದೆ. ಆದರೆ ಮ್ಯಾನ್ಮಾರ್ ಚುನಾವಣಾ ಆಯೋಗ ಅದನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ. ಅಂಗ್​ಸಾನ್​ ಸೂಕಿ ಇದೀಗ ಮತ್ತೆ ಸೇನಾ ದಿಗ್ಬಂಧನದಲ್ಲಿದ್ದಾರೆ. ಇಂದು ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:  ಕೊರೊನಾ ಮಧ್ಯೆಯೂ ಚುನಾವಣೆ ನಡೆಸಿದ್ದ ಸೂಕಿ! ಮ್ಯಾನ್ಮಾರ್​ನಲ್ಲಿ ಫಲಿತಾಂಶಕ್ಕೆ ಕ್ಷಣಗಣನೆ..

Published On - 5:38 pm, Mon, 15 March 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ