ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಅನುಕೂಲಕರ ದಿನವಾಗಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ, ಸೋಮವಾರ ನಿಷ್ಪಕ್ಷಪಾತ ಮಾತು, ಶತ್ರುಗಳಿಂದ ಜಯ, ಸ್ಪರ್ಧೆಯಲ್ಲಿ ತೊಡಗುವಿಕೆ, ಅಪಾಯದ ಸೂಚನೆ ಇವೆಲ್ಲ ಈ ದಿನದ ವಿಶೇಷ. ನೂತನ ವರ್ಷದ ಮೊದಲ ದಿನದ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದ್ವಿತೀಯಾ / ತೃತೀಯಾ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 06:30 am, ಸೂರ್ಯಾಸ್ತ – 06:43 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:02 – 09:33, ಯಮಘಂಡ ಕಾಲ 11:05 – 12:37, ಗುಳಿಕ ಕಾಲ 14:09 – 15:40
ತುಲಾ ರಾಶಿ: ಪ್ರಭಾವಿಗಳ ಪರಿಣಾಮವನ್ನು ಕೂಡಲೇ ಕಂಡುಕೊಳ್ಳಲಾಗದು. ಇಂದು ಉಂಟಾದ ನಿಮ್ಮ ಹಣಕಾಸಿನ ಸಮಸ್ಯೆಯು ಯಾರಿಂದಲೋ ಬಗೆಹರಿಯುತ್ತವೆ. ನಿಮ್ಮ ಇಚ್ಛೆಯನ್ನು ಪೂರ್ಣ ಮಾಡಿಕೊಳ್ಳುವಿರಿ. ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭಾವನೆಗಳಲ್ಲಿ ಬರುವ ಮೂಲಕ ನೀವು ಹಾನಿ ಮಾಡಬಹುದು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಲಿದೆ. ನಿಮ್ಮ ಕಾರ್ಯ ಸಾಮರ್ಥ್ಯದ ಆಧಾರದ ಮೇಲೆ, ನೀವು ಯಾವುದೇ ಪ್ರಮುಖ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ನೀವು ಅನಿರೀಕ್ಷಿತವಾಗಿ ಕೆಲವು ದೊಡ್ಡ ಯೋಜನೆಗಳನ್ನು ಪಡೆಯಬಹುದು. ನೀವು ಸ್ವೀಕರಿಸುವ ಆಹಾರವು ವಿರುದ್ಧ ಪರಿಣಾಮವನ್ನು ನೀಡುವುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ.
ವೃಶ್ಚಿಕ ರಾಶಿ: ಸೇವಾ ಕಾರ್ಯಕ್ಕೆ ಯಾರ ಹೊಗಳಿಕೆಯೂ ಬರದು, ಇದರಿಂದ ಬೇಸರವಾದರೂ ನೀವೇ ಸಮಾಧಾನವಾಗಬೇಕಾಗುವುದು. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿರುವುದು. ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೀರಿ. ಹೊಸದನ್ನು ಮಾಡಲು ಯೋಚಿಸುವಿರಿ. ನಿಮ್ಮೊಳಗಿನ ಹೊಸ ಶಕ್ತಿಯ ಪರಿಣಾಮವನ್ನು ನೀವು ಅನುಭವಿಸುವಿರಿ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಅನುಕೂಲಕರ ದಿನವಾಗಿದೆ. ಆತುರದ ನಿರ್ಧಾರದಿಂದಾಗಿ ನೀವೇ ಹಾನಿ ಮಾಡಿಕೊಳ್ಳಬಹುದು. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ದೋಷಗಳನ್ನು ಪರಿಶೀಲಿಸಬಹುದು. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ.
ಧನು ರಾಶಿ: ಕಾಲಕ್ಕೆ ತಕ್ಕಂತೆ ಪರಿವರ್ತನೆ ಆಗಬೇಕಾಗುವುದು. ಇಂದು ಅವಿವಾಹಿತರು ವಿವಾಹದ ಬಗ್ಗೆ ಅಧಿಕ ಚಿಂತಿತರಾಗುವರು. ನಿಮ್ಮ ವೇತನದ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡುವಿರಿ. ವಿಪರೀತ ಬುದ್ಧಿಯನ್ನು ಅಲ್ಪರ ಮೇಲೆ ಪ್ರಯೋಗಿಸುವಿರಿ. ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದರಿಂದ, ಶೀಘ್ರದಲ್ಲೇ ವಿಷಯಗಳು ಸಾಮಾನ್ಯವಾಗುತ್ತವೆ. ಕೆಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಸಮಸ್ಯೆಗೆ ಇಂದು ಸ್ವಲ್ಪ ಪರಿಹಾರ ದೊರೆಯಲಿದೆ. ಮಕ್ಕಳ ಗಮನವೂ ಅವರ ಅಧ್ಯಯನದ ಕಡೆಗೆ ಇರುತ್ತದೆ. ನಿಮ್ಮ ಮಾತುಗಳು ಇತರರಿಗೆ ಇಷ್ಟವಾಗುವುದು. ಸಮಾರಂಭದಲ್ಲಿ ಭಾಗವಹಿಸಿ ಅನೇಕ ಅಪರೂಪದ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಹುಸಿ ಕೋಪವೂ ಕೆಲಸಮಾಡಲಿದೆ. ಇಂದು ನೀವಂದುದುಕೊಂಡಷ್ಟು ಸಫಲತೆಯನ್ನು ಸಾಧಿಸಲಿದ್ದೀರಿ. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು.
ಮಕರ ರಾಶಿ: ಹಿರಿಯರ ನೋವಿಗೆ ಸ್ಪಂದನೆ ನೀಡುವಿರಿ. ನೀವು ಇಂದು ನಿಮ್ಮ ಕಾರ್ಯಗಳು ಅನುಭವ ರಹಿತವಾಗಿ ಇರಬಹುದು. ಇದು ನಿಮ್ಮ ಕಾರ್ಯವನ್ನು ಅಸಹಜವಾಗಿ ಪೂರೈಸುವುದು. ಪೂರ್ಣ ಶ್ರದ್ಧೆಯಿಂದ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಕುಶಲ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು. ಯಾವುದೇ ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಆದ್ದರಿಂದ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಇರಿಸಿ. ಯಾವುದೇ ವ್ಯಕ್ತಿಯೊಂದಿಗೆ ಚರ್ಚಿಸುವಾಗ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಬೇಡಿ. ಸುವಸ್ತುವಿನ ದಾನದಿಂದ ಕಾರ್ಯದ ಅಡೆತಡೆಗಳು ದೂರಾಗುವುದು. ನಿಮ್ಮ ಬಗ್ಗೆ ನೀವು ಹೆಚ್ಚು ಗಮನ ಕೊಡುವಿರಿ. ಭೋಗವಸ್ತುಗಳಿಂದ ಅಧಿಕ ಸಂತೋಷವಾಗಲಿದೆ. ಇಂದು ದೂರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು.
ಕುಂಭ ರಾಶಿ: ಪ್ರಾಮಾಣಿಕತೆಯಿಂದ ನಿಷ್ಪ್ರಯೋಜನ ಎನಿಸುವುದು. ಇಂದು ನಿಮ್ಮ ಮಕ್ಕಳ ಯಶಸ್ಸು ನಿಮಗೆ ಸಂತೋಷವನ್ನು ಕೊಡಬಹುದು. ನಿಮ್ಮ ಪ್ರಮುಖ ವ್ಯಾಪಾರ ಸಂಪರ್ಕಗಳನ್ನು ಅಭಿವೃದ್ಧಿ ಮಾಡಿಕೊಳ್ಳುವಿರಿ. ಸಮತೋಲಿತ ಚಿಂತನೆಯು ಮುಖ್ಯ ಕಾರ್ಯವನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ನೀವು ಸಾಮಾಜಿಕ ಚಟುವಟಿಕೆಗಳಿಗೆ ನಿಮ್ಮದಾದ ಕೊಡುಗೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ವರ್ತನೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಪ್ರಾಣಿಗಳ ಒಡನಾಟದಿಂದ ಅಲ್ಪಕಾಲ ಒತ್ತಡ ಮುಕ್ತರಾಗುವಿರಿ. ಆಡಿದ ಮಾತಿಗೆ ಅನಂತರ ಪಶ್ಚಾತ್ತಾಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು.
ಮೀನ ರಾಶಿ: ಇಂದು ನಿಮ್ಮ ಪ್ರತಿಸ್ಪರ್ಧಿಯ ಎದುರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಆಲಸ್ಯದಿಂದ ಪ್ರಮುಖ ಕಾರ್ಯಗಳು ಪೂರ್ಣವಾಗದೇ ಹಾಗೆಯೇ ಉಳಿದುಕೊಳ್ಳುವುದು. ನಿಮ್ಮ ಯಾವುದೇ ಕನಸುಗಳನ್ನು ನನಸಾಗಿಸಲು ಆತ್ಮವಿಶ್ವಾಸದ ಜೊತೆ ಕಠಿಣ ಪರಿಶ್ರಮವೂ ಅಗತ್ಯ. ನಿಮಗೆ ಯಾರನ್ನು ದ್ವೇಷಿಸಲೂ ಬಲವಾದ ಕಾರಣ ಇರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸುವ ಬಯಕೆ ಇರಲಿದೆ. ಕೆಲವು ಪ್ರಮುಖ ವ್ಯಕ್ತಿಗಳ ಯಶಸ್ಸು ನಿಮಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ನಿರಂತರ ಓಡಾಟದಲ್ಲಿರುಬ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರವಾಗಲಿದೆ. ನಿಮಗೆ ಯಾವುದರೂ ಅನವಶ್ಯಕ ಖರ್ಚು ಎಂದು ಕಂಡರೆ ಹೇಗಾದರೂ ಮಾಡಿ ನಿಲ್ಲಿಸುವಿರಿ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ಬಂಧನದಂತೆ ಅನ್ನಿಸಬಹುದು. ಅಪರಿಚಿತರ ಜೊತೆ ಸಲುಗೆ ಬೇಡ. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಇನ್ನೊಬ್ಬರಿಗೂ ಸಂತೋಷವಾಗುವಂತೆ ಇರುವಿರಿ.